ಚಾಂಪಿಯನ್ಸ್ ಲೀಗ್ ವೇಳಾಪಟ್ಟಿ: ಬಾರ್ಸಿಲೋನಾ, ಮ್ಯಾಡ್ರಿಡ್ ಪಂದ್ಯ ಯಾವಾಗ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 18: ಯುರೋಪಿಯನ್ ಫುಟ್ಬಾಲ್ ನ ಪ್ರಮುಖ ಲೀಗ್ ಗಳಲ್ಲಿ ಒಂದೆನಿಸಿರುವ UEFA ಚಾಂಪಿಯನ್ ಲೀಗ್ ನ ಕ್ವಾರ್ಟರ್ ಫೈನಲ್ ಪಟ್ಟಿ ಶುಕ್ರವಾರ(ಮಾರ್ಚ್ 17) ದಂದು ಸ್ವಿಟ್ಜರ್ಲೆಂಡ್ ನ ಲಿಯಾನ್ ನಲ್ಲಿ ಪ್ರಕಟವಾಗಿದೆ.

ಯುರೋಪಿನ ಎಂಟು ಪ್ರಮುಖ ತಂಡಗಳು ಎಂಟರ ಘಟ್ಟಕ್ಕೆ ಆಯ್ಕೆಯಾಗಿದ್ದು, ಚಾಂಪಿಯನ್ಸ್ ಲೀಗ್ 2017ರ ವೇಳಾಪಟ್ಟಿಯನ್ನು ಲಿವರ್ ಪೂಲ್ ನ ಸ್ಟಾರ್ ಇಯಾನ್ ರಷ್ ಪ್ರಕಟಿಸಿದರು.

Champions League 2017: Quarter-final fixtures revealed

ಚಾಂಪಿಯನ್ಸ್ ಲೀಗ್ 2017ರ ಕ್ವಾರ್ಟರ್ ಫೈನಲ್ :
* ಅಟ್ಲೆಟಿಕೋ ಮ್ಯಾಡ್ರಿಡ್ Vs ಲಿಸ್ಟೆಸ್ಟರ್ ಸಿಟಿ
* ಎಎಸ್ ಮೊನಾಕೊ Vs ಬೊರುಸ್ಸಿಯಾ ಡೊರ್ಟ್ ಮಂಡ್
* ಬಾರ್ಯಾ ಮ್ಯೂನಿಕ್ Vs ರಿಯಲ್ ಮ್ಯಾಡ್ರಿಡ್
* ಯೂವೆಂಟಸ್ Vs ಬಾರ್ಸಿಲೋನಾ

ಸ್ಪೇನಿನ ಮೂರು ತಂಡಗಳು ಎಂಟರ ಘಟಕ್ಕೆ ಸೇರಿದ್ದು, ಸೆವಿಲ್ಲಾ ತಂಡವನ್ನು ಬಗ್ಗುಬಡಿದು ಇಂಗ್ಲೆಂಡಿನ ಲಿಸ್ಟೆಸ್ಟರ್ ಸಿಟಿ ಕೊನೆಕ್ಷಣದಲ್ಲಿ ಎಂಟ್ರಿಕೊಟ್ಟಿದೆ.

ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಲೀಗ್ ನ ಈ ಹಂತ ಮುಟ್ಟಿದೆ. ಜರ್ಮನಿಯಿಂದ ಬಾರ್ಯಾ ಮ್ಯೂನಿಕ್, ಡೊರ್ಟ್ ಮಂಡ್ ತಂಡಗಳಿದ್ದರೆ, ಇಟಲಿಯಿಂದ ಯೂವೆಂಟಸ್ ಹಾಗೂ ಫ್ರಾನ್ಸಿನ ಮೊನಾಕೊ ತಂಡ ಅರ್ಹತೆ ಪಡೆದುಕೊಂಡಿವೆ.

ಉಳಿದಂತೆ ಎಫ್ ಸಿ ಬಾರ್ಸಿಲೋನಾ ಹೊಸ ಇತಿಹಾಸ ನಿರ್ಮಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಪಿಎಸ್ ಜಿ ವಿರುದ್ಧ 0-4 ರಲ್ಲಿ ಹಿಂದಿದ್ದ ಬಾರ್ಸಿಲೋನಾ, ಕೊನೆ ಹಂತದಲ್ಲಿ 9 ನಿಮಿಷಗಳಲ್ಲಿ 3 ಗೋಲು ಬಾರಿಸಿ 6-1 ಅಂತರ ಕಾಯ್ದುಕೊಂಡು ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆದುಕೊಂಡಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
UEFA Champions League 2017 quarter-finals draw took place today, March 17, in Nyon, Switzerland.
Please Wait while comments are loading...