ಏಷ್ಯಾಕಪ್ ಫೈನಲ್ : ಇಂಡೋ-ಬಾಂಗ್ಲಾ ಕಾದಾಟದ ಮುನ್ನೋಟ

By: ರಮೇಶ್ ಬಿ
Subscribe to Oneindia Kannada

ಮಿರ್ ಪುರ್ (ಬಾಂಗ್ಲಾದೇಶ). ಮಾರ್ಚ್.04: ಟ್ವೆಂಟಿ20 ಮಾದರಿಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಭಾನುವಾರ (ಮಾರ್ಚ್ 06) ರಂದು ಷೇರ್ ಎ ಬಾಂಗ್ಲಾ ಮೈದಾನದಲ್ಲಿ ನಡೆಯಲಿದೆ. ಬಾಂಗ್ಲಾದೇಶ ಮತ್ತು ಭಾರತ ಈ ಎರಡು ತಂಡಗಳು ಟ್ರೋಫಿಗಾಗಿ ಕಾದಾಟ ನಡೆಸಲಿವೆ.

ಬಾಂಗ್ಲಾದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಟಿ-20 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಯುಎಇ ಈ ಎಲ್ಲಾ ತಂಡಗಳನ್ನು ಮಣಿಸಿ ಒಂದು ಸೋಲು ಕಾಣದೆ ಫೈನಲ್ ಪ್ರವೇಶಿಸಿದೆ. ಇತ್ತ ಬಾಂಗ್ಲಾದೇಶ ತಂಡ ಕೂಡ ಪಾಕಿಸ್ತಾನವನ್ನು ಸೋಲಿಸಿ ಫೈನಲ್ ಗೆ ಲಗ್ಗೆ ಹಾಕಿದ್ದು ಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತವನ್ನು ಎದುರಿಸಲಿದೆ.

ಈ ಏಷ್ಯಾ ಕಪ್ ಸರಣಿಯಲ್ಲಿ ಬಾಂಗ್ಲಾದೇಶ ಮತ್ತು ಭಾರತ ಉಭಯ ತಂಡಗಳ ಬಲಾಬಲ.
* ಭಾರತ ಐದು ಬಾರಿ ಕಪ್ ಗೆದ್ದುಕೊಂಡಿದೆ. ಆದರೆ, ಟ್ವೆಂಟಿ20 ಮಾದರಿಯಲ್ಲಿ ಭಾರತಕ್ಕೂ ಇದು ಮೊದಲ ಫೈನಲ್ ಪಂದ್ಯವಾಗಿದೆ.
* 2012ರಲ್ಲಿ ಪಾಕಿಸ್ತಾನ ವಿರುದ್ಧದ ಫೈನಲ್ ನಲ್ಲಿ 2 ರನ್ ಗಳಿಂದ ಸೋಲು ಕಂಡಿದ್ದು ಬಾಂಗ್ಲಾದೇಶದ ಸಾಧನೆ.

All you need to know about Asia Cup 2016 Final between India and Bangladesh

ಭಾರತ.
* ಬಾಂಗ್ಲಾದೇಶ ವಿರುದ್ಧ 45 ರನ್ ಗಳಿಂದ ಗೆಲವು.
* ಪಾಕಿಸ್ತಾನ ವಿರುದ್ಧ 5 ವಿಕೆಟ್ ಗಳ ಜಯ.
* ಶ್ರೀಲಂಕಾ ವಿರುದ್ಧ 5 ವಿಕೆಟ್ ಗಳ ಗೆಲವು
* ದುರ್ಬಲ ಯುಎಇ ವಿರುದ್ಧ 9 ವಿಕೆಟ್ ಗಳ ಅಮೋಘ ಜಯ.

