ಜಹೀರ್ ಖಾನ್‌ ಬೌಲಿಂಗ್ ಕೋಚ್ ಅಲ್ಲ ಕೇವಲ ಸಲಹೆಗಾರ: ಬಿಸಿಸಿಐ

Posted By:
Subscribe to Oneindia Kannada

ನವದೆಹಲಿ, ಜುಲೈ 14 : ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್, ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ ಎಂಬ ಸುದ್ದಿಗೆ ಬಿಸಿಸಿಐ ಸ್ಪಷ್ಟನೆ ನೀಡಿದೆ.

ಜಹೀರ್ ಖಾನ್ ಆಯ್ಕೆ ಬಗ್ಗೆ ರವಿಶಾಸ್ತ್ರಿ ಅಪಸ್ವರ?

ಜಹೀರ್ ಖಾನ್‌ ಅವರನ್ನು ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಸಲಹೆಗಾರನನ್ನಾಗಿ ನೇಮಕ ಮಾಡಲಾಗಿದ್ದು, ವಿದೇಶದಲ್ಲಿ ನಡೆಯುವ ಪಂದ್ಯಗಳಿಗೆ ಮಾತ್ರ ಅವರ ಸೇವೆ ಸೀಮಿತ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಗುರುವಾರ ಸ್ಪಷ್ಟಪಡಿಸಿದೆ.

Zaheer Khan as the bowling consultant of the Indian team says BCCI

ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಸಲಹೆ ಪಡೆದುಕೊಂಡೇ ಈ ನೇಮಕಾತಿ ನಡೆದಿತ್ತು ಎಂದೂ ತಿಳಿಸಲಾಗಿದೆ. ಮೇ 11ರಂದು ರವಿಶಾಸ್ತ್ರಿ ಅವರ ನೇಮಕಾತಿಯನ್ನು ಪ್ರಕಟಿಸಿದ್ದ ಬಿಸಿಸಿಐ ಬೌಲಿಂಗ್ ಕೋಚ್ ಆಗಿ ಜಹೀರ್ ಖಾನ್ ಅವರನ್ನು ಮತ್ತು ವಿದೇಶದಲ್ಲಿ ನಡೆಯುವ ಪಂದ್ಯಗಳಿಗೆ ಬ್ಯಾಟಿಂಗ್ ಸಲಹೆಗಾರರನ್ನಾಗಿ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಿರುವುದಾಗಿ ತಿಳಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Board of Control for Cricket in India on Thursday made it clear that Zaheer Khan, in his capacity as the bowling consultant of the Indian team, will only be available for overseas tours.The BCCI said the same through a press release which also thanked the Cricket Advisory Committee (CAC) for selecting the next head coach of the Indian team.
Please Wait while comments are loading...