ಜಿಂಬಾಬ್ವೆ ಪ್ರವಾಸಕ್ಕೆ ಯುವ ತಂಡ ಆಯ್ಕೆ, ಧೋನಿ ನಾಯಕ

Posted By:
Subscribe to Oneindia Kannada

ಮುಂಬೈ, ಮೇ 23: ಜೂನ್ ನಲ್ಲಿ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಯುವ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಲಿದ್ದಾರೆ. ಇದರ ಜೊತೆಗೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೂ ತಂಡ ಪ್ರಕಟಿಸಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 9) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಉತ್ತಮ ಪ್ರದರ್ಶನ ನೀಡುತ್ತಿರುವ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್,ಕರ್ನಾಟಕದ ಕರುಣ್ ನಾಯರ್ ಹಾಗೂ ಮಂದೀಪ್ ಸಿಂಗ್, ಫೈಜ್ ಫಜಲ್ ಅವರು ತಂಡ ಸೇರಿದ್ದಾರೆ, ಯುವರಾಜ್ ಸಿಂಗ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. [ಜೂನ್ ನಲ್ಲಿ ಟೀಂ ಇಂಡಿಯಾದಿಂದ ಜಿಂಬಾಬ್ವೆ ಪ್ರವಾಸ]

Zimbabwe and West Indies tours: India ODI, T20I and Test squads announced

17 ಮಂದಿ ಸದಸ್ಯರ ಟೆಸ್ಟ್ ತಂಡಕ್ಕೆ ಮಹಮ್ಮದ್ ಶಮಿ, ಅಮಿತ್ ಮಿಶ್ರಾ, ಸ್ಟುವರ್ಟ್ ಬಿನ್ನಿ ಮರಳಿದ್ದಾರೆ. ಮುಂಬೈನ ವೇಗಿ ಶಾರ್ದೂಲ್ ಠಾಕೂರ್ ಅವರಿಗೆ ಸಂದೀಪ್ ಪಟೇಲ್ ನೇತೃತ್ವದ ಆಯ್ಕೆ ಸಮಿತಿ ಸ್ಥಾನ ಕಲ್ಪಿಸಿದೆ.

ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ನಡೆಯಲಿದೆ. ವಿರಾಟ್ ಕೊಹ್ಲಿ ನೇತೃತ್ವದ ತಂಡ ನಾಲ್ಕು ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಅಜಿಂಕ್ಯ ರಹಾನೆ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. [ಐಪಿಎಲ್ ಪ್ರಭಾವ, ವಿಂಡೀಸ್ ತಂಡಕ್ಕೆ ಪೊಲಾರ್ಡ್, ನರೇನ್ ವಾಪಸ್]

KL Rahul

ಏಕದಿನ ತಂಡದಲ್ಲಿ ವಿಶ್ರಾಂತಿ ಯಾರಿಗೆ?: ರೋಹಿತ್ ಶರ್ಮ, ಸುರೇಶ್ ರೈನಾ, ಶಿಖರ್ ಧವನ್, ರವೀಂದ್ರ ಜಡೇಜ, ಆರ್ ಅಶ್ವಿನ್, ಅಜಿಂಕ್ಯರಹಾನೆ.

ಯಾವಾಗ ಪಂದ್ಯಗಳು: ಹರಾರೆ ಸ್ಪೋರ್ಟ್ಸ್ ಮೈದಾನದಲ್ಲಿ ಜೂನ್ 11 ರಿಂದ ಜೂನ್ 20 ರವರೆಗೆ 3 ಏಕದಿನ ಹಾಗೂ 3 ಟ್ವೆಂಟಿ20 ಪಂದ್ಯಗಳು ನಡೆಯಲಿವೆ.

Zimbabwe and West Indies tours: India ODI, T20I and Test squads announced

ಜಿಂಬಾಬ್ವೆ ಪ್ರವಾಸಕ್ಕೆ ಏಕದಿನ ಹಾಗೂ ಟಿ20ಐ ತಂಡ: ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಕೆಎಲ್ ರಾಹುಲ್, ಫೈಜ್ ಫಜಲ್, ಮನೀಶ್ ಪಾಂಡೆ, ಕರುಣ್ ನಾಯರ್, ಅಂಬಟಿ ರಾಯುಡು, ರಿಶಿ ಧವನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಧವಳ್ ಕುಲಕರ್ಣಿ, ಜಸ್ಪ್ರೀತ್ ಬೂಮ್ರ, ಬರೀಂದರ್ ಸ್ರಾನ್, ಮನ್ದೀಪ್ ಸಿಂಗ್, ಕೇದಾರ್ ಜಾಧವ್, ಜಯದೇವ್ ಉನದ್ಕತ್, ಯಜುವೇಂದ್ರ ಚಾಹಲ್.

ವೆಸ್ಟ್ ಇಂಡೀಸ್ ಸರಣಿಗೆ ಟೆಸ್ಟ್ ತಂಡ : ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪ ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ರೋಹಿತ್ ಶರ್ಮ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಆರ್ ಅಶ್ವಿನ್, ಅಮಿತ್ ಮಿಶ್ರಾ, ರವೀಂದ್ರ ಜಡೇಜ, ಇಶಾಂತ್ ಶರ್ಮ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ಸ್ಟುವರ್ಟ್ ಬಿನ್ನಿ (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Virat Kohli and other regular players were today (May 23) rested for India's limited overs tour to Zimbabwe next month. Mahendra Singh Dhoni was retained as captain of the squad which has many new faces.
Please Wait while comments are loading...