ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ಟಿ20: ಕೊನೆ ಓವರ್ ಥ್ರಿಲ್ಲರ್, ಧೋನಿ, ಪಾಂಡ್ಯ ಸೂಪರ್

By Mahesh

ಬೆಂಗಳೂರು, ಮಾರ್ಚ್ 24: ಹತ್ತು ಹಲವು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಮತ್ತೊಂದು ರೋಚಕ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ಕಣ್ತುಂಬಿಕೊಂಡರು.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ | ಟೂರ್ನಿಗೆ ಫುಲ್ ಗೈಡ್

ವಿಶ್ವ ಟಿ20 ಸೂಪರ್ 10ರ ಹಂತದ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 1 ರನ್ ಗಳ ರೋಚಕ ಜಯ ದಾಖಲಿಸಿತು. ಎಲ್ಲರೂ ಹಾರ್ದಿಕ್ ಪಾಂಡ್ಯ ಎಸೆದ ಕೊನೆ ಓವರ್ ಬಗ್ಗೆಯೇ ಚರ್ಚಿಸುತ್ತಿದ್ದಾರೆ. ಈ ಓವರ್ ನ ವಿಡಿಯೋ, ನಂತರ ವಿಜಯೋತ್ಸವದ ಚಿತ್ರಗಳು ಇಲ್ಲಿವೆ.['ಕ್ಯಾಪ್ಟನ್ ಕೂಲ್' ಧೋನಿಗೆ ಸಿಟ್ಟು ಬಂದಿದ್ದು ಏಕೆ?]

2007ರ ವಿಶ್ವ ಕಪ್ ಟಿ20ಯ ಕೊನೆ ಓವರ್ ನಲ್ಲಿ ಪಾಕಿಸ್ತಾನ ವಿರುದ್ಧ ಗೆಲುವು ತಂದುಕೊಟ್ಟ ಜೋಗಿಂದರ್ ಶರ್ಮ ಅವರನ್ನು ನೆನಪಿಸಿದ ಹಾರ್ದಿಕ್ ಪಾಂಡ್ಯ ಹೊಸ ಹೀರೋ ಎಂದು ಅನೇಕರು ಕೊಂಡಾಡಿದ್ದಾರೆ. [ಪಾಂಡ್ಯಾಗೆ ಧೋನಿ ನೀಡಿದ್ದ ಸಲಹೆ ಏನು?]

India vs Bangladesh Last Over thriller


ಇನ್ನು ಕೆಲವರು, ಇದೆಲ್ಲ ಧೋನಿ ಮಾಡಿದ ಚಾಕಚಕ್ಯತೆ, ಉಸೇನ್ ಬೋಲ್ಟ್ ನಂತೆ ವೇಗವಾಗಿ ಓಡಿ ರನೌಟ್ ಮಾಡದಿದ್ದರೆ, ಸೂಪರ್ ಓವರ್ ಆಡಬೇಕಿತ್ತು ಅಷ್ಟೇ. ಕೊನೆ ಎಸೆತವನ್ನು ಹೇಗೆ ಎಸೆಯಬೇಕು ಎಂಬುದು ಹೇಳಿಕೊಟ್ಟಿದ್ದು ಧೋನಿ ನೆನಪಿರಲಿ ಎಂದು ಹೇಳಿದ್ದಾರೆ.

ಯಾರು ಏನೇ ಹೇಳಲಿ ಬೆಂಗಳೂರಿನಲ್ಲಿ ಪಾಂಡ್ಯ ಎಸೆದ 20ನೇ ಓವರ್ ಸಕತ್ ರೋಚಕವಾಗಿದ್ದಂತೂ ಸತ್ಯ. ಈ ಓವರ್ ನ ರೀವೆಂಡ್ ಇಲ್ಲಿದೆ. [ಗವಾಸ್ಕರ್ ವಿರುದ್ಧ ಧೋನಿ, ಬಿಗ್ ಬಿ ಕಿಡಿಕಾರಿದ್ದೇಕೆ?]

* ಪಂದ್ಯ ಗೆಲ್ಲಲು 147 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ ಕೊನೆ ಓವರ್ ನಲ್ಲಿ 11 ರನ್ ಗಳಿಸಲು ಗುರಿ ಪಡೆದಿತ್ತು.
* ಹಾರ್ದಿಕ್ ಪಾಂಡ್ಯ ಕೊನೆ ಓವರ್ ನಲ್ಲಿ ನೀಡಿದ ರನ್: 1,4,4, ವಿಕೆಟ್, ವಿಕೆಟ್, ವಿಕೆಟ್.

