ಟೆಸ್ಟ್ ಶ್ರೇಯಾಂಕ : ಯಾಸಿರ್ ಗೆ ಅಗ್ರಸ್ಥಾನ, ಅಶ್ವಿನ್ ನಂ.2

Posted By:
Subscribe to Oneindia Kannada

ಬೆಂಗಳೂರು, ಜುಲೈ 18: ಅತಿಥೇಯ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹತ್ತು ವಿಕೆಟ್ ಪಡೆದು ದಾಖಲೆ ಬರೆದ ಸ್ಪಿನ್ನರ್ ಯಾಸಿರ್ ಶಾ ಅವರು ಐಸಿಸಿ ಪ್ರಕಟಿಸಿರುವ ಇತ್ತೀಚಿನ ಟೆಸ್ಟ್ ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಭಾರತದ ಆರ್ ಅಶ್ವಿನ್ ಎರಡನೇ ಸ್ಥಾನದಲ್ಲೇ ಸ್ಥಿರವಾಗಿದ್ದರೆ, ನಂ. 1 ಸ್ಥಾನದಿಂದ ಇಂಗ್ಲೆಂಡಿನ ಜೇಮ್ಸ್ ಆಂಡರ್ಸನ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಲಾರ್ಡ್ಸ್ ಟೆಸ್ಟ್ ಪಂದ್ಯದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನೂತನ ಟೆಸ್ಟ್ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದೆ.
ಭುಜನೋವಿನಿಂದ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುದ ಕಾರಣ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅವರು ಮೊದಲ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆಫ್ ಸ್ಪಿನ್ನರ್ ಅಲ್ಲದೆ ಆರ್. ಅಶ್ವಿನ್ ಅಲ್ಲದೆ ಟಾಪ್ 10 ಪಟ್ಟಿಯಲ್ಲಿ ಸ್ಪಿನ್ನರ್ ರವೀಂದ್ರ ಜಡೇಜ ಆರನೇ ಸ್ಥಾನದಲ್ಲಿದ್ದಾರೆ.

Yasir Shah becomes No. 1 Test bowler; first Pakistani to top ICC rankings after 20 years

ಸುಮಾರು 40 ವರ್ಷಗಳ ನಂತರ ಲಾರ್ಡ್ಸ್ ನಲ್ಲಿ 10 ವಿಕೆಟ್ ಸಾಧನೆ ಮಾಡಿದ ಯಾಸಿರ್ ಶಾ ಅವರು ಐಸಿಸಿ ಶ್ರೇಯಾಂಕ ಪಟ್ಟಿಗೇರಿದ್ದು ಸಾಧನೆಯಾಗಿದೆ. 2005 ರಲ್ಲಿ ಲೆಗ್ ಸ್ಪಿನ್ನರ್ ಆಸ್ಟ್ರೇಲಿಯಾ ಸ್ಪಿನ್ನರ್ ಶೇನ್ ವಾರ್ನ್ ಅಗ್ರಸ್ಥಾನ ಗಳಿಸಿದ್ದರು.

ಇದಾದ ಬಳಿಕ ಲೆಗ್ ಸ್ಪಿನ್ನರ್​ ರೊಬ್ಬರು ನಂ.1 ಸ್ಥಾನ ಪಡೆದಿದ್ದಾರೆ. ಯಾಸಿರ್ ಅವರು 13 ಟೆಸ್ಟ್ ಪಂದ್ಯಗಳಲ್ಲಿ 86 ವಿಕೆಟ್​ಗಳಿಸುವ ಮೂಲಕ ತ್ವರಿತಗತಿಯಲ್ಲಿ 100 ವಿಕೆಟ್ ಗಳಿಸುವ ಗುರಿ ಹೊಂದಿದ್ದಾರೆ. ಈ ದಾಖಲೆ ಸದ್ಯಕ್ಕೆ ಇಂಗ್ಲೆಂಡ್ ವೇಗಿ ಜಾರ್ಜ್ ಲೋಹ್ನನ್ ಹೆಸರಿನಲ್ಲಿದೆ. ಜಾರ್ಜ್ 16 ಟೆಸ್ಟ್ ಪಂದ್ಯದಲ್ಲಿ 100 ವಿಕೆಟ್​ಗಳಿಸಿದ ಸಾಧನೆ ಮಾಡಿದ್ದಾರೆ.

ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ(18/07/2016 ರಂತೆ)
ಬೌಲಿಂಗ್ ವಿಭಾಗ:
1. ಯಾಸಿರ್ ಶಾ (ಪಾಕಿಸ್ತಾನ)
2. ಆರ್. ಅಶ್ವಿನ್ ( ಭಾರತ)
3. ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್)
4. ಸ್ಟುವರ್ಟ್ ಬ್ರಾಡ್ ( ಇಂಗ್ಲೆಂಡ್ )
5. ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ)
6. ರವೀಂದ್ರ ಜಡೇಜ (ಭಾರತ)
7. ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್)
8. ಜೋಶ್ ಹೇಜಲ್ ವುಡ್ (ಆಸ್ಟ್ರೇಲಿಯಾ)
9. ಮಾರ್ನೆ ಮಾರ್ಕೆಲ್ (ದಕ್ಷಿಣ ಆಫ್ರಿಕಾ)
10. ವೆರ್ನಾನ್ ಫಿಲ್ಯಾಂಡರ್ (ದಕ್ಷಿಣ ಆಫ್ರಿಕಾ)

ಬ್ಯಾಟಿಂಗ್ ವಿಭಾಗ:

1. ಸ್ಟೀವನ್ ಸ್ಮಿತ್- ಆಸ್ಟ್ರೇಲಿಯ
2. ಕೇನ್ ವಿಯಮ್ಸನ್ - ನ್ಯೂಜಿಲೆಂಡ್
3. ಹಶಿಮ್ ಆಮ್ಲ - ದ. ಆಫ್ರಿಕ
4. ಜೋ ರುಟ್ - ಇಂಗ್ಲೆಂಡ್
5. ಎ.ಬಿ ಡಿವಿಲಿಯರ್ಸ್ - ದ. ಆಪ್ರಿಕ
(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Pakistan's legspinner Yasir Shah today (July 18) became the number one Test bowler in the world after bowling his side to a 75-run victory over England at Lord's on Sunday (July 17).
Please Wait while comments are loading...