ಕ್ರಿಸ್ಟಿಯಾನೊ ರೊನಾಲ್ಡೋಗೆ ಯುರೋಪಿನ ಶ್ರೇಷ್ಠ ಆಟಗಾರ ಕಿರೀಟ

Posted By:
Subscribe to Oneindia Kannada

ಮೊನಾಕೊ, ಆಗಸ್ಟ್ 26: ರಿಯಲ್ ಮ್ಯಾಡ್ರಿಡ್ ಹಾಗೂ ಪೋರ್ಚುಗೀಸ್ ತಂಡದ ತಾರೆ ಕ್ರಿಸ್ಟಿಯಾನೊ ರೊನಾಲ್ಡೋ ಅವರಿಗೆ ಈ ಬಾರಿಯ 'ಯುರೋಪಿನ ಶ್ರೇಷ್ಠ ಆಟಗಾರ' ಪ್ರಶಸ್ತಿ ಲಭಿಸಿದೆ

ಕಳೆದ ಸೀಸನ್ ನಲ್ಲಿ ಪೋರ್ಚುಗಲ್ ತಂಡವನ್ನು ಮುನ್ನಡೆಸಿ ಯುರೋ 2016 ಹಾಗೂ ಚಾಂಪಿಯನ್ಸ್ ಲೀಗ್ ಗೆದ್ದಿರುವ ರೊನಾಲ್ಡೊ ಅವರಿಗೆ ಸಹಜವಾಗಿ UEFA ಶ್ರೇಷ್ಠ ಆಟಗಾರ ಪ್ರಶಸ್ತಿ ಸಿಕ್ಕಿದೆ. [ಲಿಯೋನೆಲ್ ಮೆಸ್ಸಿ ಧೂಳಿಪಟ ಮಾಡಿದ ದಾಖಲೆಗಳು]

Cristiano Ronaldo wins 'UEFA Best Player in Europe' Award

31ರ ಹರೆಯದ ರೊನಾಲ್ಡೊ ಅವರು ಎರಡನೇ ಬಾರಿಗೆ ಈ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ರಿಯಲ್ ಮ್ಯಾಡ್ರಿಡ್ ನ ಗರೇಟ್ ಬೇಲ್ ಹಾಗೂ ಅಟ್ಲೆಟಿಕೊ ಮ್ಯಾಡ್ರಿಡ್ ನ ಅಂಟೊನೆ ಗ್ರಿಜ್ಮನ್ ರನ್ನು ಹಿಂದಿಕ್ಕಿ ರೊನೊಲ್ಡೋ ಪ್ರಶಸ್ತಿ ಗಳಿಸಿದ್ದಾರೆ. 2013-14ರಲ್ಲಿ ಕೂಡಾ ರೊನಾಲ್ಡೊ ಈ ಪ್ರಶಸ್ತಿ ಗೆದ್ದಿದ್ದರು.[ಕ್ಲಬ್ಬಿನಿಂದ ಕ್ಲಬ್ಬಿಗೆ ಜಿಗಿಯಲು 813 ಕೋಟಿ ರು]

ಮೇ ತಿಂಗಳಿನಲ್ಲಿ ಅಟ್ಲೆಟಿಕೋ ವಿರುದ್ಧ ಉತ್ತಮ ನಿರ್ವಹಣೆ ತೋರಿ ರಿಯಲ್ ಮ್ಯಾಡ್ರಿಡ್ ಗೆ 11ನೇ ಯುರೋಪಿಯನ್ ಕಪ್ ಗೆಲ್ಲಿಸಿಕೊಟ್ಟ ರೊನಾಲ್ಡೊ ಅವರು ಯುರೋ 2016 ಗೆಲುವು ಸಾಧಿಸಿದರು. ಯುರೋಪಿಯನ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲಿ ಒಟ್ಟು 9 ಗೋಲು ಬಾರಿಸಿ ಫ್ರಾನ್ಸಿನ ಪ್ಲಾಟಿನಿ ದಾಖಲೆ ಸರಿಗಟ್ಟಿದರು. [ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ತಂಡಗಳಿವು]

ಯುಇಎಫ್ಎಗೆ ಸಂಬಂಧಿಸಿದ 55ಕ್ಕೂ ಅಧಿಕ ಅಸೊಸಿಯೇಷನ್ಸ್ ನ ಪತ್ರಕರ್ತರಿದ್ದ ಆಯ್ಕೆ ಸಮಿತಿ ನೀಡಿದ ವರದಿಯಂತೆ, ಪೋರ್ಚುಗಲ್ ನ ರೊನಾಲ್ಡೊ ಗೆ ಪುರುಷರ ವಿಭಾಗದ ಪ್ರಶಸ್ತಿ ಹಾಗೂ ನಾರ್ವೆಯ ಅಡಾ ಹೆಗರ್ ಬರ್ಗ್ ಮಹಿಳಾ ಪ್ರಶಸ್ತಿ ಸಿಕ್ಕಿದೆ. (ಎಎಫ್ ಪಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Real Madrid superstar Cristiano Ronaldo won the UEFA Best Player in Europe Award after winning both last season's Champions League and Euro 2016 with Portugal.
Please Wait while comments are loading...