ವಿಡಿಯೋ : ಇಟಲಿ ಮಣಿಸಿ ಸೆಮಿಫೈನಲ್ ತಲುಪಿದ ಜರ್ಮನಿ

Posted By:
Subscribe to Oneindia Kannada

ಪ್ಯಾರೀಸ್, ಜುಲೈ 03: ಅತ್ಯಂತ ಕುತೂಹಲಕಾರಿ ಕ್ವಾರ್ಟರ್ ಫೈನಲ್ ಗಳಲ್ಲಿ ಒಂದೆನಿಸಿದ ಜರ್ಮನಿ ಹಾಗೂ ಇಟಲಿ ಕದನದ ಗುಂಗಿನಲ್ಲೇ ಫುಟ್ಬಾಲ್ ಅಭಿಮಾನಿಗಳು ಇನ್ನೂ ಇದ್ದಾರೆ. ಮೇಲ್ನೋಟಕ್ಕೆ ಜರ್ಮನಿಗೆ ಸುಲಭ ಗೆಲುವು ಸಿಗಬಹುದು ಎಂದು ಪಂಡಿತರು ನಿರೀಕ್ಷಿಸಿದ್ದರು. ಆದರೆ, ಅಂತಿಮವಾಗಿ ಪೆನಾಲ್ಟಿ ಶೂಟೌಟ್​ನಲ್ಲಿ ಜರ್ಮನಿ 6-5 ಗೋಲುಗಳಿಂದ ಇಟಲಿ ತಂಡವನ್ನು ಸೋಲಿಸಿ ದಾಖಲೆಯ 6ನೇ ಬಾರಿಗೆ ಸೆಮಿಫೈನಲ್ ಗೇರಿದ್ದಾರೆ.

ನಿಗದಿತ ಸಮಯದಲ್ಲಿ ಸಮಬಲದ ಹೋರಾಟ ನಡೆಸಿದ ಎರಡು ತಂಡಗಳು 1-1 ಗೋಲುಗಳ ಮೂಲಕ ಪಂದ್ಯ ಮುಗಿಸಿ ಪೆನಾಲ್ಟಿ ಶೂಟ್ ಗೆ ಸಿದ್ಧವಾದ ಮೇಲೆ ಅಸಲಿ 'ಕಿಕ್' ಸಿಕ್ಕಿತು ಎಂದರೆ ತಪ್ಪಾಗಲಾರದು.[ವಿಡಿಯೋ : ರೊನಾಲ್ಡೊ ಕಮಾಲ್, ಯುರೋ ಸೆಮಿಸ್ ಗೆ ಪೋರ್ಚುಗಲ್]

Euro 2016: Germany down Italy in penalties, storm into semis


ಜರ್ಮನಿಯ ಪರ ಮೆಸುಟ್ ಓಜಿಲ್ ಹಾಗೂ ಲಿಯಾನಾರ್ಡೊ ಬೊನುಚ್ಚಿ(ಪೆನಾಲ್ಟಿ) ಅವರು ತಲಾ 1 ಗೋಲು ಗಳಿಸಿದರು.


ಘಟಾನುಘಟಿಗಳು ಪೆನಾಲ್ಟಿಯಲ್ಲಿ ಟುಸ್ ಆದರೆ, ಅಂತಿಮವಾಗಿ ಜರ್ಮನಿಯ ಜೋನಾಸ್ ಹೆಕ್ಟರ್ ಅವರು ಗೆಲುವಿನ ಗೋಲು ಬಾರಿಸಿದರು.

ಜರ್ಮನಿಯ ಸ್ಟಾರ್ ಆಟಗಾರರಾದ ಮೆಸುಟ್ ಓಜಿಲ್ ಮತ್ತು ಮುಂಪಡೆಯ ಥಾಮಸ್ ಮುಲ್ಲರ್ ಅಲ್ಲದೆ ನಾಯಕ ಬಾಸ್ಟಿನ್ ಸ್ವಾಸ್ಟೈಗರ್ ಅವರು ಪೆನಾಲ್ಟಿಯಲ್ಲಿ ಸೋಲು ಕಂಡಿದ್ದು ಅಭಿಮಾನಿಗಳಿಗೆ ಆಘಾತ ತಂದಿತು.

ಆದರೆ, ಜೋಕಿಮ್ ಲೊ ಅವರ ತಂಡ ಅಂತಿಮವಾಗಿ ಗೆಲುವಿನ ನಗೆ ಬೀರಿತು.

ಮೊದಲ ಸೆಮಿಫೈನಲ್ ಪಂದ್ಯ ಜುಲೈ 7ರಂದು ಪೋರ್ಚುಗಲ್ ಹಾಗೂ ವೇಲ್ಸ್ ವಿರುದ್ಧ ನಡೆಯಲಿದೆ.


ಎರಡನೇ ಸೆಮಿಫೈನಲ್ ನಲ್ಲಿ ಜರ್ಮನಿ ತಂಡವನ್ನು ಅತಿಥೇಯ ಫ್ರಾನ್ಸ್ ಅಥವಾ ಐಸ್ ಲ್ಯಾಂಡ್ ತಂಡ ಜುಲೈ 8ರಂದು ಎದುರಿಸಲಿದೆ.

ಕ್ವಾರ್ಟರ್ ಫೈನಲ್ ಪಂದ್ಯದ ಮುಖ್ಯಾಂಶಗಳ ವಿಡಿಯೋ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After 120 minutes of hard-fought action and 18 nail-biting penalties, Germany came on top and beat Italy in the third quarter final match of the Euro 2016 at Matmut Atlantique stadium here.
Please Wait while comments are loading...