ಕೊನೆ ಓವರ್ ನಲ್ಲಿ ಪಾಂಡ್ಯಾಗೆ ಧೋನಿ ನೀಡಿದ್ದ ಸಲಹೆ ಏನು?

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಮಾರ್ಚ್ 24 : ಕೊನೆ ಎಸೆತ ವರೆಗೂ ಅಭಿಮಾನಿಗಳಲ್ಲಿ ಎದೆ ಬಡಿತ ಹೆಚ್ಚಿಸಿ ತೀವ್ರ ಕುತೂಹಲ ಮೂಡಿಸಿದ್ದ ಭಾರತ ಮತ್ತು ಬಾಂಗ್ಲಾದೇಶದ ನಡುವಣ ಪಂದ್ಯದಲ್ಲಿ ಕೊನೆ ಓವರ್ ಗೂ ಮುನ್ನ ಟೀಂ ಇಂಡಿಯಾ ಚುಟುಕು ಮೀಟಿಂಗ್ ನಡೆಸಿತು. ಪಾಂಡ್ಯಾಗೆ ನಾಯಕ ಧೋನಿ ಏನು ಸಲಹೆ ನೀಡಿದರು ಎಂಬ ಕುತೂಹಲದ ಪ್ರಶ್ನೆಗೆ ಇಲ್ಲಿದೆ ಉತ್ತರ...

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಮಾರ್ಚ್ 23 ರಂದು ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡೋ-ಭಾಂಗ್ಲಾ ನಡುವಿನ ರೋಚಕ ಪಂದ್ಯದಲ್ಲಿ ಕೊನೆ ಓವರ್ ನಲ್ಲಿ ಬಾಂಗ್ಲಾ ಗೆಲ್ಲಲು 11 ರನ್ ಅವಶ್ಯಕವಿತ್ತು.[ವಿಶ್ವ ಟಿ20: ಕೊನೆ ಓವರ್ ಥ್ರಿಲ್ಲರ್, ಧೋನಿ, ಪಾಂಡ್ಯ ಸೂಪರ್]

ಕೊನೆ ಓವರ್ ಬೌಲ್ ಮಾಡಲು ಬಂದ ಹಾರ್ದಿಕ್ ಪಾಂಡ್ಯಾ ಅವರಿಗೆ ನಾಯಕ ಧೋನಿ ಯಾವುದೇ ಕಾರಣಕ್ಕೂ ಯಾರ್ಕರ್ ಎಸೆತವನ್ನು ಎಸೆಯ ಬೇಡ ಬದಲಾಗಿ ಲೈನ್ ಅಂಡ್ ಲೆನ್ತ್ ಡೆಲೆವರಿ ಮಾಡು ಎಂದು ಪಾಂಡ್ಯಾಗೆ ಸಲಹೆಯನ್ನು ನೀಡಿದ್ದರಂತೆ.[ಕ್ಯಾಪ್ಟನ್ ಕೂಲ್ ಧೋನಿಗೆ ಸಿಟ್ಟು ಬಂದಿದ್ದು ಏಕೆ?]

Told Hardik Pandya not to bowl yorker: MS Dhoni

ಆದರೆ, ಒತ್ತಡದಲ್ಲಿ ಹೇಳೋದು ಸುಲಭ ಆದರೆ ಮಾಡಿ ತೋರಿಸೋದು ಬಹಳ ಕಷ್ಟವಾದರೂ ಹಾರ್ದಿಕ್ ಪಾಂಡ್ಯಾ ನಾಯಕ ಧೋನಿ ಹೇಳಿದಂತೆ ಬೌಲ್ ಮಾಡಿ ಬಾರತದ ಗೆಲುವಿನ ರೂವಾರಿಯಾದರು. ಹೀಗಂತ ನಾಯಕ ಮಹೇಂದ್ರ ಸಿಂಗ್ ಧೋನಿ ಪಂದ್ಯ ಗೆದ್ದ ಬಳಿಕ ಮಾತನಾಡಿ ಪಾಂಡ್ಯಾ ಸಾಮಾರ್ಥ್ಯಕ್ಕೆ ನಾಯಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. [ಭಾರತಕ್ಕೆ ರೋಚಕ ಜಯ]

ಕೊನೆ ಓವರ್ ನಲ್ಲಿ ಅನುಭವಿ ಬೌಲರ್ ಆಶೀಶ್ ನೆಹ್ರಾ ಜತೆ ಧೋನಿ ಚರ್ಚೆ ನಡೆಸಿದಾದರೂ ಆದರ ಬಗ್ಗೆ ಎಲ್ಲಾವನ್ನು ಹೇಳಲು ಆಗುವುದಿಲ್ಲವೆಂದು ಹೇಳಿದರು. ಕೊನೆ ಓವರ್ ನಲ್ಲಿ ಶತಾಯ ಗತಾಯವಾಗಿ ಪಂದ್ಯವನ್ನು ಗೆಲ್ಲಲು ತಂತ್ರಗಳನ್ನು ರೂಪಿಸಲು ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿರುವ ಧೋನಿ ಕೊನೆ ಓವರ್ ಆಗಿದ್ದರಿಂದ ನನ್ನ ಮೇಲೆ ದಂಡ ವಿಧಿಸುವುದಿಲ್ಲವೆಂದು ಟೀಂ ಇಂಡಿಯಾ ಕ್ಯಾಪ್ಟನ್ ಸ್ಪಷ್ಟನೆ ನೀಡಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mahendra Singh Dhoni was all praise for young Hardik Pandya, who held his nerve during the last few moments of the ICC World Twenty20 match and executed the instructions brilliantly by not bowling a yorker to Shuvagato Hom, which could have turned into a full toss
Please Wait while comments are loading...