ಸಾಕ್ಷಿ, ಸಿಂಧು, ದೀಪಾಗೆ ವಜ್ರದ ನೆಕ್ಲೇಸ್ ಉಡುಗೊರೆ

Posted By:
Subscribe to Oneindia Kannada

ಚೆನ್ನೈ, ಆಗಸ್ಟ್ 24: ಜನಪ್ರಿಯ ಆಭರಣ ಮಳಿಗೆ ಎನ್ಎಸಿ ಜ್ಯುವೆಲ್ಲರ್ಸ್ ವತಿಯಿಂದ ಭಾರತದ ಕ್ರೀಡಾ ಸಾಧಕಿಯರಾದ ಪಿವಿ ಸಿಂಧು, ಸಾಕ್ಷಿ ಮಲಿಕ್ ಹಾಗೂ ದೀಪಾ ಕರ್ಮಾಕರ್ ಅವರಿಗೆ ವಜ್ರದ ನೆಕ್ಲೇಸ್ ಗಿಫ್ಟ್ ಸಿಗುತ್ತಿದೆ.

ರಿಯೋ ಒಲಿಂಪಿಕ್ಸ್ ನಲ್ಲಿ ಬಾಡ್ಮಿಂಟನ್ ತಾರೆ ಪಿವಿ ಸಿಂಧು ಅವರಿಗೆ ಬೆಳ್ಳಿ ಪದಕ ಗೆದ್ದಿದ್ದರೆ, ಸಾಕ್ಷಿ ಮಲಿಕ್ ಅವರಿಗೆ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇವರಿಬ್ಬರ ಜೊತೆಗೆ ಜಿಮ್ನಾಸ್ಟಿಕ್ ನ ವಾಲ್ಟ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ನಾಲ್ಕನೇ ಸ್ಥಾನ ಗಳಿಸಿದ ದೀಪಾ ಕರ್ಮಾಕರ್ ಅವರಿಗೂ ವಜ್ರದ ಉಡುಗೊರೆ ಘೋಷಿಸಲಾಗಿದೆ.

Diamond necklaces for Rio Olympics medallists PV Sindhu and Sakshi Malik

ಎನ್ಎಸಿ ಜ್ಯುವೆಲ್ಲರ್ಸ್ ಸಂಸ್ಥೆ ಸಿಂಧು ಅವರಿಗೆ 6,00,000 ರು ಬೆಲೆಯ ನೆಕ್ಲೇಸ್ ನೀಡುತ್ತಿದ್ದರೆ, ಸಾಕ್ಷಿಗೆ 3,00,000 ರು ಬೆಲೆಯ ನೆಕ್ಲೇಸ್ ನೀಡುತ್ತಿದೆ, ದೀಪಾ ಕರ್ಮಾಕರ್ ಗೆ 1,00,000 ರು ಬೆಲೆಯ ನೆಕ್ಲೇಸ್ ನೀಡಲಾಗುತ್ತಿದೆ.

ರಿಯೋ ಒಲಿಂಪಿಕ್ಸ್ 2016ರಲ್ಲಿ ಮಹಿಳಾ ಸಾಧಕಿಯರು ದೇಶದ ಹೆಮ್ಮೆಯ ಸಂಕೇತವಾಗಿದ್ದಾರೆ. ಇವರಿಂದ ಸ್ಫೂರ್ತಿ ಪಡೆದು ಯುವ ಪ್ರತಿಭೆಗಳು ಹೊಸ ಇತಿಹಾಸ ರಚಿಸಲಿದೆಎಂದು ಎನ್ ಎ ಸಿ ಜ್ಯುವೆಲ್ಲರ್ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Leading jewellery chain NAC Jewellers on Tuesday decided to shower diamonds on Olympic medal winning shuttler PV Sindhu and wrestler Sakshi Malik as well as gymnast Dipa Karmakar for their great performance at the recently-concluded Rio Olympic games
Please Wait while comments are loading...