ರೂನಿ, ರೊನಾಲ್ಡೊ, ಮೆಸ್ಸಿ ಹಿಂದಿಕ್ಕಿದ ಸುನಿಲ್ ಛೆಟ್ರಿ

Posted By:
Subscribe to Oneindia Kannada

ಬೀಜಿಂಗ್, ಜೂನ್ 15: ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, ಅಂತಾರಾಷ್ಟ್ರೀಯ ಶ್ರೇಷ್ಠ ಸಕ್ರಿಯ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಅವರು, ಈವರೆಗೆ ಇದೇ ಪಟ್ಟಿಯ 4ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ತಂಡದ ವೈನ್ ರೂನಿ ಅವರನ್ನು 5ನೇ ಸ್ಥಾನಕ್ಕೆ ತಳ್ಳಿದ್ದಾರೆ.

ಜೂನ್ 11ರಂದು ಬೆಂಗಳೂರಿನಲ್ಲಿ ನಡೆದಿದ್ದ ಎಎಫ್ ಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ, ಕಿರ್ಗಿಸ್ತಾನ್ ತಂಡದ ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯ ಸಾಧಿಸಿತ್ತು.

Chhetri passes Rooney, becomes 4th best active int'l scorer

ಈ ಪಂದ್ಯದಲ್ಲಿ ಅದ್ಭುತವಾಗಿ ಗೋಲು ದಾಖಲಿಸಿದ್ದ ಛೆಟ್ರಿ, ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.

ಈ ಗೋಲಿನ ಮೂಲಕ, ಛೆಟ್ರಿಯವರು ಈವರೆಗೆ ಸಂಪಾದಿಸಿದ ಅಂತಾರಾಷ್ಟ್ರೀಯ ಗೋಲುಗಳ ಸಂಖ್ಯೆ 54ಕ್ಕೇರಿದೆ. ಈ ಹಿನ್ನೆಲೆಯಲ್ಲಿ ಶ್ರೇಷ್ಠ ಸಕ್ರಿಯ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಲು ಸಾಧ್ಯವಾಗಿದೆ. ಅಲ್ಲದೆ, ಛೆಟ್ರಿಯವರ ಪ್ರತಿ ಪಂದ್ಯದ ಗೋಲಿನ ಅನುಪಾತ 0.57ರಷ್ಟಿದೆ. ಇದು, ವಿಶ್ವವಿಖ್ಯಾತ ಆಟಗಾರ, ಪೋರ್ಚು ಗಲ್ ತಂಡದ ನಾಯಕ ಕ್ರಿಶ್ಚಿಯಾನೊ ರೊನಾಲ್ಡೊ ಹಾಗೂ ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೊನೆಲ್ ಮೆಸ್ಸಿಗಿಂತಲೂ ಅಧಿಕ.

ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕಿರ್ಗಿಸ್ತಾನ ತಂಡದ ವಿರುದ್ಧ ಜಯ ಸಾಧಿಸಿದ ಭಾರತ ತಂಡ, ಈ ಬಾರಿಯ ಎಎಫ್ ಸಿ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಭಾರತ ಈವರೆಗೆ ತಾನು ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿದೆ. ಇದೇ ವರ್ಷ ಮಾರ್ಚ್ 12ರಂದು ನಡೆದಿದ್ದ ಪಂದ್ಯದಲ್ಲಿ ಮ್ಯಾನ್ಮಾರ್ ವಿರುದ್ಧ ಜಯ ಸಾಧಿಸಿತ್ತು.

ಇದೀಗ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಈ ಪಂದ್ಯಾವಳಿಯ 'ಎ' ಗುಂಪಿನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian football team captain Sunil Chhetri became the fourth best active international scorer in the world, surpassing England's Wayne Rooney with his 54th international goal.
Please Wait while comments are loading...