ಜರ್ಮನಿ ಬೆಂಬಲಿಗ ಕೊಹ್ಲಿಗೆ ಜೈ ಎಂದ ಮಿಡ್ ಫೀಲ್ಡರ್ ಕ್ರೂಸ್

Posted By:
Subscribe to Oneindia Kannada

ಬೆಂಗಳೂರು, ಜೂನ್ 13: ಫುಟ್ಬಾಲ್ ಪ್ರೇಮಿಗಳ ನೆಚ್ಚಿನ ಟೂರ್ನಮೆಂಟ್ ಯುಇಎಫ್ಎ ಯುರೋಪಿಯನ್ ಚಾಂಪಿಯನ್ ಶಿಪ್ (ಯುರೋ 2016) ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಟೆಸ್ಟ್ ನಾಯಕ ಕೊಹ್ಲಿ ಟ್ವೀಟ್ ಮಾಡಿದ್ದು ಗೊತ್ತಿರಬಹುದು.

ಜರ್ಮನಿ ಅಭಿಮಾನಿ ಕೊಹ್ಲಿ ಅವರಿಗೆ ಜರ್ಮನ್ ತಂಡ ಮಿಡ್ ಫೀಲ್ಡರ್ ಟೋನಿ ಕ್ರೂಸ್ ಅವರಿಂದ ಪ್ರತಿಕ್ರಿಯೆ ಸಿಕ್ಕಿದೆ. ಮುಂದೆ ಉಡುಗೊರೆಯೂ ಸಿಗಲಿದೆಯಂತೆ.

Euro 2016: Germany's midfielder Toni Kroos compliments Virat Kohli

ಜೂನ್ 11 ರಂದು ಫ್ರಾನ್ಸಿನಲ್ಲಿ ಶುಭಾರಂಭ ಕಂಡ ಯುರೋ ಕಪ್ 2016 ಗಾಗಿ ಕಾತುರದಿಂದ ಕಾದಿದ್ದೇನೆ ಎಂದು ಕ್ರಿಕೆಟ್ ಸ್ಟಾರ್ ಕೊಹ್ಲಿ ಹೇಳಿಕೊಂಡಿದ್ದರು. ಜೊತೆಗೆ 18 ನಂಬರ್ ಜರ್ಸಿ ತೊಟ್ಟಿರುವ ತಮ್ಮ ಫೋಟೋವನ್ನು ಟ್ವೀಟ್ ಮಾಡಿದ್ದರು. [ಯುರೋ 2016 ಫುಟ್ಬಾಲ್ ಹಬ್ಬ ಫುಲ್ ವೇಳಾಪಟ್ಟಿ]

Euro 2016: Germany's midfielder Toni Kroos compliments Virat Kohli

ಇದಕ್ಕೆ ಉತ್ತರಿಸಿರುವ ಜರ್ಮನ್ ತಂಡದ ಆಟಗಾರ ಕ್ರೂಸ್, ಸುಂದರ ಚಿತ್ರ ಹಾಗೂ ಶ್ರೇಷ್ಠ ನಂಬರ್ ಆಯ್ಕೆ ಮಾಡಿಕೊಂಡಿದ್ದೀರಿ, ನಿಮಗೆ ಇಷ್ಟರಲ್ಲೇ ಗಿಫ್ಟ್ ಸಿಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. #FirstNeverFollows ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

ಈ ಹ್ಯಾಶ್ ಟ್ಯಾಗ್ ಬಳಸಲು ಕಾರಣವಿದೆ. ಕ್ರೂಸ್ ಹಾಗೂ ಕೊಹ್ಲಿ ಇಬ್ಬರು ಅಡಿಡಾಸ್ ಕಂಪನಿಯ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದಾರೆ. ಈ ಸ್ನೇಹ ಹಾಗೂ ಅಭಿಮಾನವನ್ನು ಟ್ವೀಟ್ ಗಳ ಮೂಲಕ ಹಂಚಿಕೊಂಡಿದ್ದಾರೆ.

1996ರ ಯುರೋಪಿಯನ್ ಚಾಂಪಿಯನ್ ಹಾಗೂ 2014ರ ಫೀಫಾ ವಿಶ್ವಕಪ್ ವಿಜೇತ ತಂಡ ಜರ್ಮನಿಗೆ ಸ್ಪೇನ್ ಪ್ರಬಲ ಎದುರಾಳಿಯಾಗಿದೆ. ಸ್ಪೇನ್ ಮೂರನೇ ಬಾರಿ ಯುರೋ ಕಪ್ ಎತ್ತುವ ಉತ್ಸಾಹದಲ್ಲಿದೆ.

ಜರ್ಮನಿ ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಉಕ್ರೇನ್ ವಿರುದ್ಧ 2-0 ಅಂತರದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Days after an excited Germany football team supporter Virat Kohli sent his best wishes to his favourite side ahead of Euro 2016, India's Test skipper received a reply from German midfielder Toni Kroos.
Please Wait while comments are loading...