ಟೀಂ ಇಂಡಿಯಾ ಕೋಚ್ ಆಗಲು ಸಿದ್ಧ : ಜಹೀರ್ ಖಾನ್

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 23: ಟೀಂ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಅವರು ಕೋಚ್ ಆಗಲು ಸಿದ್ಧ ಎಂದು ಘೋಷಿಸಿದ್ದಾರೆ.

ಟೀಂ ಇಂಡಿಯಾದ ಪೂರ್ಣಾವಧಿ ಕೋಚ್ ಆಗಿ ಕನ್ನಡಿಗ ಅನಿಲ್ ಕುಂಬ್ಳೆ ಆಯ್ಕೆಯಾಗಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸಮರ್ಥವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಈಗ ಪೂರ್ಣಾವಧಿ ಬೌಲಿಂಗ್ ಕೋಚ್ ಹುದ್ದೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹುಡುಕಾಟ ನಡೆಸುತ್ತಿದೆ. ಮಾಜಿ ವೇಗಿ ಜಹೀರ್ ಖಾನ್ ಹೆಸರು ರೇಸ್ ನಲ್ಲಿ ಮುಂಚೂಣಿಯಲ್ಲಿದ್ದು, ಈ ಬಗ್ಗೆ ಜಹೀರ್ ಕೂಡಾ ಆಸಕ್ತಿ ವ್ಯಕ್ತಪಡಿಸಿದ್ದಾರೆ.

Zaheer Khan Open to Bowling Coach Role for Team India

'ಸದ್ಯಕ್ಕೆ ನಾನು ಮುಂದಿನ ಐಪಿಎಲ್ ಸೀಸನ್ ಬಗ್ಗೆ ಯೋಚಿಸುತ್ತಿದ್ದೇನೆ. ಜೊತೆಗೆ ನನ್ನ ಹೊಸ ಉದ್ಯಮ ಫಿಟ್ನೆಸ್ ಸೆಂಟರ್ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದೇನೆ. ಆದರೆ, ಭಾರತ ಕ್ರಿಕೆಟ್ ಗೆ ಉಪಯುಕ್ತವಾಗುವ ಯಾವುದೇ ಹುದ್ದೆಯನ್ನು ನಿಭಾಯಿಸಲು ನಾನು ಸಿದ್ಧ' ಎಂದು ಜಹೀರ್ ಹೇಳಿದ್ದಾರೆ.

ಪ್ರಸ್ತುತ ಬೌಲಿಂಗ್ ಕೋಚ್ ಆಗಿರುವ ಭಾರತ್ ಅರುಣ್ ಅವರನ್ನೇ ಮುಂದಿನ ಅವಧಿಗೆ ಆಯ್ಕೆ ಮಾಡುವ ಸಾಧ್ಯೆತೆಯಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಟೀಂ ಇಂಡಿಯಾದ ವೇಗಿ ಮೊಹ್ಮದ್ ಶಮಿ ಮಾತನಾಡಿ, ಜಹೀರ್ ಖಾನ್ ಅವರಿಗೆ ಭಾರತದ ಬೌಲಿಂಗ್ ವಿಭಾಗವನ್ನು ಯಶಸ್ವಿಯಾಗಿ ಮುನ್ನಡೆಸುವ ಎಲ್ಲಾ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ. ಜಹೀರ್ ಆಯ್ಕೆ ಬಗ್ಗೆ ಕೋಚ್ ಅನಿಲ್ ಕುಂಬ್ಳೆ, ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರು ಸಲಹೆ ನೀಡಲಿದ್ದು, ಅದರಂತೆ ಬಿಸಿಸಿಐ ನಿರ್ಧಾರ ಕೈಗೊಳ್ಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former India pacer Zaheer Khan has become the frontrunner to become bowling coach which has been vacant since Board of Control for Cricket (BCCI) decided not to renew Bharath Arun’s contract. Khan said that he would think about it when the opportunity comes.
Please Wait while comments are loading...