ಆಘಾತವೋ ಆಘಾತ, ಮ್ಯಾಂಚೆಸ್ಟರ್ ಕಥೆ ಗೋತಾ!

Posted By:
Subscribe to Oneindia Kannada

ವಾಟ್ ಫರ್ಡ್, ಸೆ. 18: ಇಂಗ್ಲೀಷ್ ಪ್ರೀಮಿಯರ್ ಲೀಗ್ (ಇಪಿಎಲ್) ನ ದಿಗ್ಗಜ ತಂಡ ಮ್ಯಾಂಚೆಸ್ಟರ್ ಯುನೈಟೆಡ್ ಗೆ ಆಘಾತದ ಮೇಲೆ ಆಘಾತ ಉಂಟಾಗಿದೆ. ರೆಡ್ ಡೆವಿಲ್ಸ್ ತಂಡಕ್ಕೆ ಅತಿಥೇಯ ತಂಡ ವಾಟ್ ಫರ್ಡ್ 1-3 ಅಂತರದ ಹೀನಾಯ ಸೋಲಿನ ಕಹಿ ಉಣಿಸಿದೆ.

ವಾಟ್ ಫರ್ಡ್ ಪರ ಇಟಿನ್ನೆ ಕಾಪೋ ಅವರು ಪಂದ್ಯದ 34ನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ನೀಡಿದರು. ಆದರೆ, ಮೊದಲರ್ಧದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಪ್ರಾಬಲ್ಯ ಮೆರೆಯಿತು. ಪಾಲ್ ಪೋಗ್ಬಾ 31 ನೇ ನಿಮಿಷದಲ್ಲಿ 30 ಯಾರ್ಡ್ ದೂರದಿಂದ ಹೊಡೆದ ಕಿಕ್ ಸ್ವಲ್ಪದರಲ್ಲಿ ಗೋಲ್ ಪೋಸ್ಟ್ ಸೇರುವುದರಲ್ಲಿ ತಪ್ಪಿತು.

EPL 2016/17: Watford stun Manchester United 3-1

ದ್ವಿತೀಯಾರ್ಧದಲ್ಲಿ 62ನೇ ನಿಮಿಷದಲ್ಲಿ ಜೋ ಮಾರಿನೋ ತರಬೇತಿಯ ರೆಡ್ ಡೆವಿಲ್ಸ್ ಗಳಿಗೆ ಮೊದಲ ಗೋಲು ಗಳಿಸುವ ಅವಕಾಶ ಸಿಕ್ಕಿತು. ಮಾರ್ಕಸ್ ರಶ್ ಫರ್ಡ್ ಸಮಬಲ ಸಾಧಿಸಿದರು. ತಕ್ಷಣವೇ ಅಂಟೊನಿಯೊ ವಲೆನ್ಸಿಯಾ ಬದಲಿಗೆ ಯುವಾನ್ ಮಟಾರನ್ನು ಮಾರಿನೋ ಕಣಕ್ಕಿಳಿಸಿದರು.

ನಾಯಕ ವೇಯ್ನ್ ರೂನಿ ಯಾವುದೇ ರೀತಿ ಪ್ರಭಾವ ಬೀರಲಿಲ್ಲ. ಸಾಲದ್ದಕ್ಕೆ ಪಂದ್ಯದ 83ನೇ ನಿಮಿಷದಲ್ಲಿ ರಾಬರ್ಟೋ ಪೆರೆಯ್ರಾ ಉತ್ತಮ ಓಟದ ಮೂಲಕ ಮ್ಯಾಂಚೆಸ್ಟರ್ ಡಿಫೆನ್ಸ್ ಒಳಗೆ ನುಗ್ಗಿ ಯುವಾನ್ ಜುನಿಗಾಗೆ ಪಾಸ್ ನೀಡಿದರು. ವಾಟ್ ಫರ್ಡ್ 2-1 ಮುನ್ನಡೆ ಸಾಧಿಸಿತು.

ರೆಡ್ ಡೆವಿಲ್ಸ್ ಗಳ ಸೋಲಿನ ಕಹಿಯನ್ನು ಪೆನಾಲ್ಟಿ ಮೂಲಕ ಹೆಚ್ಚಿಸಲಾಯಿತು. ಫೆಲಾನಿ ಮಾಡಿದ ಪ್ರಮಾದದಿಂದ ಸಿಕ್ಕ ಅವಕಾಶವನ್ನು ಬಳಸಿಕೊಂಡು ಸ್ಟೈಕರ್ ಟ್ರಾಯ್ ಅವರು ಜುನಿಗಾ ಮತ್ತೊಂದು ಗೋಲು ಬಾರಿಸಿದರು.

ಸತತ ಮೂರು ಸೋಲುಗಳನ್ನು ಕಂಡಿರುವ ಮಾರಿನೋ ಅವರ ತಂಡ ಸುಲಭವಾಗಿ ವಾಟ್ ಫರ್ಡ್ ತಂಡಕ್ಕೆ 3 ಅಂಕಗಳ ಕೊಡುಗೆ ನೀಡಿತು. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Watford stun English Premier League giants Manchester United as they beat the Red Devils 3-1 in game week 5 encounter today(September 18).
Please Wait while comments are loading...