ಗುಜರಾತ್ ಲಯನ್ಸ್ ವಿರುದ್ಧ ಯುವರಾಜ್ ಸಿಂಗ್ ಕಣಕ್ಕೆ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಹೈದ್ರಾಬಾದ್, ಮೇ 05 : ಗಾಯದಿಂದ ಚೇತರಿಸಿಕೊಂಡಿರುವ ಯುವರಾಜ್ ಸಿಂಗ್ ಅವರು ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 9) ನಲ್ಲಿ ಆಡಲು ಸಜ್ಜಾಗಿದ್ದಾರೆ. ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ಸೇರಿಕೊಳ್ಳಲಿರುವ ಯುವರಾಜ್ ಸಿಂಗ್ ಅವರು ಗುಜರಾತ್ ಲಯನ್ಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಯುವರಾಜ್ ಸೇರ್ಪಡೆಯಿಂದ ಡೇವಿಡ್ ವಾರ್ನರ್ ಪಡೆಗೆ ಮತ್ತಷ್ಟು ಬಲ ಬಂದಂತಾಗಿದೆ. ಮೇ. 6 ರಂದು ಗುಜರಾತ್ ಲಯನ್ಸ್ ಪಂದ್ಯದ ವಿರುದ್ಧ ಯುವಿ ಕಣಕ್ಕಿಳಿಯಲಿದ್ದಾರೆ.

Yuvraj Singh ready to play his first IPL 2016

ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ಸನ್ ರೈಸರ್ಸ್ ತಂಡ ಯುವಿ ಆಗಮನದಿಂದ ಬ್ಯಾಟಿಂಗ್ ನಲ್ಲೂ ಬಲಿಷ್ಠವಾಗಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2016 ಟೂರ್ನಿಯಲ್ಲಿ ಒಂದು ಪಂದ್ಯವನ್ನು ಆಡದೆ ಗಾಯದಿಂದ ಹೊರಗುಳಿದಿದ್ದ ಯುವಿ ಮೇ. 06 ರಂದು ಗುಜರಾತ್ ಲಯನ್ಸ್ ವಿರುದ್ಧ ಪಂದ್ಯದಲ್ಲಿ ಆಡುವ ಮೂಲಕ ಐಪಿಎಲ್ 2016 ನಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ.

ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿರುವ 34 ಹರೆಯದ ಯುವರಾಜ್ ಸಿಂಗ್ ಯಾವಾಗಾ ಆಡುತ್ತೇನೋ ಎಂಬ ಕಾತುರದಲ್ಲಿದ್ದಾರೆ. ಮುಂದಿನ ಪಂದ್ಯದಲ್ಲಿ ನಾನು ಆಡಲು ಸಿದ್ದನಿದ್ದೇನೆ ಇನ್ನು ಮೂರು ದಿನಗಳು ಅಷ್ಟೇ ಐಪಿಎಲ್ ಸೀಜನ್ 9 ನಲ್ಲಿ ಮೊದಲ ಪಂದ್ಯದಲ್ಲಿ ಆಡುತ್ತಿರುವುದು ಖುಷಿ ಆಗುತ್ತಿದೆ ಎಂದು ಯುವಿ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಒಟ್ಟು 14 ಪಂದ್ಯಗಳಲ್ಲಿ ಈಗಾಗಲೇ 7 ರಲ್ಲಿ ಆಡಿರುವ ಹೈದ್ರಾಬಾದ್ ತಂಡಕ್ಕೆ ಇನ್ನು 7 ಪಂದ್ಯಗಳು ಬಾಕಿ ಇವೆ. ಈ 7 ರಲ್ಲಿ ಯುವಿ ಆಡಲು ಕಾತುರದಿಂದ ಕಾಯುತ್ತಿದ್ದಾರೆ. ಮೇ. 6 ರಂದು ತವರಿನಲ್ಲಿ ಬಲಿಷ್ಠ ಗುಜರಾತ್ ಲಯನ್ಸ್ ತಂಡವನ್ನು ಎದುರಿಸಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Good news for Yuvraj Singh fans as the Sunrisers Hyderabad all-rounder Yuvraj Singh is fit and fine. Yuvi has recovered from ankle injury all set to play his fist IPL game of the ongoing season
Please Wait while comments are loading...