ಇಪಿಎಲ್: ಚೆಲ್ಸಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 20: ಇಂಗ್ಲೀಷ್ ಪ್ರೀಮಿಯರ್ ಲೀಗ್ (ಇಪಿಎಲ್) ನ 12ನೇ ವಾರದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಆರ್ಸೆನಲ್ ಪಂದ್ಯಗಳಲ್ಲದೆ ಮ್ಯಾಂಚೆಸ್ಟರ್ ಸಿಟಿ ಪಂದ್ಯ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ಜನಪ್ರಿಯ ಮ್ಯಾನೇಜರ್ ಗಳಾದ ಜೋಸ್ ಮೊರಿನ್ಹೊ ಹಾಗೂ ಆರ್ಸೆನೆ ವೆಂಜರ್ ನಡುವಿನ ಕಾದಾಟ ಸಮಬಲ ಕಂಡಿದ್ದು ವಿಶೇಷವಾಗಿತ್ತು.

English Premier League game week 12: Roundup and results

ಯುವಾನ್ ಮಾಠ ಹಾಗೂ ಒಲಿವಿರ್ ಗಿರೋಡ್ ಕ್ರಮವಾಗಿ ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಆರ್ಸೆನಲ್ ಪರ ಗೋಲು ಬಾರಿಸಿ ಡ್ರಾ ಸಾಧಿಸಿದರು.

ಉಳಿದಂತೆ ಯಾಯಾ ಟೋರೆ ಮತ್ತೆ ಲಯಕ್ಕೆ ಮರಳಿದ್ದು ಮ್ಯಾಂಚೆಸ್ಟರ್ ಸಿಟಿ ಗೆಲುವಿನೊಂದಿಗೆ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು. ಆದರೆ, ಭಾನುವಾರ ರಾತ್ರಿಯ ಪಂದ್ಯದಲ್ಲಿ ಮಿಡೆಲ್ಸ್ ಬರೋ ವಿರುದ್ಧ ಚೆಲ್ಸಿಯಾ ತಂಡ ಏಕೈಕ ಗೋಲಿನಿಂದ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.. ಲಿವರ್ ಪೂಲ್ ತಂಡ ಯಾವುದೇ ಗೋಲು ಗಳಿಸದೆ ಸೌಥಾಂಪ್ಟನ್ ವಿರುದ್ಧ ಡ್ರಾ ಸಾಧಿಸಿತು.

12ನೇ ವಾರದ ಮೊದಲ ದಿನದ ಫಲಿತಾಂಶ:
* ಮ್ಯಾಂಚೆಸ್ಟರ್ ಯುನೈಟೆಡ್ 1-1 ಆರ್ಸೆನಲ್
* ಸಂಡರ್ ಲ್ಯಾಂಡ್ 3-0 ಹಲ್ ಸಿಟಿ
* ವಾಟ್ ಫರ್ಡ್ 2-1 ಲಿಸ್ಟೆಸ್ಟರ್ ಸಿಟಿ
* ಕ್ರಿಸ್ಟಲ್ ಪ್ಯಾಲೇಸ್ 1-2 ಮ್ಯಾಂಚೆಸ್ಟರ್ ಸಿಟಿ
ಎವರ್ಟನ್ 1-1 ಸ್ವಾನ್ಸೀ ಸಿಟಿ
* ಸ್ಟೋಕ್ ಸಿಟಿ 0-1 ಎಎಫ್ ಸಿ ಬೌರ್ನೆ ಮೌಥ್
* ಸೌಥಾಂಪ್ಟನ್ 0-0 ಲಿವರ್ ಪೂಲ್
* ಟೊಟೊಂನ್ಹಾಮ್ ಹಾಟ್ಸ್ಪುರ್ 3-2 ವೆಸ್ಟ್ ಹ್ಯಾಮ್ ಯುನೈಟೆಡ್

ಭಾನುವಾರದ ಪಂದ್ಯ
* ಮಿಡೆಲ್ಸ್ ಬರೋ 0-1 ಚೆಲ್ಸಿಯಾ

ಸೋಮವಾರದ ಪಂದ್ಯ
ವೆಸ್ಟ್ ಬ್ರೊಮ್ವಿಚ್ ಅಲ್ಬಿಯಾನ್ ವಿರುದ್ಧ ಬರ್ನ್ಲೆ

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
English Premier League game week 12 is underway and 8 out of 10 matches were played on Saturday, November 19.
Please Wait while comments are loading...