ಈ ಭಾರತೀಯ ರೆಸ್ಲರ್ WWE ಗೆ ಹೊಸ ಮಹಾರಾಜ!

By: ರಾಜ
Subscribe to Oneindia Kannada

ಇಲಿನಾಯ್, ಮೇ 22: ಗ್ರೇಟ್ ಖಲಿ ನಂತರ WWE ರೆಸ್ಲಿಂಗ್ ಚಾಂಪಿಯನ್ ಆಗಿ ಭಾರತ ಮೂಲದ ಜಿಂದರ್ ಮಹಲ್ ಹೊರ ಹೊಮ್ಮಿದ್ದಾರೆ. ವಿಶ್ವ ಹೇವಿ ವೇಯ್ಟ್ ಚಾಂಪಿಯನ್ ಶಿಪ್ ಬೆಲ್ಟ್ ಧರಿಸಿ ಮಿಂಚಿದ್ದಾರೆ. ರೆಸ್ಲಿಂಗ್ ಅಂಗಳಕ್ಕೆ ಹೊಸ ಮಹಾರಾಜ ಸಿಕ್ಕಿದ್ದಾನೆ ಎಂದು ಅಭಿಮಾನಿಗಳು ಶುಭ ಹಾರೈಕೆಯ ಮಹಾಪೂರವನ್ನೇ ಹರಿಸಿದ್ದಾರೆ.

WWE ಅಂಗಳದ ಜನಪ್ರಿಯ ಕುಸ್ತಿಪಟು Randy ಒರ್ಟನ್ ಗೆ ಆಘಾತ ನೀಡಿದ ಭಾರತೀಯ ಮೂಲದ 30 ವರ್ಷ ವಯಸ್ಸಿನ ಕುಸ್ತಿಪಟು ಜಿಂದರ್ ಮಹಲ್ ಚಾಂಪಿಯನ್ ಬೆಲ್ಟ್ ಧರಿಸುತ್ತಿದ್ದಂತೆ ರೆಸ್ಲಿಂಗ್ ವರ್ಲ್ಡ್ ಅಚ್ಚರಿಯಿಂದ ನೋಡಿದೆ. ಹೌದು, ಜಿಂದರ್ ಈಗ WWE ವಿಶ್ವ ಹೆವಿ ವೇಯ್ಟ್ ಚಾಂಪಿಯನ್.[ಟ್ರಂಪ್ ನಂತರ ಯುಎಸ್ ಅಧ್ಯಕ್ಷ ಸ್ಥಾನ ಬಯಸಿದ WWE ಸ್ಟಾರ್]

ಬ್ಯಾಕ್ಲ್ಯಾಶ್ ಇವೆಂಟ್ ನಲ್ಲಿ WWE ಹೆವಿ ವೇಯ್ಟ್ ಚಾಂಪಿಯನ್ ಶಿಪ್ ಗೆದ್ದ ಭಾರತೀಯ ಮೂಲದ ಮೊದಲ ಕುಸ್ತಿಪಟು ಎನಿಸಿಕೊಂಡಿದ್ದಾರೆ. 2007ರಲ್ಲಿ ದಿ ಗ್ರೇಟ್ ಖಲಿ ಈ ಸಾಧನೆ ಮಾಡಿದ್ದರು.[ಚಂದಾದಾರರಿಗಾಗಿ ಬೆತ್ತಲಾದ WWE ಸ್ಟಾರ್ ಜೋಡಿ]

ಆದರೆ, ಅವರು ಬೇರೆ ವಿಭಾಗದಲ್ಲಿ ಗೆದ್ದು ಚಾಂಪಿಯನ್ ಎನಿಸಿಕೊಂಡಿದ್ದರು. ಈಗ ಒರ್ಟನ್ ರನ್ನು ಬಗ್ಗುಬಡಿದ ಕೆನಡಾದ ಪ್ರಜೆ ಮಹಲ್ 50ನೇ WWE ಚಾಂಪಿಯನ್ ಎನಿಸಿಕೊಂಡಿದ್ದಾರೆ.

ಜಿಂದರ್ ಮಹಲ್ ಚಾಂಪಿಯನ್

ಜಿಂದರ್ ಮಹಲ್ ಚಾಂಪಿಯನ್

WWEನಲ್ಲಿ ಭಾರತವನ್ನು ಪ್ರತಿನಿಧಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಮಹಲ್ ಹೇಳಿದ್ದಾರೆ. 2007ರ ನಂತರ ಭಾರತದ ಕುಸ್ತಿಪಟುವೊಬ್ಬರು ಚಾಂಪಿಯನ್ ಎನಿಸಿಕೊಂಡಿದ್ದಾರೆ. (Image courtesy: WWE Twitter)

ಜಿಂದರ್ ಮಹಲ್ ಆಳ್ವಿಕೆ

ಮಹಾರಾಜನ ಆಳ್ವಿಕೆ ಈಗ ಆರಂಭವಾಗಿದೆ, ಜಿಂದರ್ ಮಹಲ್ ಹೊಸ ಚಾಂಪಿಯನ್ ಎಂದು ಘೋಷಿಸಿದ WWE.

ಭಾರತೀಯನ ಸಾಧನೆ

ಇದು ಭಾರತೀಯ ಕುಸ್ತಿಪಟುವಿನ ಸಾಧನೆ. ಅಮೆರಿಕನ್ನರ ಮುಂದೆ ಭಾರತೀಯ ಚಾಂಪಿಯನ್ ಸೂಪರ್ ಎಂದು ಮಹಲ್ ಅವರ ಸಾಧನೆಯನ್ನು ಬಣ್ಣಿಸಿದ ಅಭಿಮಾನಿಗಳು.

ಮಹಲ್ ಹೊಗಳಿದ ಮಹಿಳಾ ರೆಸ್ಲರ್

ಮಹಲ್ ಸಾಧನೆ, ಪರಿಶ್ರಮವನ್ನು ಹಾಡಿ ಹೊಗಳಿದ ಮಹಿಳಾ ರೆಸ್ಲಿಂಗ್ ಚಾಂಪಿಯನ್ ಡೊನ ಬ್ರೂಕ್ಸ್, ಶುಭ ಹಾರೈಸಿದ್ದು ಹೀಗೆ

ಕುಸ್ತಿ ಚಾಂಪಿಯನ್

ರೆಸ್ಲಿಂಗ್ ಚಾಂಪಿಯನ್ ಜಿಂದರ್ ಮಹಲ್ ಸಾಧನೆ ಹೆಮ್ಮೆಯ ವಿಷ್ಯ ಎಂದು ವಿಶ್ವದೆಲ್ಲೆಡೆಯಿಂದ ಶುಭ ಹಾರೈಕೆಗಳು ಬಂದಿವೆ. ಭಾರತೀಯನೊಬ್ಬ ಚಾಂಪಿಯನ್ ಆಗಿರುವುದು WWE ಬಾಸ್ ವಿನ್ಸಿ ಮೆಕ್ ಮೋಹನ್ ಗೂ ಥ್ರಿಲ್ ಕೊಟ್ಟಿದೆ. ಇದರಿಂದ ಭಾರತದಲ್ಲಿ ಇನ್ನಷ್ಟು ಜನಪ್ರಿಯತೆ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The WWE Universe was shocked after Jinder Mahal pulled off the shocking win against Randy Orton at the Backlash PPV. He pinned the Viper of the WWE to become the new WWE champion.
Please Wait while comments are loading...