ಆನ್ ಲೈನ್ ನಲ್ಲಿ ರೊನಾಲ್ಡೋ ಜನಪ್ರಿಯತೆ ಮೀರಿಸುವವರಿಲ್ಲ!

Posted By:
Subscribe to Oneindia Kannada

ಮ್ಯಾಡ್ರಿಡ್, ಸೆ. 16: ಪೋರ್ಚುಗೀಸ್ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೋ ಮತ್ತೊಮ್ಮೆ ಆನ್ ಲೈನ್ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ಪುರುಷ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಟಾಪ್ 5 ಜನಪ್ರಿಯ ವ್ಯಕ್ತಿಗಳ ಪೈಕಿ ಏಕೈಕ ಪುರುಷ ಕ್ರೀಡಾಪಟುವಾಗಿದ್ದಾರೆ.

ಆನ್ ಲೈನ್ ನಲ್ಲಿ ಅತ್ಯಂತ ಜನಪ್ರಿಯ ಕ್ರೀಡಾಪಟುಗಳ ಬಗ್ಗೆ ಸಮೀಕ್ಷೆ ನಡೆಸಿರುವ ಆಪಲ್ ಟ್ರೀ ಕಮ್ಯೂನಿಕೇಷನ್ ಗುರುವಾರ ಈ ಬಗ್ಗೆ ವರದಿ ನೀಡಿದ್ದು, ಕ್ರಿಸ್ಟಿಯಾನೋ ಅವರು ಫೇಸ್ ಬುಕ್, ಟ್ವಿಟ್ಟರ್ ಹಾಗೂ ಇನ್ ಸ್ಟ್ರಾಗ್ರಮ್ ಸೇರಿಸಿ 238 ಮಿಲಿಯನ್ ಜನರನ್ನು ಹೊಂದಿದ್ದಾರೆ ಎಂದು ಹೇಳಿದೆ.[ರೊನಾಲ್ಡೊ ಹಿಂದಿಕ್ಕಿ ಬ್ಯಾಲನ್ ಡಿ'ಓರ್ ಗೆದ್ದ ಮೆಸ್ಸಿ]

Cristiano Ronaldo most followed sportsperson online

ಅತ್ಯಂತ ಜನಪ್ರಿಯ ಗಣ್ಯರ ಪೈಕಿ ಅಮೆರಿಕದ ಗಾಯಕಿ ಟೇಲರ್ ಸ್ವಿಫ್ಟ್ 246 ಮಿಲಿಯನ್ ಹಿಂಬಾಲಕರೊಂದಿಗೆ ಟಾಪ್ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ರೊನಾಲ್ಡೋ ಇದ್ದಾರೆ. ಮೂರನೇ ಸ್ಥಾನದಲ್ಲಿ ಯುಎಸ್ ಗಾಯಕಿ ಕೇಟಿ ಪೆರಿ 219 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.[ಯುರೋ 2016 ಗೆದ್ದ ಪೋರ್ಚುಗಲ್]

ಗಾಯಕಿ ಸೆಲೆನಾ ಗೊಮೆಜ್ 205 ಮಿಲಿಯನ್ ಹಿಂಬಾಲಕರೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಬರ್ಬಾಡಿಯನ್ ಗಾಯಕಿ ರಿಹಾನಾ 190 ಹಿಂಬಾಲಕರೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಟಾಪ್ 20 ಜನಪ್ರಿಯ ವ್ಯಕ್ತಿಗಳ ಪೈಕಿ 13 ಮಂದಿ ಸಂಗೀತಗಾರರಿದ್ದು, ಶೇ 60ರಷ್ಟು ಮಂದಿ ಮಹಿಳೆಯರೇ ಇರುವುದು ವಿಶೇಷ. ಅದರಲ್ಲೂ ಶೇ 65ರಷ್ಟು ಮಂದಿ ಯುನೈಟೆಡ್ ಸ್ಟೇಟ್ಸ್ ಮೂಲದವರಾಗಿದ್ದಾರೆ.

ಆದರೆ, ಸ್ಪೇನ್ ನಲ್ಲಿ ಪರಿಸ್ಥಿತಿ ಬದಲಾಗಿದ್ದು, ಸ್ಪೇನಿನಲ್ಲಿ ಫುಟ್ಬಾಲ್ ಆಟಗಾರರಾದ ಆಂಡ್ರೆಸ್ ಇನಿಯಸ್ಟಾ, ಸರ್ಗಿಯೊ ರಮೊಸ್, ಜಿರಾಲ್ಡ್ ಪಿಕೆ, ಸ್ಟಾರ್ ಗೋಲ್ ಕೀಪರ್ ಐಕಾರ್ ಕಾಸಿಲಾಸ್ ಅವರು ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Real Madrid Portuguese star Cristiano Ronaldo is the lone male in the list of the top five most followed people online.
Please Wait while comments are loading...