ವಿಶ್ವ ಟಿ20 : ಹಾಂಗ್ ಕಾಂಗ್ ವಿರುದ್ಧ ಜಿಂಬಾಬ್ವೆಗೆ 14 ರನ್ ಗಳ ಜಯ

Posted By:
Subscribe to Oneindia Kannada

ನಾಗ್ಪುರ, ಮಾರ್ಚ್ 08: ಇಲ್ಲಿನ ವಿಸಿಎ ಸ್ಟೇಡಿಯಂನಲ್ಲಿ ವಿಶ್ವ ಟ್ವೆಂಟಿ20 ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಮಂಗಳವಾರ (ಮಾರ್ಚ್ 08 ) ದಿಂದ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ತಂಡ ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಷೇತ್ರದ ಅನುಭವದ ಲಾಭ ಪಡೆದುಕೊಂಡು ಅನನುಭವಿ ತಂಡ ಹಾಂಗ್ ಕಾಂಗ್ ಅನ್ನು 14 ರನ್ ಗಳಿಂದ ಸೋಲಿಸಿದೆ.

ಪಂದ್ಯದ ಸ್ಕೋರ್ ಕಾರ್ಡ್

ಅರ್ಹತಾ ಸುತ್ತಿನ ಬಿ ಗುಂಪಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡಕ್ಕೆ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಸಿಕ್ಕಿತು. 20 ಓವರ್ ಗಳಲ್ಲಿ 158/8 ಸ್ಕೋರ್ ಮಾಡಿತು. ರನ್ ಚೇಸ್ ಮಾಡಿದ ಹಾಂಗ್ ಕಾಂಗ್ ತಂಡ 114/6 ಸ್ಕೋರ್ ಮಾಡಿ ಸೋಲೊಪ್ಪಿಕೊಂಡಿತು.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

Zimbabwe survive Hong Kong scare in World T20 opener

ಹಾಂಗ್ ಕಾಂಗ್: ವಿಕೆಟ್ ಕೀಪರ್ ಅಕ್ಟಿನ್ಸನ್ ಭರ್ಜರಿ ಬ್ಯಾಟಿಂಗ್ 44 ಎಸೆತಗಳಲ್ಲಿ 54 (4x4,2x6)
* ಕ್ಯಾಂಪ್ ಬೆಲ್, ಬಾಬರ್ ತಲಾ 9 ರನ್ ಗಳಿಸಿ ಔಟ್.
* ಚಾಪ್ಮನ್ 19, ರಾತ್ 13 ಹಾಗೂ ನಾಯಕ ತನ್ವೀರ್ ಅಫ್ಜಲ್ ಅಜೇಯ 31 ರನ್ (17 ಎಸೆತ, 3x4, 1x6) ಗಳಿಸಿ ಜಯದ ಅಸೆ ಹುಟ್ಟಿಸಿದರು.
* ಕೊನೆ ಕ್ಷಣದಲ್ಲಿ ರನ್ ನಿಯಂತ್ರಿಸಿದ ಜಿಂಬಾಬ್ವೆಗೆ 14 ರನ್ ಗಳ ಜಯ.
* ತಿರಿಪಾನೋ, ಚಾತರಾಗೆ ತಲಾ 2 ಹಾಗೂ ಮಸಕಡ್ಜ, ಸಿಕಂದರ್ ರಾಜಗೆ ತಲಾ 1 ವಿಕೆಟ್.

[ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಮೆಂಟಿಗೆ ಫುಲ್ ಗೈಡ್]

ಜಿಂಬಾಬ್ವೆ ಇನ್ನಿಂಗ್ಸ್ : ನಾಯಕ ಮಸಕಡ್ಜ 13 ಎಸೆತಗಳಲ್ಲಿ 20 ರನ್ ಚೆಚ್ಚಿ ಉತ್ತಮ ಆರಂಭ ತಂದುಕೊಟ್ಟು ರನ್ ಔಟ್ ಅದರು.
* ಸಿಬಾಂಡ 46 ಎಸೆತಗಳಲ್ಲಿ 59 ರನ್ (5X4, 2X6) ಜಿಂಬಾಬ್ವೆ ಪರ ಹೀರೋ ಎನಿಸಿದರು.
* ಕೊನೆಯಲ್ಲಿ ಚಿಂಗುಂಬರ 13 ಎಸೆತಗಳಲ್ಲಿ 3 ಸಿಕ್ಸ್ ಸಿಡಿಸಿ 30 ರನ್ ಚೆಚ್ಚಿ ರಂಜಿಸಿದರು.
* 20 ಓವರ್ ಗಳಲ್ಲಿ ಇತರೆ ರನ್ ಸೇರಿ 158/8,
* ಹಾಂಗ್ ಕಾಂಗ್ ಪರ ತನ್ವೀರ್ ಇಕ್ಬಾಲ್ ಹಾಗೂ ಏಜಾಜ್ ಖಾನ್ ತಲಾ 2 ವಿಕೆಟ್ ಪಡೆದರು. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Zimbabwe relied on their experience in international cricket to tame a fighting Hong Kong by 14 runs in the opening match of the World Twenty20 Qualifiers at VCA stadium, here today (March 8).
Please Wait while comments are loading...