'ಮಹಾದಾನಿ' ಎಂದು ಯುವರಾಜ್ ಹೊಗಳಿದ್ದು ಯಾರನ್ನು?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 03: ಟೀಂ ಇಂಡಿಯಾದ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ಬುಧವಾರ(ಆಗಸ್ಟ್ 03) ಕ್ರೀಡಾಪಟುವೊಬ್ಬರನ್ನು ಮಹಾದಾನಿ ಎಂದು ಹಾಡಿಹೊಗಳಿ ಟ್ವೀಟ್ ಮಾಡಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಸರಿ ಸುಮಾರು 41 ಯುಎಸ್ ಡಾಲರ್ ದಾನ ಮಾಡಿರುವ ಕ್ರೀಡಾಪಟುವಿಗೆ ಹ್ಯಾಟ್ಸ್ ಆಫ್ ಎಂದು ಯುವಿ ಹೇಳಿದ್ದಾರೆ.

ಈ ರೀತಿ ಯುವರಾಜ್ ಸಿಂಗ್ ರಿಂದ ಹೊಗಳಿಸಿಕೊಂಡ ಕ್ರೀಡಾಪಟು ಜನಪ್ರಿಯ ಬ್ಯಾಸ್ಕೆಟ್ ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್. ಅಮೆರಿಕದ ಮಾಧ್ಯಮಗಳಲ್ಲಿ ಜೇಮ್ಸ್ ಅವರ ದಾನ ಧರ್ಮ ಕಾರ್ಯಗಳ ಬಗ್ಗೆ ವರದಿ ಬಂದಿದ್ದು, 41.8 ಮಿಲಿಯನ್ ಡಾಲರ್ಸ್ ಮೊತ್ತವನ್ನು ಅಸಹಾಯಕ ಮಕ್ಕಳ ಶಾಲೆ, ಕಾಲೇಜು ಶಿಕ್ಷಣಕ್ಕೆ ವಿನಿಯೋಗಿಸಿದ್ದಾರೆ. ಈ ಮೂಲಕ ಮಹಾ ದಾನಿ ಅಥ್ಲೀಟ್ ಗಳ ಪೈಕಿ 6ನೇ ಸ್ಥಾನಕ್ಕೇರಿದ್ದಾರೆ.
1 USD = 66.80713 INR 1 INR = 0.01497 USD
[ಕರೆನ್ಸಿ ಕನ್ವರ್ಟರ್ ಗಾಗಿ ಕ್ಲಿಕ್ ಮಾಡಿ]

Yuvraj Singh says hats off to American 'legend' for donating $41 million

31 ವರ್ಷ ವಯಸ್ಸಿನ ಜೇಮ್ಸ್ ಅವರು ಕ್ಲೇವ್ ಲ್ಯಾಂಡ್ ಕವಾಲಿಯರ್ಸ್ ಪರ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ಸ್ (ಎನ್ ಬಿಎ) ಲೀಗ್ ನಲ್ಲಿ ಆಡುತ್ತಾರೆ. ಈಗಾಗಲೆ ಮೂರು ಪ್ರಶಸ್ತಿ, 4 ಬಾರಿ ಕ್ರೀಡಾಕೂಟದ ಉತ್ತಮ ಆಟಗಾರ ಎನಿಸಿಕೊಂಡಿದ್ದಾರೆ.

Yuvraj Singh says hats off to American 'legend' for donating $41 million

ಆದರೆ, ಜೇಮ್ಸ್ ಈ ಬಾರಿಯ ರಿಯೋ ಒಲಿಂಪಿಕ್ಸ್ 2016 ರಲ್ಲಿ ಪಾಲ್ಗೊಳ್ಳುತ್ತಿಲ್ಲ. 2004, 2008 ಹಾಗೂ 2012ರ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿದ್ದ ಜೇಮ್ಸ್ ಅವರು ಈ ಬಾರಿ ಅಮೆರಿಕನ್ ಬ್ಯಾಸ್ಕೆಟ್ ಬಾಲ್ ಟೀಂನಲ್ಲಿ ಕಾಣಿಸಿಕೊಳ್ಳುವುದಿಲ್ಲ.

.

ಬೀಜಿಂಗ್ 2008, ಲಂಡನ್ 2012 ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿರುವ ಜೇಮ್ಸ್ ಅವರು 1,000 ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ. ಕಾಲೇಜು ತನಕ ಓದಿ ಮಕ್ಕಳು ಜ್ಞಾನಾರ್ಜನೆ ಮಾಡಿ ಹೇಗೆ ಸಮಾಜದಲ್ಲಿ ಬಾಳುತ್ತಾರೆ ಎಂಬುದನ್ನು ಕಾಣಲು ಉತ್ಸುಕ ನಾಗಿದ್ದೇನೆ ಎಂದು ಜೇಮ್ಸ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian cricket all-rounder Yuvraj Singh today (August 3) praised an American basketball star for donating $41 million to send children to college.
Please Wait while comments are loading...