ಯುರೋ 2016: ಕೊಹ್ಲಿ ಬೆಂಬಲಿಸುವ ತಂಡ ಯಾವುದು?

Posted By:
Subscribe to Oneindia Kannada

ಬೆಂಗಳೂರು, ಜೂನ್ 09: ಫುಟ್ಬಾಲ್ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಯುಇಎಫ್ಎ ಯುರೋಪಿಯನ್ ಚಾಂಪಿಯನ್ ಶಿಪ್ (ಯುರೋ 2016) ಶನಿವಾರ (ಜೂನ್ 11) ಫ್ರಾನ್ಸಿನಲ್ಲಿ ಶುಭಾರಂಭ ಕಾಣಲಿದೆ. ಈ ಟೂರ್ನಿಗಾಗಿ ನಾನು ಕೂಡಾ ಕುತೂಹಲದಿಂದ ಕಾದಿದ್ದೇನೆ ಎಂದು ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಯುರೋಪಿನ 24 ದೇಶಗಳ ಫುಟ್ಬಾಲ್ ತಂಡಗಳ ಕದನಕ್ಕಾಗಿ ನಾನು ಕೂಡಾ ಕಾತುರದಿಂದ ಕಾದಿದ್ದೇನೆ. ನಾನು ಜರ್ಮನಿಯನ್ನು ಬೆಂಬಲಿಸುತ್ತಿದ್ದೇನೆ ಎಂದಿದ್ದಾರೆ. 18 ನಂಬರ್ ಜರ್ಮನಿ ಜರ್ಸಿ ತೊಟ್ಟು ಪೋಸ್ ನೀಡಿದ್ದಾರೆ.[ಯುರೋ 2016 ಫುಟ್ಬಾಲ್ ಹಬ್ಬ ಫುಲ್ ವೇಳಾಪಟ್ಟಿ]

Euro 2016: Which team is 'excited' Virat Kohli supporting?

ಮುಂಬರುವ ಜಿಂಬಾಬ್ವೆ ಪ್ರವಾಸದಿಂದ ವಿಶ್ರಾಂತಿ ಬಯಸಿರುವ ಕೊಹ್ಲಿ ಅವರು ಮುಂಬರುವ ಯುರೋ 2016ರಲ್ಲಿ ಜರ್ಮನಿ ಪರ ಬ್ಯಾಟಿಂಗ್ ಮಾಡುವುದಾಗಿ ಹೇಳಿದ್ದಾರೆ. [ಇಟಲಿ ಬಗ್ಗುಬಡಿದು, ಯುರೋ ಕಪ್ ಗೆದ್ದ ಸ್ಪೇನ್]

ಹಾಲಿ ವಿಶ್ವ ಚಾಂಪಿಯನ್ ಜರ್ಮನಿ ತಂಡ ಯುರೋಈ 2016 ಕಪ್ ಎತ್ತಬಲ್ಲ ಫೇವರೀಟ್ ತಂಡಗಳ ಪೈಕಿ ಒಂದೆನಿಸಿದೆ. ಸಿ ಗುಂಪಿನಲ್ಲಿ ಜರ್ಮನಿ ಜೊತೆಗೆ ಪೋಲ್ಯಾಂಡ್, ಉಕ್ರೇನ್, ಉತ್ತರ ಐರ್ಲೆಂಡ್ ತಂಡಗಳಿವೆ. [ಯುರೋ: ಡಬ್ಬಲ್ ಹ್ಯಾಟ್ರಿಕ್ ತಾರೆ, ದಾಖಲೆಗಳು]

1996ರ ಯುರೋಪಿಯನ್ ಚಾಂಪಿಯನ್ ಹಾಗೂ 2014ರ ಫೀಫಾ ವಿಶ್ವಕಪ್ ವಿಜೇತ ತಂಡ ಜರ್ಮನಿಗೆ ಸ್ಪೇನ್ ಪ್ರಬಲ ಎದುರಾಳಿಯಾಗಿದೆ. ಸ್ಪೇನ್ ಮೂರನೇ ಬಾರಿ ಯುರೋ ಕಪ್ ಎತ್ತುವ ಉತ್ಸಾಹದಲ್ಲಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The highly-awaited UEFA European Championship (Euro 2016) football tournament is all set to kick-off on Saturday (June 11) in France.
Please Wait while comments are loading...