ಯುವರಾಜ್ ಮಾದಕ ವ್ಯಸನಿಯಲ್ಲ, ಅವನೊಬ್ಬ 'ಸಿಂಹ'

Posted By:
Subscribe to Oneindia Kannada

ನವದೆಹಲಿ, ನವೆಂಬರ್ 03: ಹಿರಿಯ ಆಟಗಾರ ಯುವರಾಜ್ ಸಿಂಗ್ ಅವರು ಮಾದಕ ವ್ಯಸನಿ ಎಂಬ ಆರೋಪವನ್ನು ಅವರ ತಂದೆ ಯೋಗರಾಜ್ ಸಿಂಗ್ ಅಲ್ಲಗೆಳೆದಿದ್ದಾರೆ. ನನ್ನ ಮಗ ಮಾದಕ ವ್ಯಸನಿಯಲ್ಲ, ಅವನೊಬ್ಬ ಸಿಂಹ ಎಂದು ಹೇಳಿದ್ದಾರೆ.

ಆಲ್ ರೌಂಡರ್ ಯುವರಾಜ್ ಸಿಂಗ್ ಗಾಂಜಾ ಸೇವನೆ ಮಾಡುತ್ತಿದ್ದ ಎಂದು ಯುವರಾಜ್ ಸಿಂಗ್ ಸಹೋದರ ಜೋರಾವರ್ ಸಿಂಗ್ ಮಾಜಿ ಪತ್ನಿ ಆಕಾಂಕ್ಷ ಶರ್ಮ ಹೊಸ ಬಾಂಬ್ ಸಿಡಿಸಿದ್ದರು. ಇದಕ್ಕೆ ಪ್ರತಿಯಾಗಿ ಯೋಗರಾಜ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.[ಯುವರಾಜ್ ವಿರುದ್ಧ ಬಿಗ್ ಬಾಸ್ ನಲ್ಲಿ ಏನಿದು ಆರೋಪ?]

ಬಿಗ್ ಬಾಸ್ ನಿಂದ ಗೇಟ್ ಪಾಸ್ ಪಡೆದು ಹೊರಬಂದ ಆಕಾಂಕ್ಷ ಅವರು ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ "ಯುವರಾಜ್ ಸಿಂಗ್ ತಾನು ಗಾಂಜಾ ಸೇವಿಸುತ್ತಿದ್ದಾಗಿ ನನ್ನ ಬಳಿ ಹೇಳಿಕೊಂಡಿದ್ದ ಎಂದು ಆರೋಪಿಸಿದ್ದರು. ಅಲ್ಲದೆ ಮನೆಯಲ್ಲಿ ಯುವರಾಜ್ ಸಿಂಗ್ ಸೋದರ ಜೋರಾವರ್ ನನಗೆ ಕಿರುಕುಳ ನೀಡುತ್ತಿದ್ದರೆ ಯುವರಾಜ್ ಸುಮ್ಮನಿರುತ್ತಿದ್ದರು ಎಂದು ಆಕಾಂಕ್ಷ ಆರೋಪಿಸಿದ್ದರು.

ಆಕಾಂಕ್ಷ ಆರೋಪವನ್ನು ತಳ್ಳಿ ಹಾಕಿರುವ ಮಾವ ಯೋಗರಾಜ್, ಇದೆಲ್ಲ ಅಂತೆ ಕಂತೆ ಸುದ್ದಿ, ಆಕೆ ಹೇಳಿದ್ದರಲ್ಲಿ ಎಳ್ಳಷ್ಟು ಸತ್ಯವಿಲ್ಲ, ಯುವರಾಜ್ ಅಷ್ಟೇ ಅಲ್ಲ ನನ್ನ ನಾಲ್ವರು ಮಕ್ಕಳಲ್ಲಿ ಯಾರೂ ಕೂಡಾ ಡ್ರಗ್ಟ್ ಅಡಿಕ್ಟ್ ಗಳಿಲ್ಲ. ಹುಲ್ಲು ತಿನ್ನುವ ಪೈಕಿಯಲ್ಲ, ಎಲ್ಲರೂ ಸಿಂಹಗಳು ಎಂದಿದ್ದಾರೆ.

ಯುವರಾಜ್ ಸಿಂಗ್ ಕುಟುಂಬದ ಬಗ್ಗೆ ಆರೋಪ

ಯುವರಾಜ್ ಸಿಂಗ್ ಕುಟುಂಬದ ಬಗ್ಗೆ ಆರೋಪ

ಯುವರಾಜ್ ತಾಯಿ ಶಬನಮ್ ಸಿಂಗ್ ಅವರು ನಿಮಗೆ ಯಾವ ರೀತಿ ಕಿರುಕುಳ ನೀಡುತ್ತಿದ್ದರು ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು " ಮನೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವುದು ಸಾಮಾನ್ಯ ಸಂಗತಿ, ಕಿರುಕುಳದ ಭಾಗವಾಗಿ ನನ್ನ ಪತಿಯೊಂದಿಗೆ ಗಾಂಜಾ ಸೇವನೆ ಮಡಬೇಕಿತ್ತು" ಎಂದು ಆಕಾಂಕ್ಷ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಯುವಿ ತಾಯಿ

