ಇಪಿಎಲ್: ಮ್ಯಾಂಚೆಸ್ಟರ್ ಸಿಟಿಗೆ ಸೋಲುಣಿಸಿದ ಲಿವರ್ ಪೂಲ್

Posted By:
Subscribe to Oneindia Kannada

ಬೆಂಗಳೂರು, ಜನವರಿ 02: ಇಂಗ್ಲೀಷ್ ಪ್ರೀಮಿಯರ್ ಲೀಗ್ 19ನೇ ವಾರದ ಫಲಿತಾಂಶದ ನಂತರ ಚೆಲ್ಸಿಯಾ ಇನ್ನಿತರ ತಂಡಗಳಿಗಿಂತ 6 ಅಂಕ ಹೆಚ್ಚಿಗೆ ಪಡೆದುಕೊಂಡು ಅಗ್ರಸ್ಥಾನ ಕಾಯ್ದುಕೊಂಡಿದೆ. ಈ ವಾರದ ಪಂದ್ಯಗಳಲ್ಲಿ ಮ್ಯಾಂಚೆಸ್ಟರ್ ಸಿಟಿ ವಿರುದ್ಧ ಲಿವರ್ ಪೂಲ್ ಏಕೈಕ ಗೋಲಿನಿಂದ ಗೆಲುವು ಸಾಧಿಸಿದ್ದು ಗಮನ ಸೆಳೆಯಿತು.

ಲಿವರ್ ಪೂಲ್ ಪರ ಜಾರ್ಜಿನಿಯೊ ವಿನಾಲ್ಡಮ್ ಏಕೈಕ ಗೋಲು ಬಾರಿಸಿ ತಂಡಕ್ಕೆ ಮಹತ್ವದ 3 ಅಂಕ ಸಂಪಾದಿಸಿದರು. ಲಿವರ್ ಪೂಲ್ ಈಗ 19 ಪಂದ್ಯಗಳಿಂದ 43 ಅಂಕಗಳಿಸಿ ಎರಡನೇ ಸ್ಥಾನಕ್ಕೇರಿದೆ. ಮ್ಯಾಂಚೆಸ್ಟರ್ ಸಿಟಿ ಇದರಿಂದ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದೆ.

English Premier League game week 19: Roundup and results

ಉಳಿದಂತೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಹಿನ್ನಡೆ ಅನುಭವಿಸಿದರೂ ಅಂತಿಮವಾಗಿ ಮಿಡ್ಲ್ಸ್ ಬರೋ ತಂಡವನ್ನು 2-1 ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಅರ್ಸೆನೆಲ್ ತಂಡ 2-0 ಅಂತರದಿಂದ ಕ್ರಿಸ್ಟಲ್ ಪ್ಯಾಲೇಸ್ ವಿರುದ್ಧ ಸುಲಭ ಜಯ ದಾಖಲಿಸಿದೆ.

ಇಂಗ್ಲೀಷ್ ಪ್ರೀಮಿಯರ್ ಲೀಗ್ 19ನೇ ವಾರದ ಫಲಿತಾಂಶ ಹೀಗಿದೆ:
* ಹಲ್ ಸಿಟಿ 2-2 ಎವರ್ಟನ್
* ಚೆಲ್ಸಿಯಾ vs ಸ್ಟೋಕ್ ಸಿಟಿ
* ಮ್ಯಾಂಚೆಸ್ಟರ್ ಸಿಟಿ vs ಮಿಡ್ಲ್ಸ್ ಬರೋ
* ಲಿವರ್ ಪೂಲ್ 1-0 ಮ್ಯಾಂಚೆಸ್ಟರ್ ಸಿಟಿ
* ಸ್ವಾನ್ಸೀ 0 -3 ಬೊರ್ನೆ ಮೌತ್
* ಸೌಂಥಾಪ್ಟನ್ 1-2 ವೆಸ್ಟ್ ಬ್ರೋಮ್
* ಬರ್ನ್ಲೇ 4-1 ಸಂಡರ್ ಲ್ಯಾಂಡ್

ಜನವರಿ 01, ಭಾನುವಾರ
* ವಾಟ್ ಫರ್ಡ್ 1-4 ಟೊಟೆಂಹ್ಯಾಮ್ ಹಾಟ್ಸ್ ಪುರ್
* ಆರ್ಸೆನಲ್ 2-0 ಕ್ರಿಸ್ಟಲ್ ಪ್ಯಾಲೇಸ್
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Liverpool defeated Manchester City 1-0 to end their year on a high. Georginio Wijnaldum scored the only goal of the match to confirm 3 crucial points for the Reds
Please Wait while comments are loading...