ಯುರೋ 2016: ಸೆಮಿಫೈನಲ್ ಹಂತದ ವೇಳಾಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 04: ಯುರೋ ಫುಟ್ಬಾಲ್ 2016ನ ಕ್ವಾರ್ಟರ್ ಫೈನಲ್ ಹಂತದ ಆಟ ಮುಗಿದಿದೆ. ಸೆಮಿಫೈನಲ್ ಹಂತದಲ್ಲಿ ಅತಿಥೇಯ ಫ್ರಾನ್ಸ್ ಅಲ್ಲದೆ ಹಾಲಿ ಚಾಂಪಿಯನ್ ಜರ್ಮನಿ ಕೂಡಾ ಇದೆ. ಜೊತೆಗೆ ಪೋರ್ಚುಗಲ್ ತಂಡವು ನಿರೀಕ್ಷಿತ ಪ್ರದರ್ಶನದ ಮೂಲಕ ನಾಲ್ಕರ ಹಂತ ತಲುಪಿದ್ದರೆ, ವೇಲ್ಸ್ ತಂಡ ಅಚ್ಚರಿಯ ಎಂಟ್ರಿ ಕೂಡಾ ಗಮನ ಸೆಳೆದಿದೆ.

ಸೋಮವಾರ ತಡರಾತ್ರಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅತಿಥೇಯ ಫ್ರಾನ್ಸ್ ತಂಡದ ವಿರುದ್ಧ ಐಸ್ ಲ್ಯಾಂಡ್ ತಣ್ಣಗಾಯಿತು. ಡಿಡಿರ್ ಡೆಸ್ಚಾಂಪ್ ಅವರ ಕೋಚ್ ತಂಡ 5 ಭರ್ಜರಿ ಗೋಲು ಹೊಡೆದರೆ, ಐಸ್ ಲ್ಯಾಂಡ್ ತಂಡ 2 ಗೋಲು ಹೊಡೆದು ಸೋತು ಸುಣ್ಣವಾಯಿತು. ಆದರೆ, ಕ್ವಾರ್ಟರ್ ಫೈನಲ್ ಹಂತ ತಲುಪಿದ ಸಾಧನೆ ಮಾಡಿದ ಐಸ್ ಲ್ಯಾಂಡ್ ತಂಡ ಮೆಚ್ಚುಗೆಗೆ ಪಾತ್ರವಾಯಿತು.[ವಿಡಿಯೋ: ಇಟಲಿ ಮಣಿಸಿ ಸೆಮಿಫೈನಲ್ ತಲುಪಿದ ಜರ್ಮನಿ]

ಕ್ವಾರ್ಟರ್ ಫೈನಲ್ ಗಳ ಪೈಕಿ ಜರ್ಮನಿ ಹಾಗೂ ಇಟಲಿ ಪಂದ್ಯ ರೋಚಕತೆಯಿಂದ ಕೂಡಿತ್ತು. 18 ಪೆನಾಲ್ಟಿ ಕಿಕ್ ಕಂಡ ಈ ಪಂದ್ಯದಲ್ಲಿ ಅಂತಿಮವಾಗಿ ಜರ್ಮನಿ ತಂಡ 6-5 ಗೋಲುಗಳ ಅಂತರದಲ್ಲಿಅಜ್ಜುರೀಸ್(ಇಟಲಿ) ಗಳನ್ನು ಬಗ್ಗುಬಡಿಯಿತು.

Euro 2016: Semi-Final line-up, fixtures, start times in IST

ವೇಲ್ಸ್ ತಂಡ 58 ವರ್ಷಗಳ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೆಮಿಫೈನಲ್ ಹಂತ ತಲುಪಿದ ಸಾಧನೆ ಮಾಡಿದ್ದಲ್ಲದೆ, ಚೊಚ್ಚಲ ಯುರೋ ಕಪ್ ನಲ್ಲೇ ಬಲಿಷ್ಠ ತಂಡಗಳನ್ನು ಮಣಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ.[ವಿಡಿಯೋ: ರೊನಾಲ್ಡೊ ಕಮಾಲ್, ಸೆಮಿಸ್ ಗೆ ಪೋರ್ಚುಗಲ್]

ಪೋರ್ಚುಗಲ್ ತಂಡಕ್ಕೆ ಪೋಲೆಂಡ್ ಪ್ರಬಲ ಪೈಪೋಟಿ ನೀಡಿದರೂ ಕ್ವಾರ್ಟರ್ ಫೈನಲ್ ನಲ್ಲಿ 3-5 ಅಂತರದಲ್ಲಿ ಸೋಲು ಕಂಡಿತು. ರೊನಾಲ್ಡೋ ಹಾಗೂ 18 ವರ್ಷ ವಯಸ್ಸಿನ ರೆನಾಟೋ ಸ್ಯಾಂಚಸ್ ಉತ್ತಮ ಪ್ರದರ್ಶನ ನೀಡುತ್ತಿದ್ದು ಫೈನಲ್ ತಲುಪುವ ನಿರೀಕ್ಷೆಯಿದೆ.

ಯುರೋ 2016 ಕ್ವಾರ್ಟರ್ ಫೈನಲ್ ಹಂತದ ಫಲಿತಾಂಶ
ಪಂದ್ಯ 1: ಪೋಲೆಂಡ್ Vs ಪೋರ್ಚುಗಲ್ 1-1 (3-5)
ಪಂದ್ಯ 2: ವೇಲ್ಸ್ Vs ಬೆಲ್ಜಿಯಂ 3-1

ಪಂದ್ಯ 3: ಜರ್ಮನಿ Vs ಇಟಲಿ 1-1 (6-5)
ಪಂದ್ಯ 4: ಫ್ರಾನ್ಸ್ Vs ಐಸ್ ಲ್ಯಾಂಡ್ 5-2ಸೆಮಿಫೈನಲ್ ವೇಳಾಪಟ್ಟಿ (ಎಲ್ಲಾ ಪಂದ್ಯಗಳು ಸೋನಿ ಸಿಕ್ಸ್/ ಸೋನಿ ಇಎಸ್ ಪಿಎನ್ ನಲ್ಲಿ ಲೈವ್ ಪ್ರಸಾರ)

ಪಂದ್ಯ 1: ಪೋರ್ಚುಗಲ್ Vs ವೇಲ್ಸ್ 12.30 AM IST (ಲಿಯಾನ್) ಜುಲೈ 7 (ಗುರುವಾರ)

ಪಂದ್ಯ 2 :
ಫ್ರಾನ್ಸ್ Vs ಜರ್ಮನಿ : 12.30 AM IST (ಮಾರ್ಷಲೆ) ಜುಲೈ 8 (ಶುಕ್ರವಾರ)

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The quarter-final of Euro 2016 are over now as we are left with the last four teams of the tournament.Here are the Euro 2016: Semi-Final line-up, fixtures, start times in IST
Please Wait while comments are loading...