ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್ ಅರ್ಹತೆ ಹಾದಿ ಕಠಿಣ: ಭಾರತಕ್ಕೆ ಮತ್ತೆ ಸೋಲಿನ ಕಹಿ

By Mahesh

ನವದೆಹಲಿ, ಜೂ.16: ಇತ್ತೀಚೆಗೆ ಬೆಂಗಳೂರಿನಲ್ಲಿ ಒಮಾನ್ ವಿರುದ್ಧ ಸೋಲು ಕಂಡಿದ್ದ ಭಾರತೀಯ ಫುಟ್ಬಾಲ್ ತಂಡ ಮಂಗಳವಾರ ಗುವಾಮ್ ವಿರುದ್ಧ ಸೋಲಿನ ಕಹಿ ಉಂಡಿದೆ.

2018ರ ಫಿಫಾ ಫುಟ್ಬಾಲ್ ವಿಶ್ವಕಪ್ ನ ಅರ್ಹತಾ ಟೂರ್ನಿಯಲ್ಲಿ ಪಂದ್ಯದಲ್ಲಿ ಫೀಫಾ ಶ್ರೇಯಾಂಕದಲ್ಲಿ ತನಗಿಂತ 33 ಸ್ಥಾನ ಕೆಳಗಿರುವ ಗುವಾಯ್ ದೇಶದ ವಿರುದ್ಧ ಭಾರತ 2-1 ಗೋಲುಗಳ ಅಂತರದಲ್ಲಿ ಸೋಲು ಅನುಭವಿಸಿದೆ. ಭಾರತ 141 ಸ್ಥಾನದಲ್ಲಿದ್ದರೆ, ಗುವಾಯ್ 174ನೇ ಸ್ಥಾನದಲ್ಲಿದೆ.

India go down 1-2 to Guam

ಗುವಾಯ್ ಪರ ಬ್ರಂಡನ್ ಮೆಕ್ ಡೋನಾಲ್ಡ್ ಹೆಡ್ ಮಾಡುವ ಮೂಲಕ ಗೋಲು ಗಳಿಸಿ ಮುನ್ನಡೆ ಸಾಧಿಸಿದರು. ಟ್ರಾವಿಸ್ ನಿಕ್ಲಾ ಅವರು 60ನೇ ನಿಮಿಷದಲ್ಲಿ 2ನೇ ಗೋಲು ಬಾರಿಸಿದರು. [ಕೆಚ್ಚೆದೆಯ ದಿಟ್ಟ ಪ್ರದರ್ಶನದ ನಡುವೆ ಸೋಲು ಕಂಡ ಭಾರತ]

ಒಮಾನ್ ವಿರುದ್ಧ ಗೋಲು ಬಾರಿಸಿದ್ದ ಛೆಟ್ರಿ ಈ ಪಂದ್ಯದಲ್ಲೂ ಏಕೈಕ ಗೋಲು ಗಳಿಸಿದರು. 93ನೇ ನಿಮಿಷದಲ್ಲಿ ಬಾರಿಸಿದ ಗೋಲು ಅವರ ವೃತ್ತಿ ಬದುಕಿನ 50ನೇ ಗೋಲಾಗಿದೆ.

ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲೂ ಇಷ್ಟೇ ಅಂತರದಿಂದ ಭಾರತ ಸೋಲು ಕಂಡಿತ್ತು. ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಭಾರತ ವಿಶ್ವಕಪ್ ಅರ್ಹತೆ ಹಾದಿ ಕಠಿಣವಾಗಲಿದೆ.

ಫೀಫಾ ವಿಶ್ವಕಪ್ ಅರ್ಹತಾ ಟೂರ್ನಿಯ ಡಿ ಗುಂಪಿನಲ್ಲಿರುವ ಭಾರತ, ಒಮಾನ್ ವಿರುದ್ಧ ತೋರಿದ ಹೋರಾಟದ ಪ್ರದರ್ಶನ ಗುವಾಯ್ ವಿರುದ್ಧ ಕಂಡು ಬರಲಿಲ್ಲ.



ಭಾರತ ತನ್ನ ಮುಂದಿನ ಪಂದ್ಯವನ್ನು ಬಲಿಷ್ಠ ಇರಾನ್ ವಿರುದ್ಧ ಸೆ.8ರಂದು ಸೆಣಸಲಿದೆ. ಡಿ ಗುಂಪಿನಲ್ಲಿ ಇರಾನ್, ಗುವಾಮ್, ಇರಾನ್ ಹಾಗೂ ತುರ್ಕ್ ಮೇನಿಸ್ತಾನ್ ಜೊತೆ ಭಾರತ ಸೆಣಸಾಡಿ ಅರ್ಹತೆ ಗಳಿಸಲು ಯತ್ನಿಸುತ್ತಿದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X