ಹಾಕಿ: ಪಾಕಿಸ್ತಾನವನ್ನು ಬಗ್ಗುಬಡಿದು ಕುಣಿದಾಡಿದ ಭಾರತ

Posted By:
Subscribe to Oneindia Kannada

ಇಫೋ(ಮಲೇಷಿಯಾ), ಏಪ್ರಿಲ್ 12 : ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿಯಲ್ಲಿ ಮಂಗಳವಾರ ನಡೆದ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದ ಭಾರತ ಪುರುಷರ ತಂಡ ವಿಜಯೋತ್ಸವ ಆಚರಿಸಿದೆ.

ಸರ್ದಾರ್ ಸಿಂಗ್ ಪಡೆ ಐತಿಹಾಸಿಕ 5-1 ಅಂತರದ ಜಯ ದಾಖಲಿಸಿದೆ. ನವದೆಹಲಿಯಲ್ಲಿ 2010 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪಾಕಿಸ್ತಾನ ವಿರುದ್ಧ 4- 7 ಅಂತರದ ಜಯ ದಾಖಲಿಸಿದ ನಂತರ ಇಂದು ಭಾರಿ ಅಂತರದ ಜಯ ಮತ್ತೊಮ್ಮೆ ಕಂಡು ಬಂದಿದೆ.

Dominant India thrash Pakistan 5-1 in Azlan Shah Cup

ಈ ಪಂದ್ಯಕ್ಕೂ ಮುನ್ನ ಕಳೆದ ಪಂದ್ಯದಲ್ಲಿ 3-1 ರಿಂದ ಕೆನಡಾ ತಂಡವನ್ನು ಸರ್ದಾರ್ ಪಡೆ ಮಣಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆರಿತ್ತು. ಮೊದಲೆರಡು ಸ್ಥಾನದಲ್ಲಿ ಆಸ್ಟ್ರೇಲಿಯಾ (9) ಮತ್ತು ನ್ಯೂಜಿಲೆಂಡ್(8) ತಂಡ ಇದೆ. ಲೀಗ್ ಅಂತ್ಯದಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ಮತ್ತು ಮಲೇಷ್ಯಾ ತಂಡವನ್ನು ಎದುರಿಸಲಿದೆ.

ಅಜ್ಲಾನ್ ಷಾ ಕಪ್​ನಲ್ಲಿ ಭಾರತ ಐದು ಬಾರಿಯ ಚಾಂಪಿಯನ್ ಆಗಿದ್ದರೆ, ಪಾಕಿಸ್ತಾನ 3 ಬಾರಿಯ ಚಾಂಪಿಯನ್ ಶಿಪ್ ಗೆದ್ದಿದೆ. ಭಾರತ ಪರ ಮನ್ ಪ್ರೀತ್ ಸಿಂಗ್ (4ನೇ ನಿಮಿಷ), ವಿಎಸ್ ಸುನೀಲ್ (10)(41), ತಲ್ವೆಂದರ್ ಸಿಂಗ್ (51), ರೂಪಿಂದರ್ ಪಾಲ್ ಸಿಂಗ್(54), ಪಾಕಿಸ್ತಾನ ಪರ ಮುಹಮ್ಮದ್ ಇರ್ಫಾನ್ (7ನೇ ನಿಮಿಷ) ಗೋಲು ಗಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A dominant India registered their biggest victory over arch-rivals Pakistan in six years when they coasted to a 5-1 win in a round-robin league match of the 25th Sultan Azlan Shah Cup, here today (April 12).
Please Wait while comments are loading...