ಈ ಬಗ್ಗೆ ಪ್ರತಿಕ್ರಿಯಿಸಿದ ಯುವಿ ತಾಯಿ

ಈ ಬಗ್ಗೆ ಪ್ರತಿಕ್ರಿಯಿಸಿದ ಯುವರಾಜ್ ಸಿಂಗ್ ತಾಯಿ ಶಬನಮ್ ಸಿಂಗ್, ವಿಚ್ಛೇದನ ವಿಷಯ ಸದ್ಯ ಕೋರ್ಟಿನಲ್ಲಿದೆ. ಈ ವಿಷಯವಾಗಿ ಆಕೆ ಹೇಗೆ ಮಾತನಾಡಬಲ್ಲಳು. ನ್ಯಾಯಾಂಗ ನಿಂದನೆಯಾಗುವುದಿಲ್ಲವೇ. ನಮ್ಮನ್ನು ಹೇಳಲು ಸಾಕಷ್ಟು ವಿಷಯವಿದೆ. ಆದರೆ, ಕೆಸರೆರೆಚಾಟದಲ್ಲಿ ತೊಡಗಲು ನನಗಿಷ್ಟವಿಲ್ಲ. ಆಕೆ ಕೂಡಾ ಒಬ್ಬರ ಮಗಳು ಎಂಬುದನ್ನು ಮರೆಯದಿರಲಿ ಎಂದಿದ್ದಾರೆ.

ಇನ್ನೂ ವಿವಾಹ ವಿಚ್ಛೇದನ ಸಿಕ್ಕಿಲ್ಲ

ಇನ್ನೂ ವಿವಾಹ ವಿಚ್ಛೇದನ ಸಿಕ್ಕಿಲ್ಲ

ಬಿಗ್ ಬಾಸ್ ನಲ್ಲಿ ಸಹ ಸ್ಪರ್ಧಿ ಗೌರವ್ ಜತೆ ಮಾತನಾಡುವ ಸಂದರ್ಭದಲ್ಲಿ ಆಕಾಂಕ್ಷಾ ಅವರ ಉಗುರಿನ ಬಣ್ಣವನ್ನು ಗೌರವ್ ತೆಗೆಯುತ್ತಿದ್ದರು. ತನ್ನ ಮದುವೆ, ಸಂಸಾರದ ಬಗ್ಗೆ ಆಕಾಂಕ್ಷಾ ಹೇಳಿಕೊಂಡರು. ವಿವಾಹ ವಿಚ್ಛೇದನ ಇನ್ನೂ ಸಿಕ್ಕಿಲ್ಲ. ಈ ಶೋನಲ್ಲಿ ನನ್ನ ನೋವನ್ನು ತೋಡಿಕೊಂಡಿದ್ದೇನೆ. ನನಗೆ ಒಳ್ಳೆ ಬದುಕು ಸಿಗುವ ನಿರೀಕ್ಷೆಯಿದೆ ಎಂದಿದ್ದರು. ಆದರೆ, ಆಕೆಗೆ ಇನ್ನೂ ವಿವಾಹ ವಿಚ್ಛೇದನ ಸಿಕ್ಕಿಲ್ಲ. ಈಗ ಬಿಗ್ ಬಾಸ್ ನಿಂದಲೂ ಔಟ್ ಆಗಿದ್ದಾರೆ.

ಯೋಗರಾಜ್ ಪ್ರತಿಕ್ರಿಯೆ ನೀಡಿದ್ದೇನು?

ಯೋಗರಾಜ್ ಪ್ರತಿಕ್ರಿಯೆ ನೀಡಿದ್ದೇನು?

ಆಕೆಗೆ ತನ್ನ ವೈಯಕ್ತಿಕ ಬದುಕು ಸರಿ ಪಡಿಸಿಕೊಳ್ಳುವುದು ಬೇಕಿಲ್ಲ. ಇಲ್ಲಸಲ್ಲದ ಆರೋಪ ಮಾಡುವುದೇ ಕಸುಬಾಗಿದೆ. ತನ್ನ ಸಂಸಾರವನ್ನು ಉಳಿಸಿಕೊಳ್ಳಲು ಪ್ರಯತ್ನ ಪಡದೇ ಅನ್ಯರ ಮೇಲೆ ದೂಷಣೆ ಮಾಡುವುದರಲ್ಲಿ ಅರ್ಥವಿಲ್ಲ. ಆಕೆ ಮಾತಿಗೆ ಬೆಲೆ ಕೊಡಬೇಕಾಗಿಲ್ಲ ಎಂದು ಮಾಜಿ ಆಟಗಾರ ಯೋಗರಾಜ್ ಸಿಂಗ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Veteran Indian cricketer Yuvraj Singh's father Yograj Singh has rubbished the allegations that his son is a drug addict.Yuvraj Singh is a lion, not a drug addict, says father Yograj Singh
Please Wait while comments are loading...