* ಬಾಂಗ್ಲಾದೇಶ 145/9 ಕ್ಕೆ ನಿಯಂತ್ರಿಸಿದ ಭಾರತದಿಂದ ವಿಜಯೋತ್ಸವ.[ಗೆಲ್ಲುವುದಕ್ಕೆ ಮುಂಚೆ ಸಂಭ್ರಮಿಸಿದ ರಹೀಮ್‌ಗೆ ರೈನಾ ಪಂಚ್]

19.1: ಮಹಮದುಲ್ಲಾಗೆ ಪಾಂಡ್ಯ ನೇರವಾದ ಎಸೆತ,ಕವರ್ಸ್ ವಿಭಾಗಕ್ಕೆ ತಳ್ಳಿ 1ರನ್ ಗಳಿಕೆ.

19.2: ಮುಷ್ಫಿಕರ್ ಗೆ ಪಾಂಡ್ಯರಿಂದ ನಿಧಾನಗತಿಯ ಶಾರ್ಟ್ ಆಫ್ ಲೆನ್ತ್ ಎಸೆತ, ಕವರ್ಸ್ ಮೇಲೆ ಬಾರಿಸಿದ ಮುಷ್ಫಿಕರ್ ಗೆ 4 ರನ್. ಬಾಂಗ್ಲಾಕ್ಕೆ ಗೆಲ್ಲಲು 4 ಎಸೆತಗಳಲ್ಲಿ 6ರನ್ ಬೇಕಿತ್ತು.

19.3: ಮುಷ್ಫಿಕರ್ ಗೆ ಪಾಂಡ್ಯರಿಂದ ಎಸೆತ, ಸ್ಕೂಪ್ ಹೊಡೆತ ಬಾರಿಸಿ ಧೋನಿ ಹಿಂಬದಿಯಲ್ಲಿ ಸಾಗಿದ ಚೆಂಡು ಬೌಂಡರಿ ಗೆರೆ ದಾಟಿತು.

19.4: ಈ ಬಾರಿ ನಿಧಾನಗತಿಯ ಶಾರ್ಟ್ ಲೆನ್ತ್ ಎಸೆತ ಹಾಕಿದ ಪಾಂಡ್ಯಗೆ ಯಶಸ್ಸು, ಡೀಪ್ ಮಿಡ್ ವಿಕೆಟ್ ಕ್ಷೇತ್ರದಲ್ಲಿ ಸಿಕ್ಸ್ ಎತ್ತಲು ಹೋದ ಮುಷ್ಫಿಕರ್ ಅವರು ಶಿಖರ್ ಧವನ್ ಗೆ ಕ್ಯಾಚಿತ್ತು ಔಟ್.

19.5: ಈ ನಡುವೆ ಕ್ರೀಸ್ ಬದಲಾಯಿಸಿದ್ದ ಮಹಮದ್ದುಲ್ಲಾ ಬ್ಯಾಟಿಂಗ್, ಫುಲ್ ಟಾಸ್ ಎಸೆತವನ್ನು ಸ್ಕ್ವೇರ್ ಲೆಗ್ ಕ್ಷೇತ್ರದಲ್ಲಿ ಬಾರಿಸಲು ಹೋಗಿ ಜಡೇಜ ಹಿಡಿದ ಉತ್ತಮ ಕ್ಯಾಚಿಗೆ ಬಲಿ.

19.6 : ಕೊನೆ ಎಸೆತದಲ್ಲಿ 2 ರನ್ ಬೇಕಿತ್ತು. ಯಾರ್ಕರ್ ಹಾಕಬೇಡ ಎಂದು ಧೋನಿಯಿಂದ ಪಾಂಡ್ಯಗೆ ಸಲಹೆ. ಬೌನ್ಸರ್ ಹಾಕುವ ಬಗ್ಗೆ ಚಿಂತನೆ ನಡೆದಿತ್ತು ಎಂದು ಅಶ್ವಿನ್ ಹೇಳಿಕೆ. ಪಾಂಡ್ಯ ಎಸೆತವನ್ನು ಚೆಚ್ಚಲು ಆಗದೆ ರನ್ ಕದಿಯಲು ಯತ್ನಿಸಿದ ಮುಷ್ತಫಿಜುರ್ ರಹಮಾನ್ ರನೌಟ್. ಭಾರತಕ್ಕೆ 1 ರನ್ ಜಯ. [ಕೊನೆ ಓವರ್ ವಿಡಿಯೋ ನೋಡಿ]



(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X