ರೊನಾಲ್ಡೋ ವಿಶ್ವದ ಅತ್ಯಂತ ಶ್ರೀಮಂತ ಆಟಗಾರ

Posted By:
Subscribe to Oneindia Kannada

ಬೆಂಗಳೂರು, ಜೂನ್ 09: ಸ್ಪೇನಿನ ಅತ್ಯಂತ ಯಶಸ್ವಿ ತಂಡ ರಿಯಲ್ ಮ್ಯಾಡ್ರಿಡ್ ಹಾಗೂ ಪೋರ್ಚುಗಲ್ ತಂಡದ ಆಟಗಾರ ಕ್ರಿಸ್ಟಿಯಾನೋ ರೊನೊಲ್ಡೋ ಅವರು ವಿಶ್ವದ ಅತ್ಯಧಿಕ ಗಳಿಕೆ ಹೊಂದಿರುವ ಆಟಗಾರ ಎಂದು ಫೋರ್ಬ್ಸ್ ಮ್ಯಾಗಜೀನ್ ಹೆಸರಿಸಿದೆ.

ಸತತ ನಾಲ್ಕನೇ ವರ್ಷ ಕೂಡಾ ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ತಂಡ ಎಂಬ ಹೆಗ್ಗಳಿಕೆಗೆ ರಿಯಲ್ ಮ್ಯಾಡ್ರಿಡ್ ಪಾತ್ರವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಈಗ ಮೂರು ಬಾರಿ ಬಾಲನ್ ಡಿ ಓರ್ ಪ್ರಶಸ್ತಿ ಗೆದ್ದಿರುವ ರೊನೊಲ್ಡೋ ಅವರು 88 ಮಿಲಿಯನ್ ಯುಎಸ್ ಡಾಲರ್ ಗಳಿಕೆ(ಸಂಬಳ) (ಜೂನ್ 1, 2016) ಹಾಗೂ ಜಾಹೀರಾತುಗಳ ಮೂಲಕ ಸಂಪಾದಿಸಿರುವ ಮೊತ್ತ ಎಲ್ಲಾ ಸೇರಿಸಿದರೆ ವಿಶ್ವದ ಅತ್ಯಂತ ಶ್ರೀಮಂತ ಆಟಗಾರ ಎನಿಸಿಕೊಂಡಿದ್ದಾರೆ. [ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ತಂಡಗಳ ಪಟ್ಟಿ]

Cristiano Ronaldo Leads Forbes’ Richest athletes

ಈ ಮೂಲಕ ಅರ್ಜೆಂಟೀನಾ ಹಾಗೂ ಬಾರ್ಸಿಲೋನಾದ ಸ್ಟಾರ್ ಲಿಯೊನೆಲ್ ಮೆಸ್ಸಿ ಅವರನ್ನು ಎರಡನೇ ಸ್ಥಾನಕ್ಕೆ ದೂಡಿದ್ದಾರೆ. ಮೆಸ್ಸಿ 81 ಮಿಲಿಯನ್ ಯುಎಸ್ ಡಾಲರ್ ಗಳಿಕೆ ಹೊಂದಿದ್ದಾರೆ.

ವಿಶ್ವದ ಅತ್ಯಧಿಕ ಸಂಬಳ ಹೊಂದಿರುವ ಆಟಗಾರರ ಪಟ್ಟಿ ಹೀಗಿದೆ
1. ಕ್ರಿಸ್ಟಿಯಾನೋ ರೊನೊಲ್ಡೋ- ರಿಯಲ್ ಮ್ಯಾಡ್ರಿಡ್ $88 million
2. ಲಿಯೊನೆಲ್ ಮೆಸ್ಸಿ- ಎಫ್ ಸಿ ಬಾರ್ಸಿಲೋನಾ-$81.4 million
3. ಲೆಬ್ರಾನ್ ಜೇಮ್ಸ್ -ಕ್ಲೆವೆಲ್ಯಾಂಡ್ ಕವಲಿಯರ್ಸ್- $77.2 million
4. ರೋಜರ್ ಫೆಡರರ್- ಟೆನಿಸ್ ಆಟಗಾರ-$67.8 million
5. ಕೆವಿನ್ ಡುರಾಂಟ್- ಓಕ್ಲಾಹೋಮಾ ಸಿಟಿ ಥಂಡರ್- $56.2 million

-
-
-
-
-
-
-
-
-
ಫೋರ್ಬ್ಸ್ ಪಟ್ಟಿಯ ಅತ್ಯಧಿಕ ಸಂಬಳ ಹೊಂದಿರುವ ಆಟಗಾರರು

ಫೋರ್ಬ್ಸ್ ಪಟ್ಟಿಯ ಅತ್ಯಧಿಕ ಸಂಬಳ ಹೊಂದಿರುವ ಆಟಗಾರರು


6. ನೊವಾಕ್ ಜೋಕೊವಿಕ್ -ಟೆನಿಸ್ -$55.8 million
7. ಕ್ಯಾಮ್ ನ್ಯೂಟನ್-ಕರೋಲಿನಾ ಪ್ಯಾಂಥರ್ಸ್-$53.1 million
8. ಫಿಲ್ ಮಿಕೆಲ್ಸನ್ -ಗಾಲ್ಫರ್ -$52.8 million
9. ಜೋರ್ಡನ್ ಸ್ಪಿತ್- ಗಾಲ್ಫರ್ -$52.8 million
10. ಕೊಬೆ ಬ್ರಯಾಂಟ್- ಲಾಸ್ ಏಂಜಲೀಸ್ ಲೇಕರ್ಸ್ $50 million

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Real Madrid superstar Cristiano Ronaldo has been named the highest paid athlete in the world by Forbes magazine.
Please Wait while comments are loading...