ಬಿಗ್ ಡೀಲ್ ː ವಿಶ್ವದಾಖಲೆ ಮೊತ್ತಕ್ಕೆ ನೇಮಾರ್ ಹೊಸ ತಂಡಕ್ಕೆ

Posted By:
Subscribe to Oneindia Kannada

ಪ್ಯಾರೀಸ್, ಆಗಸ್ಟ್ 04: ಫುಟ್ಬಾಲ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ಟ್ರಾನ್ಸ್ ಫರ್ ಡೀಲ್ ಮುಕ್ತಾಯವಾಗಿದೆ. ಫ್ರೆಂಚ್ ಕ್ಲಬ್ ನೀಡಿದ ಮೊತ್ತಕ್ಕೆ ಸ್ಪೇನಿನ ಬಾರ್ಸಿಲೋನಾ ಕ್ಲಬ್ ಒಪ್ಪಿಗೆ ಮುದ್ರೆ ಒತ್ತಿದೆ.ಬ್ರೆಜಿಲಿನ ಸ್ಟಾರ್ ಆಟಗಾರ ನೇಮಾರ್ ಜ್ಯೂನಿಯರ್ ಅವರು ಸ್ಪೇನಿನ ಬಾರ್ಸಿಲೋನಾ ತಂಡವನ್ನು ತೊರೆಯುತ್ತಿದ್ದಾರೆ.

ಕರೆನ್ಸಿ ಕನ್ವರ್ಟರ್ ಇಲ್ಲಿದೆ ಕ್ಲಿಕ್ ಮಾಡಿ

ಬಹುಬೇಡಿಕೆಯ ಈ ಪುಟ್ಬಾಲರ್ ಅವರ ವರ್ಗಕ್ಕೆ ಫ್ರೆಂಚ್ ಕ್ಲಬ್ ಪ್ಯಾರೀಸ್ ಸೈಂಟ್ ಜರ್ಮನ್ (ಪಿಎಸ್ ಜಿ) ಭಾರಿ ಮೊತ್ತ ನೀಡಿದೆ.
222 ಮಿಲಿಯನ್ ಯುರೋ ಮೊತ್ತಕ್ಕೆ ನೇಮಾರ್ ಅವರು ಪಿಎಸ್ ಜಿ ಸೇರುತ್ತಿದ್ದು, ವಿಶ್ವದಾಖಲೆ ಮೊತ್ತದ ಟ್ರಾನ್ಸ್ ಫರ್ ಇದಾಗಿದೆ.

Paris Saint-Germain confirmed the signing of Neymar from Barcelona for a world-record €222 million fee after activating the Brazil international's buyout clause on Thursday.

ನೇಮಾರ್ ಅವರಿಗೆ ಸ್ವಾಗತ ಕೋರಿ ಗುರುವಾರ ತಡರಾತ್ರಿ ಪ್ಯಾರೀಸ್ ಸೈಂಟ್ ಜರ್ಮನ್ (ಪಿಎಸ್ ಜಿ) ತಂಡ ಟ್ವೀಟ್ ಮಾಡಿದೆ. ವರ್ಗಾವಣೆ ಮೊತ್ತ 222 ಮಿಲಿಯನ್ ಯುರೋ ಮೂಲಕ ಇದು ಅತ್ಯಂತ ದುಬಾರಿ ಮೊತ್ತದ ಆಟಗಾರನ ವರ್ಗವಣೆಯಾಗಿದೆ.

ಅಬ್ಬಾ ಪೋಗ್ಬಾ! ಕ್ಲಬ್ಬಿನಿಂದ ಕ್ಲಬ್ಬಿಗೆ ಜಿಗಿಯಲು 813 ಕೋಟಿ ರು

ಈ ಹಿಂದೆ ಕಳೆದ ವರ್ಷ ಯೂವೆಂಟಸ್ ನಿಂದ ಪಾಲ್ ಪೋಗ್ಬಾರನ್ನು ಇಂಗ್ಲೆಂಡಿನ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ 105 ಮಿಲಿಯನ್ ಯುರೋ ಕೊಟ್ಟು ಖರೀದಿಸಿತ್ತು.

ಈಗ ನೇಮಾರ್ ಗೆ ವಾರ್ಷಿಕ 30 ಮಿಲಿಯನ್ ಯುರೋ ಸಿಗಲಿದೆ. ನೇಮಾರ್ ಅವರ ನೆಚ್ಚಿನ 10ನೇ ನಂಬರ್ ಜರ್ಸಿ ಸಿಗುವುದೋ ಇಲ್ಲವೋ ಕಾದು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Paris Saint-Germain confirmed the signing of Neymar from Barcelona for a world-record €222 million fee after activating the Brazil international's buyout clause on Thursday.
Please Wait while comments are loading...