ಬಾಂಗ್ಲಾದೇಶ
* ಭಾರತ ವಿರುದ್ಧ 45 ರನ್ ಗಳಿಂದ ಸೋಲು.
* ಯುಎಇ ವಿರುದ್ಧ 51 ರನ್ ಗಳ ಗೆಲವು.
* ಶ್ರೀಲಂಕಾ ವಿರುದ್ಧ 23 ರನ್ ಗಳ ಗೆಲವು.
* ಪಾಕಿಸ್ತಾನ ವಿರುದ್ಧ 5 ವಿಕೆಟ್ ಗಳ ಗೆಲವು.

ಹೀಗೆ ಎರಡು ತಂಡಗಳ ಬಲಾಬಲ ನೋಡಿದರೆ ಭಾರತ ತಂಡ ಸತತ 4 ಗೆಲವು ಪಡೆದುಕೊಂಡು ಸರಣಿ ತನ್ನದಾಗಿಸುವ ಆತ್ಮವಿಶ್ವಾಸದಲ್ಲಿದೆ. ನಾನೇನು ಕಡಿಮೆ ಇಲ್ಲದ್ದಂತೆ ಬಾಂಗ್ಲಾ, 3 ಪಂದ್ಯಗಳನ್ನು ಗೆದ್ದು ಹಾರತ ಗೆಲುವಿನ ಓಟಕ್ಕೆ ಫೈನಲ್ ಪಂದ್ಯದಲ್ಲಿ ಬ್ರೇಕ್ ಹಾಕಿ ಚಾಂಪಿಯನ್ ಆಗುವ ತವಕದಲ್ಲಿದೆ.

ಒಟ್ಟಿನಲ್ಲಿ ಬಾಂಗ್ಲಾದೇಶದ ಮಿರ್ ಪುರ್ ನ ಶೇರ್-ಇ-ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂ ದಾಯಾದಿಗಳ ಕದನಕ್ಕೆ ವೇದಿಕೆ ಸಜ್ಜಾಗಿದ್ದು ಈ ಭಾನುವಾರ ಕ್ರಿಕೆಟ್ ಅಭಿಮಾನಿಗಳಿಗೆ ಸಖತ್ ಸಂಡೇ ಆಗುವುದಂತೂ ಸತ್ಯ.

ಟೀಂ ಇಂಡಿಯಾ ತಂಡ :
ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಉಪನಾಯಕ), ಶಿಖರ್ ಧವನ್, ಅಜಿಂಕ್ಯಾ ರಹಾನೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಮಹಮ್ಮದ್ ಶಮಿ, ರವೀಂದ್ರ ಜಜೇಜಾ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಪವನ್ ನೇಗಿ, ಆಶಿಶ್ ನೆಹ್ರಾ.

ಬಾಂಗ್ಲಾದೇಶ: ಮಶ್ರಾಫ್ ಬಿನ್ ಮುರ್ತಝಾ (ನಾಯಕ), ಶಾಕಿಬ್ ಅಲ್ ಹಸನ್, ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮುಹಮ್ಮದ್ ಮಿಥುನ್, ಮಹಮುದುಲ್ಲಾ, ಮುಶ್ಫಿಕುರ್ ರಹೀಂ, ಶಬ್ಬೀರ್ ರೆಹ್ಮಾನ್, ನಾಸಿರ್ ಹುಸೇನ್, ನೂರುಲ್ ಹಸನ್, ಅರಾಫತ್ ಸನ್ನಿ, ಮುಸ್ತಾಫಿಝುರ್ ರೆಹ್ಮಾನ್, ಅಲ್-ಅಮಿನ್ ಹುಸೇನ್, ತಸ್ಕಿನ್ ಅಹ್ಮದ್ ಹಾಗೂ ಅಬೂ ಹೈದರ್ ರೋನಿ.

(ಒನ್ಇಂಡಿಯಾ ಕನ್ನಡ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Asia Cup 2016 final will be contested between India and Bangladesh on Sunday (March 6) at the Sher-e-Bangla National Stadium in Mirpur.
Please Wait while comments are loading...