ಬೆಂಗಳೂರು ಎಫ್ಸಿಗೆ ಕಾದಿದೆ 10 ಲಕ್ಷ ಡಾಲರ್ ಬಹುಮಾನ!

Posted By:
Subscribe to Oneindia Kannada

ದೋಹಾ, ನವೆಂಬರ್ 4 : ಶನಿವಾರ ನಡೆಯಲಿರುವ ಎಎಫ್ ಸಿ ಫೈನಲ್ ಪಂದ್ಯದಲ್ಲಿ ಇರಾಕ್‌ನ ಫುಟ್ಬಾಲ್ ಕ್ಲಬ್ ಕುವಾ ಅಲ್-ಜವಿಯಾ ವಿರುದ್ಧ ಬೆಂಗಳೂರು ಎಫ್‌ಸಿ ಗೆಲುವು ಸಾಧಿಸಿದರೆ ಒಂದು ಮಿಲಿಯನ್‌ ಡಾಲರ್ ಬಹುಮಾನ ಕಟ್ಟಿಟ್ಟ ಬುತ್ತಿ.

ಇದೇ ಮೊದಲ ಬಾರಿಗೆ ಇಂಡಿಯಾದ ಒಂದು ಕ್ಲಬ್ ಎಎಫ್ಸಿ ಪಂದ್ಯಾವಳಿಯ ಅಂತಿಮ ಹಂತ ತಲುಪಿದೆ. ಸೋತವರಿಗೆ ಅರ್ಧ ಮಿಲಿಯನ್ ಡಾಲರ್ ಮೊತ್ತ ಬಹುಮಾನವಾಗಿ ದಕ್ಕಲಿದೆ.

ಎಎಫ್ಸಿ ಫುಟ್ಬಾಲ್ ಕಪ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಬಹುಮಾನ ಘೋಷಿಸಿರುವುದಕ್ಕೆ ಕಾರಣವೂ ಇದೆ. ಈ ಹಿಂದೆ ಡೆಂಪೋ(2008) ಮತ್ತು ಈಸ್ಟ್ ಬೆಂಗಾಲ್(2013) ರಲ್ಲಿ ಎಫ್ಸಿನ ಸೆಮಿ ಫೈನಲ್‌ ಅನ್ನು ತಲುಪಿದ್ದವು. ಈ ಬಾರಿಯಾದರೂ ಭಾರತದ ತಂಡ ಗೆಲ್ಲುವುದೆ ಎಂಬ ಆಸೆ ಅಭಿಮಾನಿಗಳ ಮನದಲ್ಲಿ ಮನೆಮಾಡಿದೆ.[ಜರ್ಮನಿಯ ವಿಶ್ವಕಪ್ ಹೀರೋ ಮಿರೋಸ್ಲವ್ ನಿವೃತ್ತಿ!]

$1 million prize money awaits Bengaluru FC in AFC Cup

ಇಡೀ ದೇಶವೇ ನಮ್ಮ ಹಿಂದಿದೆ, ಈ ನಿರ್ಧಾರವನ್ನು ಬಹಳ ವರ್ಷದ ಹಿಂದೆಯೇ ತೆಗೆದುಕೊಳ್ಳಲಾಗಿತ್ತು. ನೇರ ಪ್ರವೇಶ ಮತ್ತು ಭಾರತದ ಹೊಸ ಮಾದರಿ ಕ್ಲಬ್‌ಗಳಿಗೆ ಇದು ಆದರ್ಶವಾಗಲಿದೆ ಎಂದು ಐ ಲೀಗ್‌ ಸಿಇಒ ಸುನಂದೋ ಧಾರ್ ತಿಳಿಸಿದ್ದಾರೆ.

ಬೆಂಗಳೂರು ಎಫ್‌ ಸಿ ಎರಡುಬಾರಿ ಐಲೀಗ್ ಮತ್ತು ಒಂದು ಬಾರಿ ಫೆಡರೇಶನ್ ಕಪ್ ಅನ್ನು ಪಡೆದುಕೊಂಡಿದೆ. ದೇಶದ ಒಲ್ಡ್ ಕಲ್ಕತ್ತಾ ಕ್ಲಬ್‌ ಮೊಹಮಡನ್ ಕ್ರೀಡಾ ಘಟಕವು ಬೆಂಗಳೂರು ಎಫ್‌ಸಿ ಪತ್ಯೇಕವಾಗಿ ಅಭಿನಂದನೆಯನ್ನು ಸಲ್ಲಿಸಿದೆ.

ಇದೇ ಕ್ಗಬ್ ನ ಕಾರ್ಯಕಾರಿ ಸಮಿತಿ ಸದಸ್ಯರು 2016 ಎಎಫ್ಸಿ ಕಪ್‌ ಅಂತಿಮ ಪಂದ್ಯದಲ್ಲಿ ಎರ್ ಪೋರ್ ಕ್ಲಬ್‌ ಎದುರಿಸುತ್ತಿರುವುದಕ್ಕೆ ಅಭಿನಂದಿಸಿದ್ದಾರೆ. ನಿಮ್ಮನ್ನು ನೀವು ನಂಬಿ ಶ್ರಮ ವಹಿಸಿ ಕೆಲಸ ಮಾಡಿದರೆ ಗೆಲುವು ಖಂಡಿತ ಎಂದು ತಿಳಿಸಿದ್ದಾರೆ. [ಲಾ ಲೀಗ 2016-17: ಕ್ರೀಡೆಯ 11ನೇ ಸರಣಿ ಪ್ರಾರಂಭ]

ಇಪ್ಪತ್ತು ವರ್ಷದ ಉದಾಂತ ಸಿಂಗ್, ಅಲ್ಬರ್ಟ್ ರೋಕಾ ಮುಂತಾದವರನ್ನು ಹೊಂದಿರುವುದು ಗೆಲ್ಲಲು ಒಂದು ಉತ್ತಮ ವೇದಿಕೆಯಾಗಿದೆ ಎಂದಿದ್ದಾರೆ. ಕ್ಲಬ್‌ ಕೇರಿಯರ್ನಲ್ಲಿ ನನ್ನ ಜೀವನದ ಬಹುದೊಡ್ಡ ಮ್ಯಾಚ್ ಎಂದು ಉದಾಂತ ಸಿಂಗ್‌ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A whopping $1 million awaits Bengaluru FC in prize money if they manage to clinch the AFC Cup here on Saturday against Iraqi football club Quwa Al-Jawiya. The runners-up will bag half a million dollars.
Please Wait while comments are loading...