ಸೆನೆಗಲ್ ಫುಟ್ಬಾಲ್ ಫೈನಲ್ ಪಂದ್ಯದ ವೇಳೆ ಘರ್ಷಣೆ, ಗೋಡೆ ಕುಸಿದು 8 ಸಾವು

Posted By:
Subscribe to Oneindia Kannada

ಡಕಾರ್, ಜುಲೈ 16 : ಶನಿವಾರ ನಡೆದ ಸೆನೆಗಲ್ ಫುಟ್ಬಾಲ್ ಲೀಗ್ ನ ಫೈನಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ. ಈ ಸಮಯದಲ್ಲಿ ಸ್ಟೇಡಿಯಂನ ಗೋಡೆ ಕುಸಿತ ಸಂಭವಿಸಿ ಕಾಲ್ತುಳಿತಕ್ಕೆ ಎಂಟು ಜನರು ಸಾವನ್ನಪ್ಪಿದ್ದು, ಸುಮಾರು 40 ಮಂದಿ ಗಾಯಗೊಂಡಿದ್ದಾರೆ.

ಡಕಾರ್ ಫುಟ್ಬಾಲ್ ಮೈದಾನದಲ್ಲಿ ಶನಿವಾರ ರಾತ್ರಿ ಈ ದುರಂತ ಸಂಭವಿಸಿದೆ. ಸ್ಟೇಡ್ ಡೆ ಮೋರ್ ವಿರುದ್ಧ ಯು. ಎಸ್ ಒವಾಕಮ್ ತಂಡ 2-1 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ಈ ವೇಳೆ ಒವಾಕಮ್ ಹಾಗೂ ಸ್ಟೇಡ್ ಡೆ ಮೋರ್ ತಂಡ ಅಭಿಮಾನಿಗಳ ನಡುವೆ ಘರ್ಷಣೆ ಸಂಭವಿಸಿದ್ದು, ಕೆಲವರು ಮೈದಾನದಿಂದ ಹೊರಗೆ ಓಡಲಾರಂಭಿಸಿದಾಗ ದಟ್ಟಣೆಯಯಿಂದ ಕ್ರೀಡಾಂಗಣದ ಗೋಡೆ ಕುಸಿದು ಬಿದ್ದಿದೆ ಎಂದು ವರದಿಯಾಗಿದೆ.

Eight dies several injured in Senegal football stadium chaos
Indian football team ranked 96th | Oneindia Kannada

ಗೋಡೆಯ ಅವಶೇಷಗಳಡಿಯಲ್ಲಿ ಸಿಲುಕಿಕೊಂಡು ಕೆಲವರು ಸಾವನ್ನಪ್ಪಿದ್ದು, ಹಲವು ಗಾಯಗೊಂಡಿದ್ದಾರೆ. ಮತ್ತೊಂದೆಡೆ ಪರಿಸ್ಥತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದ್ದರಿಂದ ಕಾಲ್ತುಳಿತ ಸಂಭವಿಸಿ ಮತ್ತಷ್ಟು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Eight people were killed and more than 40 were seriously injured after clashes at the end of a League Cup final football match at Demba Diop Stadium in Dakar, Senegal on Saturday.
Please Wait while comments are loading...