ಇಪಿಎಲ್ : ಆರ್ಸೆನಲ್ ಡ್ರಾಗೆ ತೃಪ್ತಿ, ಮ್ಯಾಂಚೆಸ್ಟರ್ ಗೆ ಭರ್ಜರಿ ಜಯ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 07: ಇಂಗ್ಲೀಷ್ ಪ್ರೀಮಿಯರ್ ಲೀಗ್ (ಇಪಿಎಲ್) ನ 11ನೇ ವಾರದಲ್ಲಿ ಚೆಲ್ಸಿಯಾ ಹಾಗೂ ಮ್ಯಾಂಚೆಸ್ಟರ್ ಸಿಟಿ ಪಂದ್ಯಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಭಾನುವಾರ ನಡೆದ ಪಂದ್ಯಗಳಲ್ಲಿ ಆರ್ಸೆನಲ್ ಡ್ರಾಗೆ ತೃಪ್ತಿಪಟ್ಟರೆ, ಲಿವರ್ ಪೂಲ್ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ ಭರ್ಜರಿ ಜಯ ದಾಖಲಿಸಿವೆ.

ಎವರ್ಟನ್ ವಿರುದ್ಧ ಭರ್ಜರಿಯಾಗಿ 5 ಗೋಲು ಬಾರಿಸಿದ ಚೆಲ್ಸಿಯಾ ತಂಡ ಈಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮ್ಯಾಂಚೆಸ್ಟರ್ ಸಿಟಿ ವಿರುದ್ಧದ ಪಂದ್ಯದಲ್ಲಿ ಮಿಡ್ಲೆಸ್ ಬರೋ ಕೊನೆ ಕ್ಷಣದಲ್ಲಿ ಗೋಲು ಬಾರಿಸಿ 1-1 ಪಂದ್ಯ ಡ್ರಾ ಸಾಧಿಸಿತು.

ಚೆಲ್ಸಿಯಾ ಪರ ಎಡೆನ್ ಹಜಾರ್ಡ್ ಎರಡು, ಡಿಯಾಗೋ ಕೋಸ್ಟಾ, ಮಾರ್ಕಸ್ ಅಲಾನ್ಸೋ ಹಾಗೂ ಪೆಡ್ರೋ ತಲಾ ಒಂದು ಗೋಲು ಬಾರಿಸಿ ಚೆಲ್ಸಿಯಾ ತಂಡವನ್ನು ಅಗ್ರಸ್ಥಾನಕ್ಕೇರಿಸಿದರು.

English Premier League game week 11: Roundup, results

ಇನ್ನೊಂದೆಡೆ ಪೆಪ್ ಗಾರ್ಡಿಯೋಲಾ ಮಾರ್ಗದರ್ಶನದ ತಂಡದಲ್ಲಿ ಸರ್ಗಿಯೋ ಅಕ್ವೆರೋ ಮೊದಲಾರ್ಧದಲ್ಲಿ ಗೋಲು ಬಾರಿಸಿ ಗೆಲುವಿನ ಕನಸು ಕಾಣುತ್ತಿದ್ದರು. ಆದರೆ, ಮಿಡ್ಲೆಸ್ ಬರೋ ತಂಡ 92 ನೇ ನಿಮಿಷದಲ್ಲಿ ಗೋಲು ಸಾಧಿಸಿ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಯಶ ಕಂಡರು.

ಇಂಗ್ಲೀಷ್ ಪ್ರೀಮಿಯರ್ ಲೀಗ್ ನ 11 ನೇ ವಾರದ ಮೊದಲ ದಿನದ ಫಲಿತಾಂಶ
* ಮ್ಯಾಂಚೆಸ್ಟರ್ ಸಿಟಿ 1-1 ಮಿಡ್ಲೆಸ್ ಬರೋ
* ವೆಸ್ಟ್ ಹ್ಯಾಮ್ ಯುನೈಟೆಡ್ 1-1 ಸ್ಟೋಕ್ ಸಿಟಿ
* ಬರ್ನ್ಲೆ ಎಫ್ ಸಿ 3-2 ಕ್ರಿಸ್ಟಲ್ ಪ್ಯಾಲೇಸ್
* ಬೊರ್ನೆ ಮೌತ್ 1-2 ಸಂಡರ್ ಲ್ಯಾಂಡ್
* ಚೆಲ್ಸಿಯಾ 5-0 ಎವರ್ಟನ್

ಎರಡನೇ ದಿನದ ಪಂದ್ಯಗಳು (ಭಾನುವಾರ)
* ಅರ್ಸೆನಲ್ 1-1 ಟೊಟೆಂಹ್ಯಾಮ್ ಹಾಟ್ಸ್ ಪುರ್
* ಹಲ್ ಸಿಟಿ 2-1 ಸೌಂಥಾಪ್ಟನ್
* ಲಿವರ್ ಪೂಲ್ 6-1 ವಾಟ್ ಫೋರ್ಡ್
* ಸ್ವಾನ್ಸಿಯಾ ಸಿಟಿ 1-3ಮ್ಯಾಂಚೆಸ್ಟರ್ ಯುನೈಟೆಡ್
* ಲಿಸ್ಟೆಸ್ಟರ್ ಸಿಟಿ 1-2 ವೆಸ್ಟ್ ಬ್ರೋಮ್ವಿಚ್ ಅಲ್ಬಿಯಾನ್
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
English Premier League game week 11, day 1 saw giants like Chelsea FC and Manchester City lock horns against Everton and Middlesbrough respectively
Please Wait while comments are loading...