ವಿಡಿಯೋ : ರೊನಾಲ್ಡೊ ಕಮಾಲ್, ಯುರೋ ಸೆಮಿಸ್ ಗೆ ಪೋರ್ಚುಗಲ್

Posted By:
Subscribe to Oneindia Kannada

ಮಾರ್ಸೆಲ್ಲೆ(ಫ್ರಾನ್ಸ್), ಜುಲೈ 01: ಯೂರೋ 2016ರ ಕ್ವಾರ್ಟರ್ ಫೈನಲ್‌ನಲ್ಲಿ ಪೊಲೆಂಡ್ ತಂಡವನ್ನು ಸೋಲಿಸಿದ ಪೋರ್ಚುಗಲ್ ತಂಡ ಸೆಮಿಫೈನಲ್ ತಲುಪಿದೆ. ಯುರೋಪ್‌ನ ಇಬ್ಬರು ಪ್ರಮುಖ ಆಟಗಾರರಾದ ರಾಬರ್ಟ್ ಲೆವಾಂಡೊಸ್ಕಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಆಟವನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಪೆನಾಲ್ಟಿ ಶೂಟೌಟ್ ನಲ್ಲಿ ಪೋರ್ಚುಗಲ್ 5-3 ಪೋಲೆಂಡ್ ಅಂತರದಿಂದ ಗೆಲುವು ಸಾಧಿಸಿದೆ.

ಪೊಲೆಂಡ್ ಇದೇ ಮೊದಲ ಬಾರಿ ಯುರೋಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ ಸಾಧನೆ ಮಾಡಿತ್ತು. 1982ರ ಬಳಿಕ ಪ್ರಮುಖ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದ್ದಲ್ಲದೆ ಪೋರ್ಚುಗಲ್ ತಂಡಕ್ಕೆ ಆರಂಭಿಕ ಆಘಾತ ಕೂಡಾ ನೀಡಿತು.[ವಿಡಿಯೋ : ಇಟಲಿ ಮಣಿಸಿ ಸೆಮಿಫೈನಲ್ ತಲುಪಿದ ಜರ್ಮನಿ]

Euro 2016: Cristiano Ronaldo's Portugal in semi-finals after shootout win

ಪಂದ್ಯ 2ನೇ ನಿಮಿಷದಲ್ಲಿ ಲೆವಾಂಡೊಸ್ಕಿ ಅವರು ಪೋಲೆಂಡ್ ಪರ ಗೋಲು ಗಳಿಸಿದರೆ, ಪೋರ್ಚುಗಲ್ ಪರ 33ನೇ ನಿಮಿಷದಲ್ಲಿ ರೆನಾಟೋ ಸ್ಯಾಂಚಸ್ ಅದ್ಭುತ ಗೋಲು ಬಾರಿಸಿ ಸಮಗೊಳಿಸಿದರು.[ಯುರೋ 2016 : ಎಂಟರ ಘಟ್ಟದ ಫುಲ್ ವೇಳಾಪಟ್ಟಿ]

ನಂತರ ಪೂರ್ಣಾವಧಿ, ಹೆಚ್ಚುವರಿ ಅವಧಿಯಲ್ಲೂ ಸಮಬಲ ಕಂಡು ಬಂದಿದ್ದರಿಂದ ಪೆನಾಲ್ಟಿ ಶೂಟೌಟ್ ಗೆ ಮೊರೆ ಹೋಗಬೇಕಾಯಿತು. ಈ ಮೂಲಕ ರೊನಾಲ್ಡೊಗೆ ಯುರೋಪಿಯನ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಗರಿಷ್ಠ ಗೋಲು ಬಾರಿಸುವ ಅವಕಾಶ ಸಿಕ್ಕಿತು. ಫ್ರೆಂಚ್ ದಿಗ್ಗಜ ಮೈಕಲ್ ಪ್ಲಾಟಿನಿ ದಾಖಲೆಯನ್ನು ಸರಿಗಟ್ಟಿದರು. ಪ್ಲಾಟಿನಿ ಯುರೋ ಕಪ್ ಟೂರ್ನಿಯೊಂದರಲ್ಲಿ 9 ಗೋಲುಗಳನ್ನು ಬಾರಿಸಿದ್ದರು.

ನಾಲ್ಕು ಯುರೋ ಕಪ್‌ನಲ್ಲಿ ಸ್ಕೋರ್ ಬಾರಿಸಿದ ಮೊದಲ ಆಟಗಾರ ಎಂದು ರೊನಾಲ್ಡೋ ದಾಖಲೆ ಬರೆದಿದ್ದಾರೆ ಜೊತೆಗೆ ಅತ್ಯಂತ ಹೆಚ್ಚು ಯುರೋ ಪಂದ್ಯಗಳನ್ನು ಆಡಿದ ದಾಖಲೆಯನ್ನು ಮುರಿದಿದ್ದಾರೆ.

31ರ ಹರೆಯದ ರೊನಾಲ್ಡೊ ಮುಂದಾಳತ್ವದ ಪೋರ್ಚುಗಲ್ ತಂಡ ಸೆಮಿಫೈನಲ್‌ನಲ್ಲಿ ವೇಲ್ಸ್ ಅಥವಾ ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಪೋರ್ಚುಗಲ್ 2004ರಲ್ಲಿ ಸ್ವದೇಶದಲ್ಲಿ ನಡೆದ ಯುರೋ ಕಪ್‌ನಲ್ಲಿ ಫೈನಲ್‌ಗೆ ತಲುಪಿದ್ದು ಈವರೆಗಿನ ಉತ್ತಮ ಸಾಧನೆ. ಫೈನಲ್‌ನಲ್ಲಿ ಗ್ರೀಸ್‌ನ ವಿರುದ್ಧ ಅನಿರೀಕ್ಷಿತವಾಗಿ 1-0 ಗೋಲು ಅಂತರದಿಂದ ಸೋತಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cristiano Ronaldo's Portugal battled their way to a place in the European Championship last four on Thursday (June 30) winning a penalty shootout 5-3 against Poland in a tense quarter-final.
Please Wait while comments are loading...