ಪ್ರವಾಸಿ ಭಾರತ ವಿರುದ್ಧ ಸೆಣಸಲು ಜಿಂಬಾಬ್ವೆ ತಂಡ ಪ್ರಕಟ

Posted By:
Subscribe to Oneindia Kannada

ಹರಾರೆ, ಜೂನ್ 05: ಪ್ರವಾಸಿ ಭಾರತ ವಿರುದ್ಧ ಜೂನ್ 11ರಿಂದ ಆರಂಭವಾಗಲಿರುವ ಏಕದಿನ ಹಾಗೂ ಟ್ವೆಂಟಿ20ಸರಣಿಗೆ ಜಿಂಬಾಬ್ವೆ ತಂಡವನ್ನು ಪ್ರಕಟಿಸಲಾಗಿದೆ. ವೇಗಿ ತಿನಾಶೆ ಪಯಾಂಗರ ಅವರು ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರೆ, ಗ್ರೀಮ್ ಕ್ರೇಮರ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.[ಕೊಹ್ಲಿ ಪಡೆಯಿಂದ 49 ದಿನಗಳ ಕಾಲ ವಿಂಡೀಸ್ ಟೂರ್]

3 ಏಕದಿನ ಮತ್ತು ಟಿ20 ಪಂದ್ಯಗಳನ್ನಾಡುವ ಜಿಂಬಾಬ್ವೆಯ ಎರಡೂ ತಂಡಕ್ಕೆ 30 ವರ್ಷ ವಯಸ್ಸಿನ ಗ್ರೇಮ್ ಕ್ರೇಮರ್ ನಾಯಕನಾಗಿದ್ದಾರೆ. ಇತ್ತೀಚೆಗಷ್ಟೇ ಹ್ಯಾಮಿಲ್ಟನ್ ಮಸಕಜ ಅವರನ್ನು ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. [ಕೋಚ್ ಸ್ಥಾನಕ್ಕೇರಿದ ಸಂಜಯ್ ಬಂಗಾರ್]

Zimbabwe announce squad for India series, Graeme Cremer to lead

ಕೋಚ್ ಡೆವ್ ವಾಟ್ ಮೋರ್ ಅವರನ್ನು ಬದಲಾಯಿಸಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಕಯಾ ಎಂಟಿನಿ ಅವರನ್ನು ಕೋಚ್ ಆಗಿ ನೇಮಿಸಲಾಗಿದೆ. ಜೂನ್ 11ರಿಂದ 15ರ ತನಕಏಕದಿನ ಸರಣಿ ನಡೆಯಲಿದ್ದು, ಸರಣಿ ಮುಕ್ತಾಯಗೊಂಡ ಬಳಿಕ ಜೂನ್ 18ರಿಂದ 22ರವರೆಗೆ ಟಿ20 ಸರಣಿ ನಡೆಯಲಿದೆ. ಎಲ್ಲಾ ಪಂದ್ಯಗಳು ಹರಾರೆ ಸ್ಫೋರ್ಟ್ಸ್ ಕ್ಲಬ್ ಮೈದಾನದಲ್ಲೇ ನಡೆಯಲಿದೆ.[ಜಿಂಬಾಬ್ವೆ ಪ್ರವಾಸಕ್ಕೆ ಯುವ ತಂಡ ಆಯ್ಕೆ, ಧೋನಿ ನಾಯಕ]

ಏಕದಿನ ತಂಡ: ಗ್ರೇಮ್ ಕ್ರೇಮರ್ (ನಾಯಕ), ರಿಚ್ಮಂಡ್ ಮುತುಂಬಮಿ (ವಿಕೆಟ್ ಕೀಪರ್), ತವುರೈ ಮುಜರಬನಿ, ಚಾಮು ಚಿಬಾಬ, ಪೀಟರ್ ಮೂರ್, ಎಲ್ಟನ್ ಚಿಗುಂಬುರ, ವುಸಿ ಸಿಬಾಂಡ, ತವಂಡ ಮುಪರಿವಾ, ಸೀನ್ ವಿಲಿಯಮ್ಸ್, ಸಿಕಂದರ್ ರಾಜಾ, ನೆವಿಲ್ ಮಡ್ಜಿವಾ, ಡೊನಾಲ್ಡ್ ಟಿರಿಪಾನೊ, ಟಿಮಿಸೆನ್ ಮುರುಮಾ, ವೆಲ್ಲಿಂಗ್ಟನ್ ಮಸಕಜ, ಟೆಂಡೈ ಚಿಸೊರೊ, ಹ್ಯಾಮಿಲ್ಟನ್ ಮಸಕಜ, ಟೆಂಡೈ ಚಟಾರ, ಕ್ರೇಗ್ ಎರ್ವಿನ್.[ಕೊಹ್ಲಿ ನಾಯಕತ್ವದಲ್ಲಿ ಧೋನಿ ಆಡಿದರೆ ತಪ್ಪೇನಿಲ್ಲ: ಶಾಸ್ತ್ರಿ]

ಟಿ20: ಗ್ರೇಮ್ ಕ್ರೇಮರ್ (ನಾಯಕ), ರಿಚ್ಮಂಡ್ ಮುತುಂಬಮಿ (ವಿಕೆಟ್ ಕೀಪರ್), ತವುರೈ ಮುಜರಬನಿ, ಬ್ರಿಯಾನ್ ಚಾರಿ, ಪೀಟರ್ ಮೂರ್, ಎಲ್ಟನ್ ಚಿಗುಂಬುರ, ವುಸಿ ಸಿಬಾಂಡ, ಲೂಕ್ ಜೊಂಗ್ವೆ, ಸೀನ್ ವಿಲಿಯಮ್ಸ್, ಸಿಕಂದರ್ ರಾಜಾ, ನೆವಿಲ್ ಮಡ್ಜಿವಾ, ಡೊನಾಲ್ಡ್ ತಿರಿಪಾನೊ, ತಿಮಿಸೆನ್ ಮರುಮಾ, ವೆಲ್ಲಿಂಗ್ಟನ್ ಮಸಕಡ್ಜ, ಟೆಂಡೈ ಚಿಸೊರೊ, ಹ್ಯಾಮಿಲ್ಟನ್ ಮಸಕಡ್ಜ ಟೆಂಡೈ ಚಟಾರ, ಮಾಲ್ಕಮ್ ವಾಲರ್. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Zimbabwe announce squad for India series. The ODIs will be played from June 11 to 15 and T20s will be played from June 18 to 22. All six matches will be played in Harare. Earlier Zimbabwe named South Africa pacer Makhaya Ntini and Graeme Cremer as interim coach and captain of the side.
Please Wait while comments are loading...