ಜರ್ಮನಿಯ ಬುಂಡೆಸ್ಲೀಗಾ 10 ನೇ ವಾರ ಭರ್ಜರಿ ಆಟ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 06: ಜರ್ಮನಿಯ ಬುಂಡೆಸ್ಲೀಗಾದ 10 ನೇ ವಾರದ ಮೊದಲ ದಿನದಂದು 9 ಪಂದ್ಯಗಳ ಪೈಕಿ 7 ಪಂದ್ಯಗಳು ಆಡಲಾಯಿತು.

ಬೊರುಸ್ಸಿಯಾ ಡಾರ್ಟ್ ಮಂಡ್ ಗೆಲುವಿನ ಹಾದಿ ಹಿಡಿದು ಹಾಮ್ಬರ್ಗರ್ ಎಸ್ ವಿ ವಿರುದ್ಧ 5-2 ರ ಭರ್ಜರಿ ಜಯ ದಾಖಲಿಸಿತು. ಕಾರ್ಲೊ ಅನ್ಸೆಲೊಟ್ಟಿ ಅವರ ಬಾಯರ್ನ್ ಮ್ಯೂನಿಕ್ ತಂಡದ ಗೆಲುವನ್ನು ಬಿಹೊಫೆಹೆಮಿನ್ ತಂಡ ತಡೆಗಟ್ಟಿ 1-1 ಡ್ರಾ ಸಾಧಿಸಿತು.

Bundesliga game week 10: Roundup, results

ಪಿಯರ್ ಎಮೆರಿಚ್ಕ್ ಔಬಾಮೆಯಾಂಗ್ ಅವರು ಭರ್ಜರಿ ಆಟ ಪ್ರದರ್ಶಿಸಿ ನಾಲ್ಕು ಗೋಲು ಬಾರಿಸಿ ಹಾಗೂ ಔಸ್ಮನೆ ಡೆಮ್ಬೆಲೆ ಅವರು ಮತ್ತೊಂದು ಗೋಲು ಬಾರಿಸಿ ಡಾರ್ಟ್ ಮಂಡ್ ತಂಡಕ್ಕೆ ಅಮೋಘ ಜಯ ದಾಖಲಿಸಲಿ ನೆರವಾದರು.

ಇನ್ನೊಂದೆಡೆ, ಬಾಯರ್ನ್ ಮ್ಯೂನಿಕ್ ತಂಡ ಒಂದು ಅಂಕ ಗಳಿಸಲಿ ತಿಣುಕಾಡಬೇಕಾಯಿತು. ಹಾಫೆನ್ಹೆಮ್ ತಂಡ 34 ನೇ ನಿಮಿಷದಲ್ಲಿ ಗೋಲು ಬಾರಿಸಿ ಸಮಬಲ ಸಾಧಿಸಿತು. ಬಾಯರ್ನ್ ತಂಡ 16 ನೇ ನಿಮಿಷದಲ್ಲಿ ಗಳಿಸಿದ ಗೋಲು ಡ್ರಾ ಸಾಧಿಸಲು ಮಾತ್ರ ಸಾಧ್ಯವಾಯಿತು.

ಬುಂಡೆಸ್ಲೀಗಾದ 10 ನೇ ವಾರದ ಮೊದಲ ದಿನದ ಫಲಿತಾಂಶ
* ಹೆರ್ಥಾ ಬಿಎಸ್ ಸಿ 3-0 ಬೊರುಸ್ಸಿಯಾ ಡಾರ್ಟ್ ಮಂಡ್
* ಹಾಮ್ಬರ್ಗರ್ 2-5 ಡಾರ್ಟ್ ಮಂಡ್
* ಬಾಯರ್ನ್ ಮ್ಯೂನಿಕ್ 1-1 ಹಾಫೆನ್ಹೆಮ್
* ಬಾಯರ್ನ್ ಲೆವೆರ್ ಕುಸೆನ್ 3-2 ಡರ್ಮಸ್ಟಡ್
* ಇಂಗೊಲ್ ಸ್ಟಡ್ 0-2 ಅಂಗ್ಸ್ ಬರ್ಗ್
* ಫ್ರೆ ಬರ್ಗ್ 0-3 ವೊಲ್ಫ್ ಬರ್ಗ್
* ಐನ್ ತ್ರಾಚ್ 1-0 ಎಫ್ ಸಿ ಕೊಲ್ನ್

ಬುಂಡೆಸ್ಲೀಗಾದ 10 ನೇ ವಾರದ ಎರಡನೇ ದಿನ (ಭಾನುವಾರ, ನವೆಂಬರ್ 06)
* ಆರ್ ಬಿ ಲೆಪ್ಜಿಗ್ 3-1 ಮೈನ್ಜ್
* ಶಾಲ್ಕೆ 3-1 ವಾರ್ಡರ್ ಬ್ರೆಮೆನ್ (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bundesliga game week 10 witnessed some exciting clashes as 7 out of 9 matches were played on Day 1 of the game week.
Please Wait while comments are loading...