ಯುರೋ 2016 : ಎಂಟರ ಘಟ್ಟದ ಫುಲ್ ವೇಳಾಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 28: ಯುರೋ 2016 ಫುಟ್ಬಾಲ್ ಟೂರ್ನಮೆಂಟ್ ಕ್ವಾರ್ಟರ್ ಫೈನಲ್ ಹಂತಕ್ಕೆ ಸಿದ್ಧವಾಗಿದೆ. ಜುಲೈ 1 ರಿಂದ ಎಂಟರಘಟ್ಟದ ಪಂದ್ಯಗಳು ನಡೆಯಲಿದ್ದು, ರೋಚಕ ಪಂದ್ಯದ ನಿರೀಕ್ಷೆಯಿದೆ. 16 ರ ಹಂತದಲ್ಲಿ ಕ್ರೋಯೇಷಿಯಾ, ಹಂಗೇರಿ ಅಲ್ಲದೆ ಹಾಲಿ ಚಾಂಪಿಯನ್ ಸ್ಪೇನ್ ಹಾಗೂ ಇಂಗ್ಲೆಂಡ್ ತಂಡ ಟೂರ್ನಿಯಿಂದ ಹೊರಬಿದ್ದು, ಅಭಿಮಾನಿಗಳಿಗೆ ಆಘಾತ ತಂದಿವೆ.

ನಾಕೌಟ್ ಹಂತವನ್ನು ಸುಲಭವಾಗಿ ದಾಟುವ ನಿರೀಕ್ಷೆಯಲ್ಲಿದ್ದ ಸ್ಪೇನ್ ಹಾಗೂ ಇಂಗ್ಲೆಂಡ್ ಇನ್ನೂ ಆಘಾತದಿಂದ ಹೊರಬಂದಿಲ್ಲ.ಸ್ಪೇನ್ ಸೋಲಿಸಿದ ಇಟಲಿ ಈಗ ಬಲಿಷ್ಠ ಜರ್ಮನಿ ವಿರುದ್ಧ ಆಡಬೇಕಿದೆ. ಇನ್ನು ಇಂಗ್ಲೆಂಡ್ ಗೆ ಅಚ್ಚರಿಯ ಆಘಾತ ತಂದ ಐಸ್ ಲ್ಯಾಂಡ್ ತಂಡವನ್ನು ಅತಿಥೇಯ ಫ್ರಾನ್ಸ್ ತಂಡ ಎದುರಿಸಲಿದೆ.

Chiellini of Italy

ಇನ್ನೊಂದೆಡೆ ಪೋರ್ಚುಗಲ್ ಹಾಗೂ ಬೆಲ್ಜಿಯಂ ತಂಡಗಳು ಸುಲಭವಾಗಿ ಸೆಮಿಫೈನಲ್ ಹಾಗೂ ಫೈನಲ್ ಕನಸು ಕಾಣಬಹುದಾಗಿದೆ. ಎಲ್ಲಾ ಪಂದ್ಯಗಳು ಸೋನಿ ಸಿಕ್ಸ್ ಹಾಗೂ ಸೋನಿ ಇಎಸ್ ಪಿಎನ್ ನಲ್ಲಿ ಪ್ರಸಾರವಾಗಲಿದೆ. ಅಥವಾ ಸೋನಿ LIV ಮೊಬೈಲ್ ಅಪ್ಲಿಕೇಷನ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಪಂದ್ಯಗಳ ವೇಳಾಪಟ್ಟಿ ಭಾರತೀಯ ಕಾಲಮಾನ ಪ್ರಕಾರ ಇಂತಿದೆ:

ಜುಲೈ 1 (ಶುಕ್ರವಾರ) ಪಂದ್ಯ 1: ಪೋಲೆಂಡ್ Vs ಪೋರ್ಚುಗಲ್ - 12.30 AM IST (Marseille)
ಜುಲೈ 2 (ಶನಿವಾರ) ಪಂದ್ಯ 2: ವೇಲ್ಸ್ Vs ಬೆಲ್ಜಿಯಂ - 12.30 AM IST (Lille)
ಜುಲೈ 3 (ಭಾನುವಾರ) ಪಂದ್ಯ 3: ಜರ್ಮನಿ Vs ಇಟಲಿ - 12.30 AM IST (Bordeaux)
ಜುಲೈ 4 (ಸೋಮವಾರ) ಪಂದ್ಯ 4: ಫ್ರಾನ್ಸ್ Vs ಐಸ್ ಲ್ಯಾಂಡ್ - 12.30 AM IST (Saint-Denis)

16 ರ ಘಟ್ಟದ ಫಲಿತಾಂಶ:
ಪಂದ್ಯ 1: ಪೋಲೆಂಡ್ 1-1 ಸ್ವಿಟ್ಜರ್ಲೆಂಡ್ (4-5)
ಪಂದ್ಯ 2: ವೇಲ್ಸ್ 1-0 ಉತ್ತರ ಐರ್ಲೆಂಡ್
ಪಂದ್ಯ 3: ಪೋರ್ಚುಗಲ್ 1-0 ಕ್ರೋಯೇಷಿಯಾ
ಪಂದ್ಯ 4: ಫ್ರಾನ್ಸ್ 2-1 ರಿಪಬ್ಲಿಕ್ ಆಫ್ ಐರ್ಲೆಂಡ್
ಪಂದ್ಯ 5: ಜರ್ಮನಿ 3-0 ಸ್ಲೋವಕಿಯಾ
ಪಂದ್ಯ 6: ಹಂಗೇರಿ 0-4 ಬೆಲ್ಜಿಯಂ
ಪಂದ್ಯ 7: ಇಟಲಿ 2-0 ಸ್ಪೇನ್
ಪಂದ್ಯ 8: ಐಸ್ ಲ್ಯಾಂಡ್ 2-1 ಇಂಗ್ಲೆಂಡ್

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Euro 2016 has reached its business end as 16 out of 24 teams have been eliminated from the tournament. It is now upto the last 8 teams to fight it out among themselves for the ultimate supremacy.
Please Wait while comments are loading...