ರಿಯೋ ಚಿನ್ನ ಗೆದ್ದ ದೇವೇಂದ್ರಗೆ ತಲೆ ಬಾಗಿದ ಭಾರತ!

Posted By:
Subscribe to Oneindia Kannada

ಬೆಂಗಳೂರು, ಸೆ.14: ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ದೇವೇಂದ್ರ ಜಝಾರಿಯಾಗೆ ಭಾರತದ ಕ್ರೀಡಾಭಿಮಾನಿಗಳು ತಲೆ ಬಾಗಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರು, ಸಾರ್ವಜನಿಕರು ದೇವೇಂದ್ರ ಅವರ ಐತಿಹಾಸಿಕ ಸಾಧನೆಗೆ ಮೆಚ್ಚಿ ಟ್ವೀಟ್ ಮಾಡಿದ್ದಾರೆ.

ಪುರುಷರ ಜಾವೆಲಿನ್ ಥ್ರೋನಲ್ಲಿ ರಾಜಸ್ಥಾನ ಮೂಲದ ದೇವೇಂದ್ರ ಜಝಾರಿಯಾ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ. ಇದರೊಂದಿಗೆ ಭಾರತ ರಿಯೋ ಪ್ಯಾರಾಲಿಂಪಿಕ್ಸ್ ನ ಪದಕ ಪಟ್ಟಿಯಲ್ಲಿ ಎರಡನೇ ಚಿನ್ನದ ಪದಕ ಪಡೆದಂತಾಗಿದೆ.[ರಿಯೋ ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ಡಬಲ್ ಧಮಾಕ!]

ಪುರುಷರ ಎಫ್ 46 ವಿಭಾಗದಲ್ಲಿ 63.97 ಮೀಟರ್ ಜಾವೆಲಿನ್ ಎಸೆದು ದಾಖಲೆಯೊಂದಿಗೆ ದೇವೇಂದ್ರ ಅವರು ಚಿನ್ನದ ಪದಕ ಪಡೆದಿದ್ದಾರೆ. 2004 ರ ಅಥೆನ್ಸ್ ಗೇಮ್ಸ್ ನಲ್ಲಿ ಇವರು 62.15 ಮೀ. ಜಾವೆಲಿನ್ ಎಸೆದು ದಾಖಲೆ ಮಾಡಿದ್ದರು.

ಭಾರತೀಯ ಕ್ರೀಡಾಪಟುಗಳ ಸಾಧನೆ

ಭಾರತೀಯ ಕ್ರೀಡಾಪಟುಗಳ ಸಾಧನೆ

ಪ್ಯಾರಾಲಿಂಪಿಕ್ಸ್‌ನಲ್ಲಿ ಮುರಿದು ದೇವೇಂದ್ರ ಚಿನ್ನಕ್ಕೆ ಕೊರಳೊಡಿದ್ದಾರೆ. ಮರಿಯಪ್ಪನ್ ತಂಗವೇಲ್ ಮತ್ತು ವರುಣ್ ಭಾಟಿ ಅವರು ಕ್ರೀಡಾಕೂಟದಲ್ಲಿ ಪುರುಷರ ಹೈ ಜಂಪ್‌ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕ ಪಡೆದಿದ್ದರು.[ರಿಯೋ ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ಡಬಲ್ ಧಮಾಕ!]

ಮತ್ತೆ ಪೀಯರ್ಸ್ ಮಾರ್ಗನ್ ನನ್ನು ನೆನದ ಟ್ವೀಟ್ ಮಂದಿ

ಮತ್ತೆ ಇಂಗ್ಲೆಂಡಿನ ಹಿರಿಯ ಪತ್ರಕರ್ತ ಪೀಯರ್ಸ್ ಮಾರ್ಗನ್ ನನ್ನು ನೆನದ ಟ್ವೀಟ್ ಮಂದಿ, ಮಾರ್ಗನ್ ನಿಮಗೆ ಮತ್ತೆ ಸೋಲು ಎಂದು ಟ್ವೀಟಿಸಿದ್ದಾರೆ. [ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆ ಗೋಲ್ಡನ್ ಬಾಯ್ ಯಾರು?]

ದೇವೇಂದ್ರ ವಿಶ್ವದಾಖಲೆ ಮುರಿದಿದ್ದು ಹೇಗೆ?

ದೇವೇಂದ್ರ ವಿಶ್ವದಾಖಲೆ ಮುರಿದಿದ್ದು ಹೇಗೆ?, ಜಾವೆಲಿನ್ ಎಸೆತದಲ್ಲಿ ವಿಶ್ವದಾಖಲೆ ಬರೆದು ಚಿನ್ನ ಗೆದ್ದ ದೇವೇಂದ್ರ ಅವರ ವಿಡಿಯೋ ನೋಡಿ [ರಿಯೋ ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ಮತ್ತೊಂದು ಚಿನ್ನ]

ಚಿನ್ನದ ಹುಡುಗ ದೇವೇಂದ್ರನಿಗೆ ಬಹುಪರಾಕ್

ಚಿನ್ನದ ಹುಡುಗ ದೇವೇಂದ್ರನಿಗೆ ಬಹುಪರಾಕ್, ಅಂಕಿ ಅಂಶಗಳ ಮೂಲಕ ದೇವೇಂದ್ರ ಅವರ ಸಾಧನೆಯತ್ತ ಬೆಳಕು ಚೆಲ್ಲಿದ ಮೋಹನ್ ದಾಸ್ ಮೆನನ್.

ಆಹಾ ಎಂಥ ಆ ಕ್ಷಣ, ಚಿನ್ನದಂಥ ಕ್ಷಣ

ಆಹಾ ಎಂಥ ಆ ಕ್ಷಣ, ಚಿನ್ನದಂಥ ಕ್ಷಣ, ಚಿನ್ನ ಗೆದ್ದ ದೇವೇಂದ್ರ ಜಝಾರಿಯಾ ಅವರ ಸಾಧನೆಯ ಕ್ಷಣ.

ನಿಮ್ಮ ಸಾಧನೆಗೆ ನನ್ನ ನಮನ

ದೇವೇಂದ್ರ ನಿಮ್ಮ ಸಾಧನೆಗೆ ನನ್ನ ನಮನ ಎಂದ ವೀರೇಂದ್ರ ಸೆಹ್ವಾಗ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India woke up to another good news from Rio de Janeiro as javelin thrower Devendra Jhajharia won clinched gold medal at the Rio Paralympics 2016.
Please Wait while comments are loading...