ಮೆಸ್ಸಿ ಹಿಂದಿಕ್ಕಿ ಬ್ಯಾಲನ್ ಡಿ’ಒರ್ ಪ್ರಶಸ್ತಿ ಗೆದ್ದ ರೊನಾಲ್ಡೊ

Posted By:
Subscribe to Oneindia Kannada

ಪ್ಯಾರಿಸ್, ಡಿಸೆಂಬರ್ 13: ರಿಯಲ್ ಮ್ಯಾಡ್ರಿಡ್‌ ಹಾಗೂ ಪೋರ್ಚುಗಲ್ ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ನಾಲ್ಕನೇ ಬಾರಿಗೆ ಪ್ರತಿಷ್ಠಿತ 'ಬ್ಯಾಲನ್ ಡಿ' ಒರ್ ಪ್ರಶಸ್ತಿ ಒಲಿದಿದೆ. ಬಾರ್ಸಿಲೋನಾದ ಸ್ಟಾರ್ ಲಿಯೊನೆಲ್ ಮೆಸ್ಸಿ ಅವರನ್ನು ಮತ್ತೊಮ್ಮೆ ರೊನಾಲ್ಡೊ ಹಿಂದಿಕ್ಕಿದ್ದಾರೆ.

ಸುಮಾರು 10 ವರ್ಷಗಳಿಂದ ಬಾರ್ಸಿಲೋನ ಹಾಗೂ ಅರ್ಜೆಂಟೀನದ ಸೂಪರ್ ಸ್ಟಾರ್ ಮೆಸ್ಸಿ ಹಾಗೂ ರೊನಾಲ್ಡೊ ನಡುವೆ ಈ ಪ್ರಶಸ್ತಿಗಾಗಿ ಸ್ಪರ್ಧೆ ನಡೆಯುತ್ತಿದೆ. ಮೆಸ್ಸಿ ಕಳೆದ ವರ್ಷ 5ನೆ ಬಾರಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಜಯಿಸಿದ್ದರು. 2008ರಲ್ಲಿ ಮೊದಲ ಬಾರಿಗೆ ಚಿನ್ನದ ಚೆಂಡಿಗೆ ರೊನಾಲ್ಡೋ ಮುತ್ತಿಟ್ಟಿದ್ದರು.

Cristiano Ronaldo beats Messi, Griezmann to win 4th Ballon d'Or

54 ಪಂದ್ಯಗಳಿಂದ 51 ಗೋಲು ಬಾರಿಸಿರುವ ರೊನಾಲ್ಡೊ ಅವರು 11ನೇ ಬಾರಿಗೆ ಚಾಂಪಿಯನ್ಸ್ ಲೀಗ್ ಟ್ರೋಫಿ ಹಾಗೂ ಪೋರ್ಚುಗಲ್ ತಂಡ ಮೊತ್ತ ಮೊದಲ ಬಾರಿ ಯುರೋ 2016ರ ಪ್ರಶಸ್ತಿ ಜಯಿಸಲು ತಂಡದ ನಾಯಕತ್ವವನ್ನು ವಹಿಸಿದ್ದರು.

ವಿಶ್ವದ ಶ್ರೀಮಂತ ಫುಟ್ಬಾಲ್ ಆಟಗಾರ ರೊನಾಲ್ಡೋ 2013, 2014ರಲ್ಲಿ ಈ ಪ್ರಶಸ್ತಿ ಜಯಿಸಿದ್ದರು. ಆದರೆ, ಕಳೆದ ಬಾರಿಗೆ ಮೆಸ್ಸಿ ಪಾಲಾಗಿತ್ತು.

ಬ್ಯಾಲನ್ ಡಿ'ಒರ್ ಪ್ರಶಸ್ತಿಗಾಗಿ ನಡೆದ ಮತದಾನದಲ್ಲಿ ರೊನಾಲ್ಡೊ ಮೊದಲ ಸ್ಥಾನ, ಮೆಸ್ಸಿ ಎರಡನೆ ಹಾಗೂ ಫ್ರೆಂಚ್ ಸ್ಟ್ರೈಕರ್ ಅಂಟೋನಿಯೋ ಗ್ರಿಝ್ಮನ್ ಮೂರನೇ ಸ್ಥಾನ ಪಡೆದಿದ್ದಾರೆ. ಬ್ಯಾಲನ್ ಡಿ'ಒರ್ ಪ್ರಶಸ್ತಿ ವಿಜೇತರನ್ನು ವಿಶ್ವದ 173 ಪತ್ರಕರ್ತರು ಆಯ್ಕೆ ಮಾಡುತ್ತಾರೆ. 1956ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.

' ನನ್ನ ಎಲ್ಲ ಸಹ ಆಟಗಾರರು, ರಾಷ್ಟ್ರೀಯ ತಂಡ, ರಿಯಲ್ ಮ್ಯಾಡ್ರಿಡ್, ವೈಯಕ್ತಿಕ ಶ್ರೇಷ್ಠ ಟ್ರೋಫಿ ಜಯಿಸಲು ನೆರವಾಗಿರುವ ಎಲ್ಲ ಅಭಿಮಾನಿಗಳಿಗೆ ಹಾಗೂ ಆಟಗಾರರಿಗೆ ಕೃತಜ್ಞತೆ ಸಲ್ಲಿಸುವೆ' ಎಂದು ರೊನಾಲ್ಡೊ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ronaldo scored 51 goals in 54 games this year while leading Real Madrid to their record 11th Champions League trophy and Portugal to its first European Championship.
Please Wait while comments are loading...