ಡೇವಿಸ್ ಕಪ್‌: ಪ್ಲೇ ಆಫ್‌ ಗೆ ಭಾರತ ತಂಡ ಲಗ್ಗೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್. 09 : ಡೇವಿಸ್ ಕಪ್‌ ಟೂರ್ನಿಯಲ್ಲಿ ಡಬಲ್ಸ್‌ ವಿಭಾಗದಲ್ಲಿ ಭಾರತ ತಂಡ ವಿಶ್ವ ಗುಂಪಿನ ಪ್ಲೇ ಆಫ್‌ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ ಎಲ್‌ಟಿಎ) ಅಂಕಣದಲ್ಲಿ ನಡೆಯುತ್ತಿರುವ ಏಷ್ಯಾ ಒಸೀನಿಯಾ ವಲಯದ ಎರಡನೇ ಸುತ್ತಿನ ಪಂದ್ಯದಲ್ಲಿ ಶನಿವಾರ 3-0ರಲ್ಲಿ ಮುನ್ನಡೆ ಸಾಧಿಸಿತು.

ಡೇವಿಸ್‌ ಕಪ್‌ನ ಡಬಲ್ಸ್‌ನಲ್ಲಿ ಮೊದಲ ಬಾರಿಗೆ ಒಂದಾಗಿ ಆಡಿದ ಬೋಪಣ್ಣ ಮತ್ತು ಬಾಲಾಜಿ 6-2, 6-4, 6-1 ನೇರ ಸೆಟ್‌ಗಳಿಂದ ಉಜ್ಬೇಕಿಸ್ತಾನದ ಫಾರೂಕ್ ಡುಸ್ಟವ್ ಹಾಗೂ ಸ್ಯಾಂಜರ್ ಫಯಾಜಿವ್ ಎದುರು ಸುಲಭ ಜಯ ಸಾಧಿಸಿದರು.

Davis Cup: Bopanna, Balaji seal tie with doubles win; India book place in WG Play-offs

ಉಜ್ಬೇಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಸಿಂಗಲ್ಸ್ ಆಟಗಾರರಾದ ರಾಮಕುಮಾರ್ ರಾಮನಾಥನ್‌ ಮತ್ತು ಪ್ರಜ್ಞೇಶ್ ಗುಣೇಶ್ವರನ್ ಶುಕ್ರವಾರ ಗೆಲುವು ಪಡೆದು 2-0ರಲ್ಲಿ ಮುನ್ನಡೆ ತಂದುಕೊಟ್ಟಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rohan Bopanna and Sriram Balaji defeated Farrukh Dustov and Sanjar Fayziev in straight sets in the doubles match to hand India an unassailable 3-0 lead in their Davis Cup Asia/Oceania Group I tie against Uzbekistan here on Saturday (April 8).
Please Wait while comments are loading...