ಬುಂಡೆಸ್ಲೀಗಾ: ಬಾಯರ್ನ್ ಮ್ಯೂನಿಕ್ ಗೆ ಅಚ್ಚರಿಯ ಸೋಲು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 21: ಜರ್ಮನಿಯ ಬುಂಡೆಸ್ಲೀಗಾದ 11 ನೇ ವಾರದಲ್ಲಿ ಲೀಗ್ ನಲ್ಲಿ ಮುನ್ನಡೆ ಕಾಯ್ಡುಕೊಂಡಿದ್ದ ಬಾಯರ್ನ್ ಮ್ಯೂನಿಕ್ ತಂಡ ಸೋಲು ಕಂಡಿದ್ದಲ್ಲದೆ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಆರ್ ಬಿ ಲೆಪ್ಜಿಗ್ ಗೆ ಬಿಟ್ಟುಕೊಟ್ಟಿತು.

ಸಿಗ್ನಾಲ್ ಇಡುನಾ ಪಾರ್ಕ್ ಸ್ಟೇಡಿಯಂನಲ್ಲಿ ಬೊರುಸ್ಸಿಯಾ ಡಾರ್ಟ್ ಮಂಡ್ ವಿರುದ್ಧ ನಡೆದ ಪಂದ್ಯ ರೋಚಕವಾಗಿದ್ದರೂ ಬಾಯರ್ನ್ ಅಭಿಮಾನಿಗಳಿಗೆ ನಿರಾಶೆ ಮೂಡಿಸಿತು. ಬೊರುಸ್ಸಿಯಾ ಪರ ಪಿರೆ ಎಮೆರಿಕ್ ಅಯಬಾಮೆಯಾಂಗ್ ಗೋಲು ಗಳಿಸಿ ಬಾಯರ್ನ್ ಮ್ಯೂನಿಕ್ ಗೆ ಆಘಾತ ತಂದರು. [ಜರ್ಮನಿಯ ಬುಂಡೆಸ್ಲೀಗಾದ 10 ನೇ ವಾರದ ಫಲಿತಾಂಶ]

Bundesliga game week 11: Roundup, results

ಬುಂಡೆಸ್ಲೀಗಾದ ಪ್ರಸಕ್ತ ಸರಣಿಯಲ್ಲಿ ಬಾಯರ್ನ್ ಮೊಟ್ಟ ಮೊದಲ ಸೋಲು ಕಂಡಿದ್ದು, ಎರಡನೇ ಸ್ಥಾನಕ್ಕೆ ಕುಸಿದಿದೆ. ಆರ್ ಬಿ ಲೆಪ್ಜಿಜ್ ಅಗ್ರಸ್ಥಾನಕ್ಕೇರಿದೆ. ಬಾಯರ್ನ್ ವಿರುದ್ಧ ಗೆಲುವು ಸಾಧಿಸಿದ ಡಾರ್ಟ್ ಮಂಡ್ ಮೂರನೇ ಸ್ಥಾನಕ್ಕೇರಿದೆ.

ಜರ್ಮನಿಯ ಬುಂಡೆಸ್ಲೀಗಾದ 11 ನೇ ವಾರದ ಫಲಿತಾಂಶ
* ಬಾಯರ್ನ್ ಲೆವರ್ ಕುಸೆನ್ 2-3 ಆರ್ ಬಿ ಲೆಪ್ಜಿಗ್
* ಡರ್ಮಸ್ಟಡ್ 0-0 ಇಂಗೊಲ್ ಸ್ಟಡ್
* ವೊಲ್ಫ್ ಬರ್ಗ್ 0-0 ಶಾಲ್ಕೆ
* ಅಂಗ್ಸ್ ಬರ್ಗ್ 0-0 ಹೆರ್ಥಾ ಬಿಎಸ್ ಸಿ
* ಮೈನ್ಜ್ 4-2 ಫ್ರೆ ಬರ್ಗ್
* ಮೊಂಚೆನ್ಗಾಬಾಕ್ 1-2 ಎಫ್ ಸಿ ಕೊಲ್ನ್
* ಡಾರ್ಟ್ ಮಂಡ್ 1-0 ಬಾಯರ್ನ್ ಮ್ಯೂನಿಕ್
* ಹಾಫೆನ್ಹೆಮ್ 2-2 ಹ್ಯಾಮ್ಬರ್ಗರ್
* ವಾರ್ಡರ್ ಬ್ರೆಮೆನ್ 1-2 ಐನ್ ತ್ರಾಚ್

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bundesliga game week 11 comes to an end with Bayern Munich losing their top spot to RB Leipzig.
Please Wait while comments are loading...