ಒಲಿಂಪಿಕ್ಸ್ ಗೆ ಆಯ್ಕೆಯಾದ ಭಾರತದ ಜಿಮ್ನಾಸ್ಟ್ ದೀಪಾ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 18: ಸರಿ ಸುಮಾರು 52 ವರ್ಷಗಳ ಬಳಿಕ ಒಲಿಂಪಿಕ್ಸ್ ಗೆ ಭಾರತೀಯ ಜಿಮ್ನಾಸ್ಟಿಕ್ ಪಟು ಆಯ್ಕೆಯಾಗಿದ್ದಾರೆ. ರಿಯೋ ಒಲಂಪಿಕ್ಸ್​ಗೆ ಅರ್ಹತೆ ಪಡೆದು ದೀಪಾ ಕರ್ಮಕರ್ ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಮೊದಲ ಮಹಿಳಾ ಜಿಮ್ನಾಸ್ಟ್ ಎನಿಸಿಕೊಂಡಿದ್ದಾರೆ.

ಒಲಂಪಿಕ್ಸ್ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 52.698 ಅಂಕಗಳೊಂದಿಗೆ ದೀಪಾ ಅವರು 9ನೇ ಸ್ಥಾನ ಪಡೆದುಕೊಂಡು ರಿಯೋಗೆ ಅರ್ಹತೆ ಪಡೆದರು. ಕಳೆದ ವರ್ಷ ನವೆಂಬರ್​ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್​ಷಿಪ್ ಸ್ಪರ್ಧೆಯಲ್ಲಿ 22 ವರ್ಷದ ದೀಪಾ 5ನೇ ಸ್ಥಾನ ಪಡೆದಿದ್ದರು.[ಒಲಿಂಪಿಕ್ಸ್ ಗೆ ಬಾಕ್ಸರ್ ಶಿವ ಆಯ್ಕೆ, ಮೇರಿಗೆ ಸದ್ಯಕ್ಕೆ ನಿರಾಸೆ!]

Dipa Karmakar

ಆದರೆ, ಒಲಿಂಪಿಕ್ಸ್ ಅರ್ಹತೆ ಪಡೆಯಲು ವಿಫಲರಾಗಿದ್ದರು. ದೀಪಾ ಕರ್ಮಾಕರ್ 2014ರಕ್ಕು ಗ್ಲಾಸ್ಗೋನಲ್ಲಿ ನಡೆದಿದ್ದ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದರು.[ರಿಯೋ ಒಲಿಂಪಿಕ್ಸ್ ನಂತರ ಉಸೇನ್ ಬೋಲ್ಟ್ ಓಟ ಸ್ಥಗಿತ]

ಸ್ವಾತಂತ್ರ್ಯ ನಂತರ 11 ಮಂದಿ ಭಾರತೀಯ ಪುರುಷ ಜಿಮ್ನಾಸ್ಟ್ ಗಳು ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದಾರೆ (1952ರಲ್ಲಿ ಇಬ್ಬರು, 1956ರಲ್ಲಿ 3, 1964ರಲ್ಲಿ 6) ಆದರೆ, ಮಹಿಳಾ ಸ್ಪರ್ಧಿಯೊಬ್ಬರು ಅರ್ಹತೆ ಪಡೆದಿರುವುದು ಇದೇ ಮೊದಲು.

2007ರಿಂದ ಇಲ್ಲಿ ತನಕ ವಿವಿಧ ಸ್ತರಗಳಲ್ಲಿ ತ್ರಿಪುರಾ ಮೂಲದ ದೀಪಾ ಅವರು 77 ಪದಕಗಳನ್ನು ಗೆದ್ದಿದ್ದಾರೆ. ಈ ಪೈಕಿ 67 ಚಿನ್ನದ ಪದಕಗಳಿವೆ. ದೀಪಾ ಅವರ ಸಾಧನೆ ಇತರರಿಗೆ ಮಾದರಿ ಎಂದು ಕೋಚ್ ಬಿಶ್ವೇಶ್ವರ್ ನಂದಿ ಹೇಳಿದ್ದಾರೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Dipa Karmakar on Monday created history by becoming the first Indian woman gymnast to qualify for Olympics as she booked a berth for the Rio Games after a strong performance at the final qualifying and test event.
Please Wait while comments are loading...