ರೊನಾಲ್ಡೊಗೆ ಫಿಫಾ ವರ್ಷದ ಫುಟ್ಬಾಲಿಗ ಪ್ರಶಸ್ತಿ

Posted By: Chethan
Subscribe to Oneindia Kannada

ಜ್ಯೂರಿಚ್ (ಸ್ವಿಜರ್ಲೆಂಡ್), ಜ. 10: ಜಗದ್ವಿಖ್ಯಾತ ಫುಟ್ಬಾಲಿಗ, ಪೋರ್ಚುಗಲ್ ಹಾಗೂ ರಿಯಲ್ ಮ್ಯಾಡ್ರಿಡ್ ತಂಡದ ಸ್ಟಾರ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ಅವರು, ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಯ (ಫಿಫಾ) 'ವರ್ಷದ ಫುಟ್ಬಾಲಿಗ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಈ ಪ್ರಶಸ್ತಿಯನ್ನು ಅವರು ಪಡೆದಿರುವುದು ನಾಲ್ಕನೇ ಬಾರಿ.

2016ರಲ್ಲಿ ಪೋರ್ಚುಗಲ್ ಹಾಗೂ ರಿಯಲ್ ಮ್ಯಡ್ರಿಡ್ ತಂಡಗಳನ್ನು ಯೂರೋಪಿಯನ್ ಚಾಂಪಿಯನ್ ಗಳಲ್ಲಿ ಪ್ರಶಸ್ತಿ ಗೆಲ್ಲುವ ಮಟ್ಟಕ್ಕೆ ಯಶಸ್ವಿಯಾಗಿ ಕೊಂಡೊಯ್ಯುವ ಮೂಲಕ ಯಶಸ್ವೀ ನಾಯಕ ಎಂದು ಪರಿಗಣಿಸಲ್ಪಟ್ಟಿರುವ ಅವರು, ಭಾರತೀಯ ಕಾಲಮಾನದ ಪ್ರಕಾರ, ಸೋಮವಾರ ಮಧ್ಯರಾತ್ರಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಗೆ ಭಾಜನರಾದರು.

Cristiano Ronaldo wins FIFA best player award for 4th time

ಅಂದಹಾಗೆ, ಈ ಬಾರಿಯ ಪ್ರಶಸ್ತಿಗೆ ರೊನಾಲ್ಡೊಗೆ ಬಾರ್ಸಿಲೋನಾದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಹಾಗೂ ಫ್ರಾನ್ಸ್ ನ ಅಂಟೋನಿ ಗ್ರೀಜ್ಮನ್ ಅವರು ತೀವ್ರ ಸ್ಪರ್ಧೆಯೊಡ್ಡಿದ್ದರು. ಇದು ಫುಟ್ಬಾಲ್ ಪ್ರಿಯರಲ್ಲಿ ಪ್ರಶಸ್ತಿ ಯಾರಿಗೆ ಸಲ್ಲಬಹುದೆಂಬ ಕುತೂಹಲವನ್ನು ಗಣನೀಯವಾಗಿ ಹೆಚ್ಚಿಸಿತ್ತು. ಅಂತಿಮವಾಗಿ, ರೊನಾಲ್ಡೊ ಅವರು, ಈ ಪ್ರಶಸ್ತಿಯು ರೊನಾಲ್ಡೊ ಅವರಿಗೆ ಒಲಿದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಫಿಫಾ ಪ್ರಶಸ್ತಿ ನನಗೆ ಸಂತೋಷ ತಂದಿದೆ. ಮತ್ತಷ್ಟು ಸ್ಫೂರ್ತಿ ತುಂಬಿದೆ. ಈ ಗೌರವ ಪಡೆಯಲು ಕಾರಣರಾದ ನನ್ನ ತಂಡದ ಸಹ ಆಟಗಾರರಿಗೆ ನನ್ನ ವಂದನೆಗಳು. ಅವರ ಸಹಕಾರವಿಲ್ಲದೆ ನನಗೆ ಈ ಪ್ರಶಸ್ತಿ ಬರುತ್ತಿರಲಿಲ್ಲ'' ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Real Mandrid star Cristiano Ronaldo bags FIFA best player award. It's his fourth in his career. He beat great rival Lionel Messi and Antoine Griezmann to grab this top individual award.
Please Wait while comments are loading...