ಹಾಂಕಾಂಗ್ ಟ್ವೆಂಟಿ–20 ಕ್ರಿಕೆಟ್ ಲೀಗ್‌ಗೆ ಯುಸೂಫ್ ಪಠಾಣ್ ಎಂಟ್ರಿ

Written By: Ramesh
Subscribe to Oneindia Kannada

ನವದೆಹಲಿ, ಫೆಬ್ರವರಿ. 12 : ಐಪಿಎಲ್ ಮಾದರಿಯಲ್ಲಿ ಮುಂದಿನ ತಿಂಗಳು ಹಾಂಕಾಂಗ್ ನಲ್ಲಿ ನಡೆಯಲಿರುವ ಟ್ವೆಂಟಿ-20 ಕ್ರಿಕೆಟ್ ಲೀಗ್‌ನಲ್ಲಿ ಭಾರತದ ಯುಸೂಫ್ ಪಠಾಣ್ ಆಡಲಿದ್ದಾರೆ.

ಇದರಿಂದ ಅವರು ವಿದೇಶಿ ಲೀಗ್‌ನಲ್ಲಿ ಆಡಲಿರುವ ಭಾರತದ ಮೊದಲ ಕ್ರಿಕೆಟಿಗ ಎನ್ನುವ ಕೀರ್ತಿಗೆ ಭಾಜನರಾಗಲಿದ್ದಾರೆ. ಆ ಟೂರ್ನಿ ಮಾರ್ಚ್‌ 8ರಿಂದ 12ರ ವರೆಗೆ ನಡೆಯಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯೂಸಫ್ ಪಠಾಣ್, 'ವಿದೇಶಿ ಲೀಗ್‌ನಲ್ಲಿ ಆಡಲು ಅನುಮತಿ ಕೊಟ್ಟ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಬರೋಡ ಕ್ರಿಕೆಟ್‌ ಸಂಸ್ಥೆಗೆ ಧನ್ಯವಾದಗಳು. ಮುಂಬರುವ ಐಪಿಎಲ್ ಟೂರ್ನಿಗೆ ಸಜ್ಜಾಗಲು ಹಾಂಕಾಂಗ್ ನಲ್ಲಿ ನಡೆಯಲಿರುವ ಟೂರ್ನಿ ವೇದಿಕೆಯಾಗಲಿದೆ. ಆ ಲೀಗ್ ಅನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ'ಎಂದು ಹೇಳಿದ್ದಾರೆ.

Yusuf Pathan to feature in Hong Kong T20 league, becomes first Indian to sign for foreign league

ಇತ್ತೀಚಿಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಗಮನಾರ್ಹ ಸಾಮರ್ಥ್ಯ ನೀಡಿದ್ದರು. 35 ಎಸೆತಗಳಲ್ಲಿ 56 ರನ್‌ ಹೊಡೆದು ಗಮನ ಸೆಳೆದಿದ್ದರು.

ಟ್ವೆಂಟಿ-20 ಮಾದರಿಯಲ್ಲಿ ಪಠಾಣ್ ಹಲವು ದಾಖಲೆಗಳ ಒಡೆಯರಾಗಿದ್ದಾರೆ. ಐಪಿಎಲ್ ನಲ್ಲಿ ವೇಗದ ಅರ್ಧಶತಕ ಗಳಿಸಿದ ದಾಖಲೆ ಹೊಂದಿದ್ದಾರೆ.

ಇನ್ನು ಈ ಹಾಂಕಾಂಗ್ ಟ್ವೆಂಟಿ-20 ಲೀಗ್‌ನಲ್ಲಿ ಶ್ರೀಲಂಕಾದ ಕುಮಾರ್ ಸಂಗಕ್ಕಾರ, ತಿಲಕರತ್ನೆ ದಿಕ್ಷ್ಯಾನ್, ವೆಸ್ಟ್ ಇಂಡೀಸ್ ನ ಡೆರೇನ್ ಸಮಿ, ನ್ಯೂಜಿಲೆಂಡ್ ನ ಜೇಮ್ಸ್ ಫ್ರಾಂಕ್ಲಿನ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಆಪ್ ಸ್ಪಿನ್ನರ್ ಜೋಹನ್ ಬೋಥ ಆಡಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India discard Yusuf Pathan was on Saturday (Feb 11) unveiled by Hong Kong's Kowloon Cantons franchise, making him the first Indian male cricketer to feature in an overseas Twenty20 league.
Please Wait while comments are loading...