300 ಏಕದಿನ ಪಂದ್ಯಗಳ ಸಾಧನೆಯ ಹೊಸ್ತಿಲಲ್ಲಿ ಯುವಿ

Posted By:
Subscribe to Oneindia Kannada

ಬರ್ಮಿಂಗ್ ಹ್ಯಾಮ್, ಜೂನ್ 14: ಚಾಂಪಿಯನ್ಸ್ ಟ್ರೋಫಿಯ ತನ್ನ ಮುಂದಿನ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶದ ವಿರುದ್ಧ ಸೆಣಸಲು ಸಜ್ಜಾಗಿದೆ. ಈ ಸೆಮಿಫೈನಲ್ ಪಂದ್ಯದ ಮತ್ತೊಂದು ವಿಶೇಷವೇನೆಂದರೆ, ಇದು ತಂಡದ ಹಿರಿಯ ಆಟಗಾರ ಯುವರಾಜ್ ಸಿಂಗ್ ಅವರ 300ನೇ ಏಕದಿನ ಪಂದ್ಯ.

ತಮ್ಮ ಈವರೆಗಿನ 17 ವರ್ಷಗಳ ಸುದೀರ್ಘ ವೃತ್ತಿ ಬದುಕಿನಲ್ಲಿ ಯುವರಾಜ್ ಸಿಂಗ್ ಅವರ ಸಾಧನೆ ಅನನ್ಯ. ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಭಾರತ ಪರವಾಗಿ ಮೂಡಿಬಂದ ಅದ್ಭುತ ಮ್ಯಾಚ್ ಫಿನಿಷರ್ ನಲ್ಲಿ ಅವರೂ ಒಬ್ಬರು.

ವಿಡಿಯೋ: ಯುವರಾಜ್ ಸಿಂಗ್ ಗೆ 'ಸೂಪರ್ ಪವರ್' ಇದೆಯಂತೆ

Yuvraj Singh set to play 300th ODI: Decoding one of India's greatest ever ODI player

ಇಂತಿಪ್ಪ ಯುವರಾಜ್ ಸಿಂಗ್ ಅವರನ್ನು ಇಲ್ಲಿ ಕೊಂಚ ಹಿಡಿದಿಡಿವ ಪ್ರಯತ್ನ ಮಾಡಲಾಗಿದೆ ಹಾಗೂ ಅವರ ಸಾಧನೆ, ವೈಶಿಷ್ಟ್ಯಗಳನ್ನು ಪಟ್ಟಿ ಮಾಡಲಾಗಿದೆ.

- ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಅವರ ನಂತರ 300 ಪಂದ್ಯಗಳ ಸಾಧನೆ ಮಾಡಿದ ಕ್ರಿಕೆಟಿಗರಾಗಿ ಯುವರಾಜ್ ಸಿಂಗ್ ಹೊರಹೊಮ್ಮಿದ್ದಾರೆ.

ಮಾರಾಟಕ್ಕಿದ್ದಾರೆ ಪಾಕಿಸ್ತಾನದ ವೇಗದ ಬೌಲರ್ ವಹಾಬ್ ರಿಯಾಜ್ !

- ಕೆಲವಾರು ಕಷ್ಟದ ಸಂದರ್ಭದಲ್ಲಿ ಭಾರತ ತಂಡಕ್ಕೆ ನೆರವಾಗಿರುವ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ, ನಿರ್ವಿವಾದವಾಗಿ ಅವರು ಭಾರತದ ಶ್ರೇಷ್ಠ ಮ್ಯಾಚ್ ವಿನ್ನರ್ ಗಳಲ್ಲೊಬ್ಬರು ಎನ್ನಲಡ್ಡಿಯಿಲ್ಲ.

- 2002ರಲ್ಲಿ ನಡೆದಿದ್ದ ಸಿಡ್ನಿಯಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಭಾರತಕ್ಕೆ 320ಕ್ಕೂ ಹೆಚ್ಚು ರನ್ ಗಳ ಚೇಸಿಂಗ್ ಗೆ ಇಳಿದಿದ್ದಾಗ, ಅದ್ಭುತವಾಗಿ 139 ರನ್ ಗಳನ್ನು ಚಚ್ಚಿದ್ದ ಯುವರಾಜ್ ಸಿಂಗ್ ಅವರು, ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಭಾರತ vs ಇಂಗ್ಲೆಂಡ್ ಫೈನಲ್, ಇದು ಜನರ ಬಯಕೆ: ಕೊಹ್ಲಿ

- ಎರಡು ವಿಶ್ವಕಪ್ ಗೆದ್ದ ತಂಡದಲ್ಲಿ ಭಾಗಿಯಾಗಿದ್ದ ಹೆಗ್ಗಳಿಕೆ ಯುವರಾಜ್ ಸಿಂಗ್ ಅವರದ್ದು.

- ಇದು ಏಕದಿನ ಪಂದ್ಯದಲ್ಲಾದ ಸಾಧನೆಯಲ್ಲದಿದ್ದರೂ, ಯುವರಾಜ್ ಸಿಂಗ್ ಅವರನ್ನು ನೆನೆಯುವಾಗ ಇದನ್ನು ಹೇಳಲೇಬೇಕು. 2007ರಲ್ಲಿ ಡರ್ಬನ್ ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರು ಭಾರತದ ಇನಿಂಗ್ಸ್ ನ 19ನೇ ಓವರ್ ನಲ್ಲಿ ಇಂಗ್ಲೆಂಡ್ ನ ಬ್ರಾಡ್ ಬೌಲಿಂಗ್ ನಲ್ಲಿ ಆರು ಎಸೆತಗಳಲ್ಲಿ ಸತತವಾಗಿ ಆರು ಸಿಕ್ಸರ್ ಹೊಡೆದಿದ್ದು ಅವರ ದೈತ್ಯ ಪ್ರತಿಭೆಗೆ ಸಾಕ್ಷಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
He was a storehouse of talent at the onset, a rare blend of grace and power, but for the better part of his 17-year-career, Yuvraj Singh has been an enigma as well as a paradox in Indian cricket.
Please Wait while comments are loading...