ಇಪಿಎಲ್: ರೆಡ್ ಡೆವಿಲ್ ಸೋಲಿಸಲು ಸಜ್ಜಾದ ಆರ್ಸೆನಲ್

Posted By:
Subscribe to Oneindia Kannada

ಮ್ಯಾಂಚೆಸ್ಟರ್, ನವೆಂಬರ್ 18: ಇಂಗ್ಲೀಷ್ ಪ್ರೀಮಿಯರ್ ಲೀಗ್(ಇಪಿಎಲ್) ನ 13ನೇ ವಾರದಲ್ಲಿ ಎರಡು ದಿಗ್ಗಜ ತಂಡಗಳ ಕಾಳಗಕ್ಕೆ ಮೈದಾನ ಸಜ್ಜಾಗಿದೆ.

ನವೆಂಬರ್ 19ರ ಶನಿವಾರ ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಆರ್ಸೆನಲ್ ವಿರುದ್ಧದ ಪಂದ್ಯವನ್ನು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

EPL: Manchester United Vs Arsenal - Preview, team news, predicted line-ups

ಮ್ಯಾಂಚೆಸ್ಟರ್ ಯುನೈಟೆಡ್ ನ ಮ್ಯಾನೇಜರ್ ಜೋಸ್ ಮಾರಿನ್ಹೋ ಹಾಗೂ ಆರ್ಸೆನಲ್ ನ ಆರ್ಸೆನೆ ವೆಂಜರ್ ಅವರು ತಮ್ಮ ಹಳೆ ವೈರತ್ವವನ್ನು ಮುಂದುವರೆಸಿ ತಮ್ಮಮ್ಮ ತಂಡಗಳ ಗೆಲುವಿಗಾಗಿ ರಣತಂತ್ರ ಹೆಣೆಯುತ್ತಿದ್ದಾರೆ.

ಈ ಹಿಂದೆ ಚೆಲ್ಸಿಯಾ ತಂಡದ ಮ್ಯಾನೇಜರ್ ಆಗಿದ್ದ ಜೋಸ್ ವಿರುದ್ಧ 2014ರಲ್ಲಿ ನಡೆದ ಪಂದ್ಯದ ವೇಳೆ ಆರ್ಸೆನೆ ವೆಂಜರ್ ತೀವ್ರವಾಗಿ ಮಾತಿನ ಚಕಮಕಿ ನಡೆಸಿದ್ದು ಇನ್ನೂ ಫ್ಯಾನ್ಸ್ ಮರೆತ್ತಿಲ್ಲ.

ತಂಡದ ವರದಿ: ಮ್ಯಾಂಚೆಸ್ಟರ್ ಪರ ಸ್ಟಾರ್ ಸ್ಟ್ರೈಕರ್ ಜ್ಲಾಟನ್ ಇಬ್ರಹಿಮೊವಿಚ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಬೈಲಿ, ಸ್ಲಾಲಿಂಗ್ ಗಾಯಗೊಂಡಿದ್ದಾರೆ. ಅಂಟೊನಿಯೋ ವಲೆನ್ಸಿಯಾ ಆಡುವುದು ಅನುಮಾನ.ಫೆಲ್ಲಿನಿ ಆಡಬಹುದು.

ಆರ್ಸೆನಲ್ ನಲ್ಲಿ ಸ್ಪಾನೀಷ್ ಆಟಗಾರ ಬೆಲೆರಿನ್ ಗಾಯಗೊಂಡು ಆಡುತ್ತಿಲ್ಲ. ಕಾರ್ಲ್ ಜೆಂಕಿನ್ಸನ್ ಬದಲಿಗೆ ತಂಡ ಸೇರಿದ್ದಾರೆ. ಚಿಲಿಯ ಅಲೆಕ್ಸಿಸ್ ಸ್ಯಾಂಚೇಜ್ ಗಾಯಗೊಂಡರು ಪಂದ್ಯಕ್ಕೆ ಲಭ್ಯರಾಗಿದ್ದಾರೆ. ಉರುಗ್ವೆ ವಿರುದ್ಧ ಎರಡು ಗೋಲು ಬಾರಿಸಿ ಉತ್ತಮ ಲಯದಲ್ಲಿದ್ದಾರೆ.

EPL: Manchester United Vs Arsenal -

ಲೈನ್ ಅಪ್:
ಮ್ಯಾಂಚೆಸ್ಟರ್ (4-2-3-1)
ಗೋಲ್ ಕೀಪರ್ : ಡೆವಿಡ್ ಡೆ ಗಿಯಾ
ಡಿಫೆಂಡರ್ಸ್: ಅಂಟೊನಿಯೊ ವೆಲೆನ್ಸಿಯಾ, ಫಿಲ್ ಜೋನ್ಸ್, ಮಾರ್ಕೊಸ್ ರೊಜೊ, ಡಾಲೇ ಬ್ಲೈಂಡ್
ಮಿಡ್ ಫೀಲ್ಡರ್ಸ್: ಫೆಲ್ಲೈನಿ, ಅಂಡರ್ ಹೆರೆರಾ, ಯುವಾನ್ ಮಟಾ, ಪಾಲ್ ಪೋಗ್ಬಾ, ಅಂಥೋನಿ ಮಾರ್ಷಿಯಲ್
ಸ್ಟೈಕರ್: ಮಾರ್ಕಸ್ ರಷ್ ಫರ್ಡ್

EPL: Manchester United Vs Arsenal -

ಆರ್ಸೆನಲ್ ಎಫ್ ಸಿ
ಗೋಲ್ ಕೀಪರ್ : ಪೀಟ್ರ್ ಚೆಕ್
ಡಿಫೆಂಡರ್ಸ್: ಕಾರ್ಲ್ ಜೆಂಕಿನ್ಸನ್, ಶ್ಕೊಡ್ರಾನ್ ಮುಸ್ತಾಫಿ, ಲಾರೆಂಟ್ ಕೊಶಿಲ್ನಿ, ನಾಚೋ ಮಾನ್ರಿಯಲ್
ಮಿಡ್ ಫೀಲ್ಡರ್ಸ್: ಗ್ರಾನಿಟ್ ಕ್ಸಾಂಕಾ, ಫ್ರಾನ್ಸೀಸ್ ಕೊಯಿಲ್ಲಿನ್, ಅಲೆಕ್ಸ್ ಇವೊಬಿ, ಮೆಸುಟ್ ಓಜಿಲ್, ಥಿಯೋ ವಾಲ್ಕಟ್
ಸ್ಟ್ರೈಕರ್: ಅಲೆಕ್ಸ್ ಸ್ಯಾಂಚೆಜ್

ಪಂಡಿತರ ಭವಿಷ್ಯ:
ಮ್ಯಾಂಚೆಸ್ಟರ್ ಯುನೈಟೆಡ್ 0-2 ಆರ್ಸೆನಲ್
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Manchester United lock horns against rivals Arsenal FC in a crucial game week 13 encounter in the English Premier League, on Saturday, November 19.
Please Wait while comments are loading...