ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹ್ಯೂಸ್ ಕುತ್ತಿಗೆಯನ್ನೇ ಸೀಳಿದ್ದ ಮಾರಕ ಬೌನ್ಸರ್

ಸಿಡ್ನಿ, ನ.27: ಮಾರಕ ಬೌನ್ಸರ್ ಗೆ ಕುತ್ತಿಗೆಯೊಡ್ಡಿದ ಆಸ್ಟ್ರೇಲಿಯಾ ಆಟಗಾರ ಫಿಲ್ ಹ್ಯೂಸ್ ದುರಂತ ಸಾವು ಹೇಗಾಯಿತು? ಎಂಬ ಪ್ರಶ್ನೆ ಸಾವಿರಾರು ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿದೆ. ಬೌನ್ಸರ್ ಗೆ ಸಿಕ್ಕು ಕೆಳಕ್ಕೆ ಬಿದ್ದ ಉದಯೋನ್ಮುಖ ಆಟಗಾರ ಮೇಲೆ ಏಳಲೇ ಇಲ್ಲ. ಮಾರಣಾಂತಿಕ ಪೆಟ್ಟು ಪ್ರಾಣವನ್ನೇ ಬಲಿ ಪಡೆಯಿತು.

ಫಿಲ್ ಸಾವಿನ ನಂತರ ದುಃಖದಿಂದಲೇ ಮಾಹಿತಿ ನೀಡಿದ ವಿನ್ಸೆಂಟ್ ಆಸ್ಪತ್ರೆ ವೈದ್ಯರು, 'ಇದೊಂದು ಅಪರೂಪದ ಆದರೆ ಅಷ್ಟೇ ಆಘಾತಕಾರಿ' ಪ್ರಕರಣ ಎಂದು ಹೇಳಿದರು.[ಆಸ್ಟ್ರೇಲಿಯಾದ ಕ್ರಿಕೆಟರ್ ಫಿಲ್ ಹ್ಯೂಸ್ ದುರಂತ ಸಾವು]

ಆಸ್ಟ್ರೇಲಿಯಾ ತಂಡದ ವೈದ್ಯ ಪೀಟರ್ ಬ್ರಕ್ ನರ್ ಮತ್ತು ಹ್ಯೂಸ್ ಗೆ ಚಿಕಿತ್ಸೆ ನೀಡಿದ ವೈದ್ಯರು ಮಾತನಾಡುತ್ತಲೇ ಗದ್ಗದಿತರಾದರು. 25 ವರ್ಷದ ಆಟಗಾರನ್ನು ಕಳೆದುಕೊಂಡಿದ್ದೇವೆ. ದುರಂತ ಸಾವು ನಮ್ಮೆಲ್ಲರನ್ನು ದಂಗು ಬಡಿಸಿದ್ದು ಆಘಾತ ತಂದಿದೆ ಎಂದಷ್ಟೇ ಹೇಳಿದರು.[ಚಿತ್ರಗಳು ಪಿಟಿಐ}

ಬೌನ್ಸರ್ ಗೆ ತಲೆಯೊಡ್ಡಿದ್ದ ಹ್ಯೂಸ್ ಬೆನ್ನುಮೂಳೆ ಅಪಧಮನಿಗೆ(vertebral artery) ಗಂಭೀರ ಪೆಟ್ಟು ಬಿದ್ದಿತ್ತು. ಮೆದುಳು ಮತ್ತು ಬೆನ್ನಿನ ನಡುವಿನ ರಕ್ತ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಕುತ್ತಿಗೆ ಭಾಗಕ್ಕೆ ತಗುಲಿದ ಚೆಂಡು ಹ್ಯೂಸ್ ಗೆ ಮಾರಣಾಂತಿಕ ಏಟು ಮಾಡಿತ್ತು.[ಹ್ಯೂಸ್ ಸಾವಿಗೆ ಕಂಬಿನಿ ಮಿಡಿದ ಟ್ವೀಟ್ ಲೋಕ]

ಕುತ್ತಿಗೆ ಬಳಿ ಒಡೆದುಕೊಂಡ ಬೆನ್ನುಮೂಳೆ ಅಪಧಮನಿಯಿಂದ ಒಂದೇ ಬಾರಿಗೆ ರಕ್ತಸ್ರಾವ ಆರಂಭವಾಗಿದೆ. ತಕ್ಷಣ ಆಸ್ಪತ್ರೆಗೆ ತಂದರೂ ಹ್ಯೂಸ್ ಅದಾಗಲೇ ಕೋಮಾಕ್ಕೆ ತಲುಪಿದ್ದರು ಎಂದು ವೈದ್ಯರು ಹ್ಯೂಸ್ ಅಂತಿಮ ದಿನ ಪರಿಸ್ಥಿತಿ ವಿವರಿಸುತ್ತಾರೆ.

ಆರೈಕೆ ಮಾಡಿದ ವೈದ್ಯ ಟೋನಿ ಗ್ರಾಬ್ಸ್ ಹೇಳುವಂತೆ ನೂರರಲ್ಲಿ ಒಂದು ಪ್ರಕರಣ ಈ ರೀತಿಯದ್ದಿರುತ್ತದೆ. ಆದರೆ ಅದು ಹ್ಯೂಸ್ ಗೆ ಆಗಿದ್ದು ಮಾತ್ರ ದುರ್ದೈವ. ಎಲ್ಲ ರೀತಿಯಿಂದಲೂ ಆಟಗಾರನನ್ನು ಬದುಕಿಸುವ ಪ್ರಯತ್ನ ಮಾಡಲಾಯಿತು. ತಕ್ಷಣ ಆಪರೇಶನ್ ಗೆ ಮುಂದಾಗಲಾಯಿತು. ನಮ್ಮ ಗುರಿ ಇದ್ದದ್ದು ರಕ್ತಸ್ರಾವವಾಗಿ ಹೆಪ್ಪುಗಟ್ಟಿದ್ದನ್ನು ತೆಗೆದು ಮೆದುಳನ್ನು ಮೊದಲಿನ ಸ್ಥಿತಿಗೆ ತರುವುದೇ ಆಗಿತ್ತು.

cricket 1

ಅದರಂತೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹ್ಯೂಸ್ ಗೆ ಸುಮಾರು 1 ಗಂಟೆ 20 ನಿಮಿಷ ವೈದ್ಯರೆಲ್ಲ ಸೇರಿ ಆಪರೇಶನ್ ಮಾಡಿ ಹ್ಯೂಸ್ ಅವರನ್ನು ತುರ್ತು ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಯಿತು. ನಮ್ಮ ಎಣಿಕೆಯಂತೆ ಹ್ಯೂಸ್ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಿತ್ತು. ಆದರೆ ಕೋಮಾಕ್ಕೆ ತೆರಳಿದ್ದ ಹ್ಯೂಸ್ ಮತ್ತೆ ಕ್ರಿಕೆಟ್ ಬ್ಯಾಟ್ ಹಿಡಿಯಲು ಮೇಲೆ ಏಳಲೇ ಇಲ್ಲ. ಆತನಿಗಾದ ಗಾಯವೇ ಅಂಥದ್ದಾಗಿದ್ದರೂ ಆಸ್ಟ್ರೇಲಿಯಾ ಕ್ರಿಕೆಟ್ ಲೋಕ ಆಟಗಾರನೊಬ್ಬನನ್ನು ಕಳೆದುಕೊಂಡಿತು ಎಂದಷ್ಟೇ ಹೇಳಲು ಸಾಧ್ಯ ಎಂದು ಗದ್ಗದಿತರಾಗಿಯೇ ಮಾತು ಮುಗಿಸಿದರು.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X