ಇಪಿಎಲ್ 13ನೇ ವಾರ : ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ ಚೆಲ್ಸಿಯಾ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 28: ಇಂಗ್ಲೀಷ್ ಪ್ರೀಮಿಯರ್ ಲೀಗ್ 13ನೇ ವಾರದ ಪಂದ್ಯಾವಳಿಗಳು ಮ್ಯಾಂಚೆಸ್ಟರ್ ಸಿಟಿ ಹಾಗೂ ಬರ್ನ್ಲೆ ತಂಡದ ನಡುವಿನ ಪಂದ್ಯದಿಂದ ಆರಂಭಗೊಂಡಿತು. ಚೆಲ್ಸಿಯಾ ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ

ಪೆಪ್ ಗಾರ್ಡಿಯೊಲಾ ಅವರ ಮ್ಯಾಂಚೆಸ್ಟರ್ ಸಿಟಿ ತಂಡ ಸರ್ಗಿಯೊ ಅಗ್ವೆರೋ ಅವರ ಎರಡು ಗೋಲುಗಳನ್ನು ಗಳಿಸಿ ಪೂರ್ಣ 3 ಅಂಕಗಳನ್ನು ಗಳಿಸಿತು. ಇದಾದ ಬಳಿಕ ಲಿವರ್ ಪೂಲ್ ಹಾಗೂ ಸಂಡರ್ ಲ್ಯಾಂಡ್ ಪಂದ್ಯದಲ್ಲಿ ಫಿಲಿಫೆ ಕೌಟಿನ್ಹೋ ಗಾಯಾಳುವಾಗಿ ಹೊರ ನಡೆಯಬೇಕಾಯಿತು. ಲಿವರ್ ಪೂಲ್ ಕೊನೆಗೆ ಡಿವೊಕ್ ಒರಿಗಿ ಹಾಗೂ ಜೇಮ್ಸ್ ಮಿಲ್ನರ್ ಗೋಲುಗಳ ನೆರವಿನಿಂದ 2-0 ಅಂತರದಲ್ಲಿ ಗೆಲುವು ದಾಖಲಿಸಿತು.

English Premier League game week 13: Roundup and results

13ನೇ ವಾರದಲ್ಲಿ ಲಂಡನ್ ಡರ್ಬಿಯಲ್ಲಿ ಚೆಲ್ಸಿಯಾ ಎಫ್ ಸಿ ಹಾಗೂ ಟೊಂಟೊನ್ ಹ್ಯಾಮ್ ಹಾಟ್ಸ್ ಪುರ್ ಕಾದಾಟ ಕುತೂಹಲಕಾರಿಯಾಗಿತ್ತು. ಅಂಟೋನಿಯೋ ಕಾಂಟೆ ಅವರ ತಂಡ ಪೆಡ್ರೋ ಹಾಗೂ ವಿಕ್ಟರ್ ಮೊಸೆಸ್ ಗೋಲಿನ ನೆರವಿನಿಂದ ಪೂರ್ಣ 3 ಅಂಕಗಳಿಸಿ ಅಂಕಪಟ್ಟಿಯಲ್ಲಿ ಮೇಲಕ್ಕೇರಿದೆ.

ನವೆಂಬರ್ 27ರಂದು ಎಎಫ್ ಸಿ ಬೌರ್ನ್ ಮೌತ್ ಹಾಗೂ ಆರ್ಸೆನಲ್ ಪಂದ್ಯ, ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ವೆಸ್ಟ್ ಹ್ಯಾಮ್ ಯುನೈಟೆಡ್ ಪಂದ್ಯ ಕುತೂಹಲ ಕೆರಳಿಸಿದೆ.

ಇಪಿಎಲ್ 13ನೇ ವಾರದ ಪಂದ್ಯಗಳು
ನವೆಂಬರ್ 26, ಶನಿವಾರ
* ಬರ್ನ್ಲೆ 1-2 ಮ್ಯಾಂಚೆಸ್ಟರ್ ಸಿಟಿ
* ಲಿಸ್ಟೆಸ್ಟರ್ ಸಿಟಿ 2-2 ಮಿಡ್ಲ್ಸ್ ಬರೋ
* ಸ್ವಾನ್ಸಿಯಾ ಸಿಟಿ 5-4 ಕ್ರಿಸ್ಟಲ್ ಪ್ಯಾಲೇಸ್
* ಹಲ್ ಸಿಟಿ 1-1 ವೆಸ್ಟ್ ಬ್ರೊಮ್ವಿಚ್ ಅಲ್ಬಿಯಾನ್
* ಲಿವರ್ ಪೂಲ್ 2-0 ಸಂಡರ್ ಲ್ಯಾಂಡ್
* ಚೆಲ್ಸಿಯಾ 2-1 ಟೊಟೆನ್ ಹ್ಯಾಮ್ ಹಾಟ್ಸ್ ಪುರ್

ನವೆಂಬರ್ 27, ಭಾನುವಾರ

* ವಾಟ್ ಫರ್ಡ್ 0-1ಸ್ಟೋಕ್ ಸಿಟಿ
* ಆರ್ಸೆನಲ್ 3-1 ಎಫ್ ಸಿ ಬೌರ್ನ್ ಮೌತ್
* ಸೌತಾಂಪ್ಟನ್ 1-0 ಎವರ್ಟನ್
* ಮ್ಯಾಂಚೆಸ್ಟರ್ ಯುನೈಟೆಡ್ 1-1 ವೆಸ್ಟ್ ಹ್ಯಾಮ್ ಯುನೈಟೆಡ್
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
English Premier League game week 13 ends a high note with Chelsea FC retaining their top position in the league table.
Please Wait while comments are loading...