ಹೃದಯಾಘಾತಕ್ಕೊಳಗಾಗಿ ಯುವ ಕ್ರಿಕೆಟರ್ ನಿಧನ

Posted By:
Subscribe to Oneindia Kannada

ಬೆಂಗಳೂರು, ಜೂನ್ 20:ಧಾರವಾಡ ವಲಯವನ್ನು ಪ್ರತಿನಿಧಿಸುತ್ತಿದ್ದ ಭರವಸೆಯ ಯುವ ಆಟಗಾರ ಶುಭಮ್‌ ಗೌತಮ್‌ (20) ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂಡರ್ 23 ಅಂತರ ವಲಯ ಕ್ರಿಕೆಟ್ ಟೂರ್ನಮೆಂಟ್ ಆಡಲುಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.ಮಾರ್ಗಮಧ್ಯದಲ್ಲಿ ಗೌತಮ್ ಗೆಹೃದಯಾಘಾತವಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ನ ಅಧಿಕಾರಿಗಳು ತಿಳಿಸಿದ್ದಾರೆ.

Young Cricketer from Dharwad Shubham Gowtham dies of Heart Attack

ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ಪ್ರತಿನಿಧಿಸುತ್ತಿದ್ದ ಶುಭಂ ಗೌತಮ್ ಅವರು ಬಲಗೈ ವೇಗದ ಬೌಲರ್ ಆಗಿದ್ದರು. ಬೆಂಗಳೂರಿನ ಯಂಗ್ ಲಯನ್ಸ್ ತಂಡದ ಪರವೂ ಕೆಲ ಕಾಲ ಆಡಿದ್ದರು. ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ (ಎಚ್‌ಪಿಎಲ್‌) ಟೂರ್ನಿಯಲ್ಲಿ ಮುಂಡಗೋಡ ತಂಡದ ಪರ ಆಡಿದ್ದರು.

ಬೆಂಗಳೂರಿನ ಆದಿತ್ಯ ಗ್ಲೋಬಲ್‌ ಮೈದಾನದಲ್ಲಿ ಮಂಗಳವಾರ ಆರಂಭವಾದ ಮೈಸೂರು ವಿರುದ್ಧದ ಪಂದ್ಯದಲ್ಲಿ ಧಾರವಾಡ ವಲಯವನ್ನು ಪ್ರತಿನಿಧಿಸಲು ಬೆಂಗಳೂರಿಗೆ ಸಹ ಆಟಗಾರರ ಜತೆ ಬರುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Young Cricketer from Dharwad division of Karnataka State Cricket Association (KSCA) Shubham Gowtham(20) dies of Heart attack. He was on the way to Bengaluru from Hubballi to play a cricket match.
Please Wait while comments are loading...