ಇಪಿಎಲ್ 15ನೇ ವಾರ : ಚೆಲ್ಸಿಯಾ ಗೆಲುವಿನ ನಾಗಾಲೋಟ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 12: ಇಂಗ್ಲೀಷ್ ಪ್ರೀಮಿಯರ್ ಲೀಗ್ (ಇಪಿಎಲ್) ನ 15ನೇ ವಾರದಲ್ಲೂ ಚೆಲ್ಸಿಯಾ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ. ವೆಸ್ಟ್ ಬ್ರೋಮ್ ವಿರುದ್ಧ ಏಕೈಕ ಗೋಲಿನಿಂದ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಇನ್ನೊಂದೆಡೆ ಹಾಲಿ ಚಾಂಪಿಯನ್ ಲಿಸೆಸ್ಟರ್ ಸಿಟಿ ಯಾಕೋ ಈ ಸೀಸನ್ ನಲ್ಲಿ ನಿಧಾನಗತಿ ಆಟವಾಡುತ್ತಿದ್ದು ಕೊನೆಗೂ ಗೆಲುವಿನ ಹಾದಿ ಹಿಡಿದಿದ್ದಾರೆ. ಪೆಪ್ ಗಾರ್ಡಿಯೋಲಾ ಅವರ ಮ್ಯಾಂಚೆಸ್ಟರ್ ಸಿಟಿ ಬಲಿಷ್ಠ ತಂಡವನ್ನು ಭರ್ಜರಿಯಾಗಿ ಸೋಲಿಸಿದ ಲಿಸೆಸ್ಟರ್ ಸಿಟಿ ತನ್ನ ಅಭಿಮಾನಿಗಳಿಗೆ ಭರ್ಜರಿ ಆಟದ ಉಡುಗೊರೆ ನೀಡಿತು. ಅದರಲ್ಲೂ ಜಾಮಿ ವಾರ್ಡಿ ಅವರ ಹ್ಯಾಟ್ರಿಕ್ ಗೋಲು ಫೊಕ್ಸ್ ಆಟ ಎಲ್ಲರನ್ನು ಆಕರ್ಷಿಸಿತು.

ಮತ್ತೊಂದು ಮಹತ್ವದ ಪಂದ್ಯದಲ್ಲಿ ಅರ್ಸೆನೆಲ್ ತಂಡ 3-1 ಅಂತರದಿಂದ ಸ್ಟೋಕ್ ಸಿಟಿ ವಿರುದ್ಧ ಜಯ ದಾಖಲಿಸಿ 34 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ.

EPL game week 15: Roundup and results

ಇಂಗ್ಲೀಷ್ ಪ್ರೀಮಿಯರ್ ಲೀಗ್ 15ನೇ ವಾರದ ಫಲಿತಾಂಶ ಹೀಗಿದೆ:
ಡಿಸೆಂಬರ್ 10, ಶನಿವಾರ
* ವಾಟ್ ಫರ್ಡ್ 3-2 ಎವರ್ಟನ್

* ಸ್ವಾನ್ಸೀ 3-0 ಸಂಡರ್ ಲ್ಯಾಂಡ್
* ಬರ್ನ್ಲೇ 3-2 ಬೊರ್ನೆ ಮೌತ್
* ಆರ್ಸೆನಲ್ 3-1 ಸ್ಟೋಕ್ ಸಿಟಿ
* ಹಲ್ ಸಿಟಿ 3-3 ಕ್ರಿಸ್ಟಲ್ ಪ್ಯಾಲೇಸ್
* ಲಿಸೆಸ್ಟೆರ್ ಸಿಟಿ 4-2 ಮ್ಯಾಂಚೆಸ್ಟರ್ ಸಿಟಿ

ಡಿಸೆಂಬರ್ 11, ಭಾನುವಾರ
* ಚೆಲ್ಸಿಯಾ 1-0 ವೆಸ್ಟ್ ಬ್ರೋಮ್

* ಸೌಂಥಾಪ್ಟನ್ 1-0 ಮಿಡ್ಲ್ ಬರೋ
* ಮ್ಯಾಂಚೆಸ್ಟರ್ ಸಿಟಿ 1-0 ಟೊಟೆಂಹ್ಯಾಮ್ ಹಾಟ್ಸ್ ಪುರ್
* ಲಿವರ್ ಪೂಲ್ 2-2 ವೆಸ್ಟ್ ಹ್ಯಾಮ್ ಯುನೈಟೆಡ್

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
English Premier League game week 15: Chelsea remained at the top of the English Premier League (EPL) table as they defeated West Brom by 1-0. Diego Costa scored the only goal of the match.
Please Wait while comments are loading...