ಬುದ್ಧದ ಪ್ರತಿಮೆ ಮೇಲೆ ಕಾಲಿಟ್ಟ 'ಕಾಲ್ಚೆಂಡು' ಸ್ಟಾರ್ ರೊನಾಲ್ಡೊ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 23: ಪೋರ್ಚುಗಲ್ ಹಾಗೂ ರಿಯಲ್ ಮ್ಯಾಡ್ರಿಡ್ ಕ್ಲಬ್ ​ಪರ ಆಡುವ ಅತ್ಯಂತ ಜನಪ್ರಿಯ ಹಾಗೂ ವಿಶ್ವದ ಶ್ರೀಮಂತರ ಫುಟ್ಬಾಲರ್ ಕ್ರಿಸ್ಟಿಯಾನೋ ರೊನಾಲ್ಡೋ ವಿರುದ್ಧ ಬೌದ್ಧ ಧರ್ಮೀಯರು ಕಿಡಿಕಾರಿದ್ದಾರೆ.

ರೊನಾಲ್ಡೋ ಅವರು ಇತ್ತೀಚೆಗೆ ಬುದ್ಧನ ವಿಗ್ರಹವಿರುವ ಕಟ್ಟೆಯ ಮೇಲೆ ಶೂ ಧರಿಸಿದ ಕಾಲನ್ನು ಇರಿಸಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದರು. ಈ ಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಬೌದ್ಧರು ಹಾಗೂ ಫುಟ್ಬಾಲ್ ಅಭಿಮಾನಿಗಳು, ಚಿತ್ರವನ್ನು ತೆಗೆಯುವಂತೆ ಮನವಿ ಮಾಡಿದ್ದರು.

Cristiano Ronaldo's Photo Shows His Foot On Buddha Statue

'ರೊನಾಲ್ಡೋ ಅವರೇ ನಾನು ನಿಮ್ಮ ದೊಡ್ಡ ಅಭಿಮಾನಿ. ಆದರೆ, ನೀವು ಮೊದಲು ಗೌತಮ ಬುದ್ಧನಿಗೆ ಗೌರವ ಕೊಡುವುದನ್ನು ಕಲಿಯಬೇಕು. ನೀವು ಯಾವುದೇ ಧರ್ಮ ಪಾಲನೆ ಮಾಡಿ. ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರಬೇಡಿ ಎಂದು ರೊನಾಲ್ಡೋ ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾರೆ. ಈ ರೀತಿ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.
Cristiano Ronaldo's Photo Shows His Foot On Buddha Statue

ಆದರೆ, ರೊನಾಲ್ಡೋ ತಮ್ಮ ಖಾತೆಯಿಂದ ಇನ್ನೂ ಫೋಟೋ ಡಿಲೀಟ್ ಮಾಡಿಲ್ಲ ಮತ್ತು ಕ್ಷಮಾಪಣೆಯನ್ನು ಕೇಳಿಲ್ಲ. ಫೊಟೋ ಶೇರಿಂಗ್ ತಾಣ ಇನ್ಸ್ ಸ್ಟಾಗ್ರಾಮ್, ಫೇಸ್ ಬುಕ್ ಗಳಲ್ಲಿ ಈ ಚಿತ್ರ ಈ ಸಮಯದ ತನಕ ಹಾಗೆ ಇದೆ.

ಈ ಚಿತ್ರದ ಬಳಿಕ ಕ್ಯಾನ್ಸರ್ ಬಗ್ಗೆ ಅಭಿಯಾನ ಆರಂಭಿಸಿರುವುದರ ಬಗ್ಗೆ ಒಂದು ಚಿತ್ರವನ್ನು ಹಾಕಿದ್ದಾರೆ. ಮತ್ತೆರಡು ಫುಟ್ಬಾಲ್ ಅಭ್ಯಾಸ ನಿರತ ಚಿತ್ರಗಳಿವೆ. ಇನ್ಸ್ ಸ್ಟಾ ಗ್ರಾಮ್ ನಲ್ಲಿ ರೋನಾಲ್ಡೋಗೆ 79.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಫೇಸ್ ಬುಕ್ ನಲ್ಲಿ ಅಧಿಕೃತ ಪುಟಕ್ಕೆ 117,130,504 ಲೈಕ್ಸ್ ಇದೆ.

Bom dia

A photo posted by Cristiano Ronaldo (@cristiano) on Oct 20, 2016 at 12:25am PDT

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cristiano Ronaldo, Portuguese and Real Madrid soccer player has incurred the wrath of Buddhist social media users for posting a photo they deemed disrespectful.
Please Wait while comments are loading...