ಡಿಸೆಂಬರ್​ ನಲ್ಲಿ ಯುವರಾಜ್ ರಿಂದ ಹೊಸ ಇನ್ನಿಂಗ್ಸ್ ಶುರು

Posted By:
Subscribe to Oneindia Kannada

ಮುಂಬೈ, ಜುಲೈ 29: ಟೀಂ ಇಂಡಿಯಾದ ಹೆಮ್ಮೆಯ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ಡಿಸೆಂಬರ್ ತಿಂಗಳಿನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರಂತೆ. ನಟಿ, ರೂಪದರ್ಶಿ ಹಜೇಲ್ ಕೀಚ್ ಜತೆ ದಾಂಪತ್ಯಕ್ಕೆ ಕಾಲಿಡಲಿದ್ದಾರೆ.

ಕಳೆದ ನವೆಂಬರ್​ನಲ್ಲಿ ಯುವರಾಜ್-ಹೆಜಲ್ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಯುವರಾಜ್ ಅವರ ವಿವಾಹಕ್ಕೆ ಕ್ರಿಕೆಟರ್ಸ್, ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

Yuvraj Singh and Hazel Keech to get married in December?

ಡಿಸೆಂಬರ್ ತಿಂಗಳಲ್ಲಿ ಇಬ್ಬರು ಪಂಜಾಬ್ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ ಎಂದು ವೆಬ್​ಸೈಟೊಂದು ಪ್ರಕಟಿಸಿದೆ. ಸ್ನೇಹಿತರೊಬ್ಬರ ವಿವಾಹಕ್ಕೆ ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಯುವರಾಜ್ ಅವರಿಗೆ ಈ ಬಗ್ಗೆ ಕೇಳಿದ ಪ್ರಶ್ನೆಗೆ ಡಿಸೆಂಬರ್ ತನಕ ಕಾಯಿತಿ ಎಂಬ ಉತ್ತರ ಸಿಕ್ಕಿದೆ.

ಸಿಖ್ ಹಾಗೂ ಹಿಂದೂ ಸಂಪ್ರದಾಯದಂತೆ ವಿವಾಹವಾಗುವುದಾಗಿ ಯುವರಾಜ್ ಹೇಳಿಕೊಂಡಿದ್ದರು. ಇಂಗ್ಲೆಂಡ್ ಮೂಲದ ಬಾಲಿವುಡ್ ನಟಿ ಹೆಜಲ್ ಬಾಲಿವುಡ್​ನ ಬಿಲ್ಲಾ ಹಾಗೂ ಬಾಡಿಗಾರ್ಡ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಂಗದ್ ಬೇಡಿ ಹಾಗೂ ಬ್ರೂನಾ ಅಬ್ದುಲ್ಲಾ ಅವರು ವರ ಹಾಗೂ ವಧುವಿನ ಆಪ್ತ ಸಖ, ಸಖಿಯ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹವಾಯಿ, ಬೋರಾ ಬೋರಾ ಅಥವಾ ಮಾಲ್ಡೀವ್ಸ್ ಗೆ ಇಬ್ಬರು ಹನಿಮೂನ್ ಗೆ ತೆರಳುತ್ತಾರೆ ಎಂಬ ವಿಷಯವೂ ಹೊರಬಿದ್ದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yuvraj Singh who got engaged to Bollywood actress Hazel Keech last November is all set to tie knot this year in December.
Please Wait while comments are loading...